More

    ಜೀವ ವೈವಿಧ್ಯತೆಯ ಶ್ರೀಮಂತಿಕೆಗೆ ಸಾಕ್ಷಿ ಮಾಗಡಿ ಕೆರೆ

    ಲಕ್ಷ್ಮೇಶ್ವರ: ಗದಗ ಜಿಲ್ಲೆಯ ಮಾಗಡಿ ಪಕ್ಷಿಧಾಮಕ್ಕೆ ರಾಮ್ಸರ್ ಕನ್ವೆನ್ಷನ್ ಅಡಿಯಲ್ಲಿ ರಾಮ್ಾರ್ ಸೈಟ್ (ಜೌಗು ಪ್ರದೇಶ) ಅಂತಾರಾಷ್ಟ್ರೀಯ ಮಾನ್ಯತೆ ದೊರಕಿರುವುದು ಜಿಲ್ಲೆಯ ಜೀವ ವೈವಿಧ್ಯತೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.

    ಅಂತಾರಾಷ್ಟ್ರೀಯ ಜಾಗತಿಕ ಪ್ರಾಮುಖ್ಯತೆಯ ಆರ್ದ್ರ ಭೂಮಿಗಳ ಜಾಗತಿಕ ಪಟ್ಟಿಗೆ ಕೇಂದ್ರ ಸರ್ಕಾರ ಹೊಸದಾಗಿ 5 ಭಾರತೀಯ ಜೌಗು ಪ್ರದೇಶಗಳನ್ನು ಸೇರಿಸಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.

    ಭಾರತವು ಈ ಮೊದಲು 75 ರಾಮ್ಾರ್ ತಾಣಗಳನ್ನು ಹೊಂದಿತ್ತು. ಈಗ ಆ ಸಂಖ್ಯೆಯನ್ನು 80ಕ್ಕೆ ಹೆಚ್ಚಿಸಿದೆ. ಅದರಲ್ಲಿ ಕರ್ನಾಟಕದ 3 ತಾಣಗಳನ್ನು ಘೊಷಿಸಿದೆ. ರಾಜ್ಯದ ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ, ಅಘನಾಶಿನಿ ನದಿಮುಖ ಮತ್ತು ಗದಗ ಜಿಲ್ಲೆಯ ಮಾಗಡಿ ಕೆರೆ ಸಂರಕ್ಷಣಾ ಮೀಸಲು ಪ್ರದೇಶವಾಗಿವೆ.

    ಶಿರಹಟ್ಟಿ ತಾಲೂಕಿನ ಮಾಗಡಿ ಮತ್ತು ಹೊಳಾಪುರ ಗ್ರಾಮಗಳ ನಡುವೆ 134.37 ಎಕರೆ ಪ್ರದೇಶದಲ್ಲಿ ಕೆರೆ ಹರಡಿಕೊಂಡಿದೆ. ಈ ಬಗ್ಗೆ ರಾಜ್ಯ ಸರ್ಕಾರ 2022ರಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ರಂಗನತಿಟ್ಟು ಪಕ್ಷಿಧಾಮ ಕರ್ನಾಟಕದ ಮೊದಲ ರಾಮ್ಾರ್ ಸೈಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಸಿಗಲಿದೆ ಕಾನೂನು ರಕ್ಷಣೆ: ಇಲ್ಲಿಗೆ ಬರುವ ವಿದೇಶಿ ಹಕ್ಕಿಗಳ ದೃಷ್ಟಿಕೋನದಿಂದ ಈ ಸೈಟ್​ಗಳಿಗೆ ಕಾನೂನು ರಕ್ಷಣೆ ಸಿಗಲಿದೆ. ಕೆರೆಯು ಸರ್ವತೋಮುಖ ಅಭಿವೃದ್ಧಿ ಹೊಂದಿ ವಿಶ್ವಮಾನ್ಯ ಪ್ರವಾಸಿ ತಾಣವಾಗಲಿದೆ. ರಾಮ್ಾರ್ ಪಟ್ಟಿಯ ಗುರಿಯು ಜೌಗು ಪ್ರದೇಶಗಳ ಅಂತಾರಾಷ್ಟ್ರೀಯ ಜಾಲವನ್ನು ಅಭಿವೃದ್ಧಿಪಡಿಸುವುದು ಮತ್ತು ನಿರ್ವಹಿಸುವುದು. ಇದು ಜಾಗತಿಕ ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ಮಾನವ ಜೀವನ ಉಳಿಸಿಕೊಳ್ಳಲು ಹಾಗೂ ಅವುಗಳ ಪರಿಸರ ವ್ಯವಸ್ಥೆಯ ಘಟಕಗಳು, ಪ್ರಕ್ರಿಯೆಗಳು ಮತ್ತು ಪ್ರಯೋಜನಗಳ ನಿರ್ವಹಣೆಯ ಮೂಲಕ ಮುಖ್ಯವಾಗಿದೆ ಎನ್ನುತ್ತಾರೆ ಪಕ್ಷಿ ತಜ್ಞ ಮಂಜುನಾಥ ನಾಯಕ.

    ಉತ್ತರ ಕರ್ನಾಟಕದ ರಂಗನತಿಟ್ಟು ಎಂದು ಕರೆಯುವ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿರುವ ಸುಮಾರು 134.37 ಎಕರೆ ವಿಸ್ತಾರವಾದ ಕೆರೆಗೆ ಪ್ರತಿ ವರ್ಷ ನವೆಂಬರ್ ತಿಂಗಳ ಮೊದಲ ವಾರ ಬರುವ ವಿದೇಶಿ ಅತಿಥಿಗಳು ಚಳಿಗಾಲದವರೆಗೂ ಬೀಡು ಬಿಟ್ಟು ಆತಿಥ್ಯ ಸ್ವೀಕರಿಸಿ ಮತ್ತೆ ಸ್ವದೇಶಕ್ಕೆ ಹಾರಿ ಹೋಗುತ್ತದೆ.

    ಜೀವ ವೈವಿಧ್ಯತೆಯ ಶ್ರೀಮಂತಿಕೆಗೆ ಸಾಕ್ಷಿ ಮಾಗಡಿ ಕೆರೆ

    ಸ್ವಚ್ಛಂದವಾಗಿ ತೇಲುತ್ತಿವೆ ವಿದೇಶಿ ಪಕ್ಷಿಗಳು

    ಮಂಗೋಲಿಯಾ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಬರ್ವ, ಭೂತಾನ್ ಮತ್ತು ಜಮ್ಮು- ಕಾಶ್ಮೀರದ ಲಡಾಕ್​ನಿಂದ ಆಗಮಿಸುವ ವಿದೇಶಿ ಪಕ್ಷಿಗಳೂ ಸೇರಿ ದೇಶೀಯ ಪಕ್ಷಿಗಳು ಶೆಟ್ಟಿಕೆರೆಯಲ್ಲಿ ಸ್ವಚ್ಛಂದವಾಗಿ ತೇಲುತ್ತಿವೆ. ಆ ದೇಶಗಳಲ್ಲಿನ ಸರೋವರಗಳು ಚಳಿಗಾಲದ ವೇಳೆ ಹೆಪ್ಪುಗಟ್ಟುವುದರಿಂದ ಇಲ್ಲಿನ ಹಿತಕರ ವಾತಾವರಣ, ಆಹಾರ, ಆಶ್ರಯ ಅರಸಿ ಮಾಗಡಿ ಕೆರೆ ಜೌಗು ಪ್ರದೇಶಗಳತ್ತ ಹಾರಿ ಬಂದು 4 ತಿಂಗಳ ಕಾಲ ಸ್ವಚ್ಛಂದವಾಗಿ ವಿಹರಿಸುತ್ತವೆ. ಸಾವಿರಾರು ಕಿ.ಮೀ. ದೂರದಿಂದ ಪ್ರತಿ ವರ್ಷ ಬರುವ ಪಕ್ಷಿಗಳಲ್ಲಿ ಪ್ರಮುಖವಾಗಿ ಬಾರ್ ಹೆಡೆಡ್ ಗೀಸ್, ಡೊಮಿಸಿಲ್ ಕ್ರೇನ್, ಬ್ರಾಹ್ಮಿಣಿಡಕ್, ಪೇಟೆಂಡ್ ಸ್ಪಾರ್ಕ್, ವೈಟ್​ಇಬಿಸ್, ಬ್ಲಾಕ್ ಹೆಡೆಡ್ ಇಬೀಸ್, ಜತೆಗೆ ವರಟೆ ( ಸ್ಪಾಟ್ ಬಿಲ್ಡ್ ಡಕ್), ನೀರು ಕಾಗೆ ( ಕೋರ್​ವೊರೆಂಟ್), ನೆರಳೆ ಜಂಬು ಕೋಳಿ (ವರ್ಷಲ್ ಮೋರ್ ಹೆನ್) ಬೂದು ಮಂಗಟೆ ಹಕ್ಕಿ ( ಗ್ರೇ ಹಾರ್ನ್ ಬಿಲ್) ಹಾಗೂ ಇತ್ತೀಚೆಗೆ ನೀರು ನಾಯಿಗಳು ಕೂಡ ಕೆರೆಯಲ್ಲಿ ವಿಹರಿಸುವುದು ಕಂಡುಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts