More

    ಹೇಗಿದೆ ನೋಡಿ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣದ 3ಡಿ ಅನಿಮೇಶನ್ ವಿಡಿಯೋ!

    ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀರಾಮಮಂದಿರದ 3ಡಿ ಅನಿಮೇಶನ್ ವಿಡಿಯೊವನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಇಂದು ಬಿಡುಗಡೆ ಮಾಡಿದೆ.

    ಐದು ನಿಮಿಷಗಳ ಈ ವಿಡಿಯೋದಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ತಾಂತ್ರಿಕ ಅಂಶಗಳನ್ನು ನಿರ್ದಿಷ್ಟವಾಗಿ ವಿವರಿಸಲಾಗಿದೆ. 10 ಎಕರೆಯಲ್ಲಿ ದೇವಸ್ಥಾನ, 57 ಎಕರೆಯಲ್ಲಿ ಪ್ರಾರ್ಥನಾ ಸಭಾಂಗಣ, ಉಪನ್ಯಾಸ ಮಂದಿರ, ವಸ್ತು ಸಂಗ್ರಹಾಲಯ, ಕೆಫೆಟೇರಿಯಾ ಮುಂತಾದವುಗಳನ್ನು ಒಳಗೊಂಡ ಕಾಂಪ್ಲೆಕ್ಸ್ ನಿರ್ಮಾಣವಾಗಲಿದೆ. ಇಂತಹ ಇನ್ನೂ ಹಲವು ವಿವರಗಳು ಈ ವಿಡಿಯೋದಲ್ಲಿ ಇವೆ.

    ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ಮಾಡಿದರು, ನಂತರ ರಾಮ ಮಂದಿರ ನಿರ್ಮಾಣ ಕಾರ್ಯವು ವೇಗವಾಗಿ ಪ್ರಾರಂಭವಾಯಿತು.

    ಡಿಸೆಂಬರ್‌ನೊಳಗೆ ರಾಮ್‌ಲಲ್ಲಾ:

    2022ರ ಆಗಸ್ಟ್‌ ವೇಳೆಗೆ ನೆಲಮಹಡಿಯನ್ನು ಪೂರ್ಣಗೊಳಿಸಿ, ಸ್ತಂಭಗಳನ್ನು ನಿರ್ಮಿಸುವ ಮೂಲಕ ಮುಖ್ಯ ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಲಾಗುವುದು. ಡಿಸೆಂಬರ್‌ ವೇಳೆಗೆ ರಾಮಲಲ್ಲಾನನ್ನು ಗರ್ಭಗುಡಿಯಲ್ಲಿ ಕೂರಿಸುವ ಮೂಲಕ ದರ್ಶನ ಆರಂಭಿಸುವುದಾಗಿ ದೇವಸ್ಥಾನದ ಟ್ರಸ್ಟ್‌ ಈಗಾಗಲೇ ಘೋಷಣೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts