More

    ಭೀಮ ಮಂದಿರ ನಿರ್ಮಿಸಿ: ಅನಿಲ ಮೆಣಸಿನಕಾಯಿ

    ರಾಮನ ಮಂದಿರವು ಸಮಾನತೆಯ ಪ್ರತಿಕವಾಗಿದೆ. ಮಂದಿರ ನಿರ್ಮಾಣದಿಂದ ಐದು ಶತಮಾನಗಳ ಹಿಂದೂಗಳ ಹೋರಾಟ ಅಂತ್ಯ ಕಂಡಿದೆ. ಬಯಸಿದಂತೆ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿಮಿರ್ಸಿ ಬಾಲರಾಮನನ್ನು ಪ್ರತಿಷ್ಠಾಪಿಸಲಾಗಿದೆ. ಅದೇ ರೀತಿ ರಾಮನ ಜೀವನ ಸಂದೇಶ ಸಾರುವ ಅಯೋಧ್ಯೆ ರಾಮ ಮಂದಿರದಂತೆ, ಸಂವಿಧಾನ ಶಿಲ್ಪಿ ಅಂಬೇಡ್ಕರ್​ ಅವರ ಜೀವನ ಸಂದೇಶವನ್ನು ಸಾರುವ ಭೀಮ ಮಂದಿರ ನಿರ್ಮಾಣ ಅವಶ್ಯಕತೆ ಇದೇ ಎಂದು ಅನಿಲ ಮೆಣಸಿನಕಾಯಿ ತಿಳಿಸಿದ್ದಾರೆ.
    ಈ ಕುರಿತು ಪ್ರಕಟಣೆ ನೀಡಿರುವ ಅವರು, 2014ರಿಂದ ಈಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಂಬೇಡ್ಕರ್​ ಅವರಿಗೆ ಸಂಬಂಧಿಸಿದ ಜನ್ಮಭೂಮಿ, ಶಿಕ್ಷಾ ಭೂಮಿ, ದೀಕ್ಷಾ ಭೂಮಿ, ಮಹಾಪರಿನಿರ್ವಾಣ ಭೂಮಿ ಹಾಗೂ ಚೈತ್ಯಭೂಮಿ ಈ ಐದು ಸ್ಥಳಗಳು ಯಾತ್ರಾ ಸ್ಥಳಗಳಾಗಿ ಮಾರ್ಪಾಡುಗುತ್ತಿವೆ. ಅಂಬೇಡ್ಕರ್​ ಅವರ ಗೌರವಾರ್ಥವಾಗಿ ಈ ಐದು ಸ್ಥಳಗಳನ್ನು ಪಂಚತೀರ್ಥ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೀಗಾಗಿ ಶ್ರೀದಲ್ಲೇ ಅಯೋಧ್ಯೆಯ ರಾಮಮಂದಿರದಂತೆ ಪ್ರಧಾನಿ ನರೇಂದ್ರ ಮೋದಿಯವರು ಮುಂಬೈನ ಚೈತ್ಯಭೂಮಿಯಲ್ಲಿ ಭೀಮಮಂದಿರ ನಿಮಿರ್ಸಬೇಕು ಎಂದು ತಿಳಿಸಿದ್ದಾರೆ.
    ಜಗತ್ತಿನಾದ್ಯಂತ ರಾಮನಾಮ ಜಪ ಕೇಳಿ ಬರುತ್ತಿದೆ. ಅನೇಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿ ನಾನೂ ಕೂಡ ಒಬ್ಬ. ಸಮಾನತೆಯಯನ್ನು ಸಂವಿಧಾನ ಮೂಲಕ ಜಾರಿ ತರಲು ಶ್ರಮೀಸಿದ ಡಾ. ಬಿ.ಆರ್​. ಅಂಬೇಡ್ಕರ ಅವರ ಮಂದಿರ ನಿರ್ಮಾಣ ಆಗಬೇಖು ಎನ್ನುವುದು ಆಶಯವಾಗಿದೆ. ಬಸವಣ್ಣನವರ ಸಮಾನತೆಯ ತತ್ವವನ್ನು ಪ್ರೇರಣೆಯಾಗಿಸಿಕೊಂಡು ದೇಶದ ಪ್ರತಿಯೊಬ್ಬ ಪ್ರಜೆ ಗೌರವಯುತವಾಗಿ ಸಮಾಜದಲ್ಲಿ ಸಮಾನತೆಯಿಂದ ಬದುಕಬೇಕೆಂಬ ನಿಟ್ಟಿನಲ್ಲಿ ಸಮಾನತೆ, ವ್ಯಕ್ತಿ ಸ್ವಾತಂರ್ತ್ಯ, ಬ್ರಾತೃತ್ವ, ಜಾತ್ಯಾತಿತ ತತ್ವಗಳ ಮೂಲಭೂತ ಆಶಯಗಳನ್ನು ಹೊಂದಿರುವ ಶ್ರೇಷ್ಠ ಸಂವಿಧಾನ ನೀಡಿದ ಕೀತಿರ್ ಡಾ.ಬಿ.ಆರ್​.ಅಂಬೇಡ್ಕರ್​ ಅವರಿಗೆ ಸಲ್ಲುತ್ತದೆ ಎಂದು ಅನಿಲ ಮೆಣಸಿಕಾಯಿ ಪ್ರಕಟಣೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts