More

    ಗದಗನಲ್ಲಿ ಬಿಜೆಪಿ ಯುವ ಸಮಾವೇಶ. ಕಾಂಗ್ರೆಸ್ ಹಲವು ನಾಯಕರು ಬಿಜೆಪಿಗೆ ಸೇರ್ಪಡೆ

    ವಿಜಯವಾಣಿ ಸುದ್ದಿಜಾಲ ಗದಗ,

    ಅನ್ನಭಾಗ್ಯ ಯೋಜನೆಯ ಪ್ರತಿ ಕೆಜಿ ಅಕ್ಕಿಗೆ ಕೇಂದ್ರ ಸರ್ಕಾರ 29 ರೂ. ನೀಡುತ್ತಿದೆ. ಆದರೆ, ಅನ್ನಭಾಗ್ಯ ಯೋಜನೆ ನಮ್ಮದೇ ಎಂದು ಕಾಂಗ್ರೆಸ್ ಬಿಂಬಿಸುತ್ತದೆ. ಇದು ಇತಿಹಾಸದಲ್ಲೇ ಅಚ್ಚಳಿದು ಉಳಿಯಬಹುದಾದ ಬಹುದೊಡ್ಡ ಸುಳ್ಳು ಎಂದು ಸಚಿವ ಸಿ.ಸಿ. ಪಾಟೀಲ ವ್ಯಂಗ್ಯವಾಡಿದರು.

    ಗದಗಿನ ಬೆಟಗೇರಿ ಭಾಗದ ತೆಂಗಿನಕಾಯಿಯ ಬಾಜಾರ್ ನಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಯುವ ಸಮಾವೇಶ ಮತ್ತು ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಗದಗಿನ ಬೆಟಗೇರಿ ಭಾಗದ ತೆಂಗಿನಕಾಯಿ ಬಾಜಾರ್ ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಯುವ ಸಮಾವೇಶ ಮತ್ತು ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಗದಗ ನಗರದ ರಸ್ತೆ ಅಭಿವೃದ್ಧಿಗೆ 56 ಕೋಟಿ ಅನುದಾನ ಲೋಕೋಪಯೋಗಿ ಇಲಾಖೆಯಿಂದ ವ್ಯಯಿಸಿದ್ದೇವೆ. ವರ್ತೂಲ್ ರಸ್ತೆಗೂ ಅನುದಾನ ಬಿಡುಗಡೆ ಮಾಡಲಿದ್ದೇವೆ. ಗದಗ ಜಿಮ್ಸ್ ಆಸ್ಪತ್ರೆ ಮೇಲ್ದರ್ಜೆಗೆ ಹೆಚ್ಚಿಸಿ, ಗದಗ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳು ಜಿಮ್ಸ್ ಆಸ್ಪತ್ರೆಯಲ್ಲಿ  ಉತ್ತಮ ಚಿಕಿತ್ಸೆ ದೊರೆಯುವಂತೆ ಬಿಜೆಪಿ ಕ್ರಮ ಕೈಗೊಂಡಿದೆ ಎಂದರು.

    ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಸಿ.ಸಿ. ಪಾಟೀಲ ನೇತೃತ್ವದಲ್ಲಿ ಗದಗ ಜಿಲ್ಲೆ ಈ ಬಾರಿ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಲಿದೆ. ಅದಕ್ಕೆ ಪೂರಕವಾಗಿ ಗದಗಿನ ಬೆಟಗೇರಿ ಭಾಗ ಸಂಪೂರ್ಣ ಕಾಂಗ್ರೆಸ್ ಮುಕ್ತವಾಗಿದೆ. ಹುಲಕೋಟಿ ಗೌಡರನ್ನು(ಎಚ್.ಕೆ. ಪಾಟೀಲ) ತೊರೆದು, ನಮ್ಮ ನರಗುಂದ ಗೌಡರ(ಸಿ.ಸಿ.ಪಾಟೀಲ) ನೇತೃತ್ವದಲ್ಲಿ ಹಲವು ಕಾಂಗ್ರೆಸ್ ನಾಯಕರು ಇಂದು ಬಿಜೆಪಿ ಸೇರ್ಪಡೆ ಗೊಂಡಿದ್ದಾರೆ ಎಂದರು. ಜಾಲವಾಡಗಿ ಏತ ನೀರಾವರಿಗೆ 197 ಕೋಟಿ ಬಿಡುಗಡೆ ಮಾಡಿ ಇನ್ನೊಂದು ವಾರದೊಳಗೆ ಗುದ್ದಲಿ ಪೂಜೆಯನ್ನು ಬಿಜೆಪಿ ಸರ್ಕಾರ ನೆರವೇರಿಸಲಿದೆ ಎಂದು ಅನಿಲ ಮೆಣಸಿನಕಾಯಿ ಹೇಳಿದರು.

    ರಾಜು ಕುರಡಗಿ, ನಾಗೇಶ್ ಹುಬ್ಬಳ್ಳಿ,  ಎಸ್.ವಿ. ಸಂಕನೂರು, ಸಿದ್ದು ಪಲ್ಲೇದ, ಶಿವಣ್ಣ ಮುಳಗುಂದ ರವಿಕಾಂತ ಅಂಗಡಿ, ಡಾ. ಸಂದೀಪ ಇತರರು ಇದ್ದರು.

    ಕೋಟ್:
    ಸಿದ್ದರಾಮಯ್ಯ ಅವರಿಗೆ ಕೇಸರಿ, ಕುಂಕುಮ ಕಂಡರೆ ಏಕೋ ಸಿಟ್ಟು ಮತ್ತು ಆಕ್ರೋಶವಿದೆ.
    ಡಾ. ಸಂದೀಪ್, ರಾಜ್ಯ ಯುವಾಧ್ಯಕ್ಷ.

    ಕೋಟ್:
    ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಜೀತದಾಳಾಗಿದ್ದೆ. ನನ್ನನ್ನು ಚೈನ್ ಹಾಕಿ, ಕಟ್ಟಿ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಇಂದು ಕೊಠಡಿಯಿಂದ ಬಿಡುಗಡೆಗೊಂಡು ಬಿಜೆಪಿ ಪಕ್ಷ ಸ್ವೀಕರಿಸಿ ಸ್ವತಂತ್ರ ಆಗಿದ್ದೇನೆ.
    ಶಿವಣ್ಣ ಮುಳಗುಂದ, ಮಾಜಿ ನಗರಸಭೆ ಅಧ್ಯಕ್ಷ.
    (ಬಿಜೆಪಿ ಸೇರ್ಪಡೆಗೊಂಡವರು)

    *ಬಾಕ್ಸ್*
    ಕಾಂಗ್ರೆಸ್ ನಾಯಕರು ಗದಗಿಗೆ ಗಟಾರು ನೀರನ್ನು ಕುಡಿಸುತ್ತೇವೆ ಎಂದಿದ್ದನ್ನು ಗದಗ ಜನರು ಮರೆತಿಲ್ಲ. ಅನುದಾನವೇ ಇಲ್ಲದೇ ಎಲ್ಲ ಸಮುದಾಯಕ್ಕೆ ಲಕ್ಷ ಲಕ್ಷ ರೂ. ನೀಡುತ್ತೇನೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ. ಹುಲಕೋಟಿ ನಾಯಕರನ್ನು ಹುಲಕೋಟಿಗೆ ಸೀಮಿತಗೊಳಿಸಿ ಜಿಲ್ಲೆಯಲ್ಲಿ ಬಿಜೆಪಿ ಅರಳವಂತೆ ಜನರು ತೀರ್ಮಾನಿಸಿದ್ದಾರೆ ಎಂದು ಅನಿಲ ಮೆಣಸಿನಕಾಯಿ ಹೇಳಿದರು.

    *ಬಾಕ್ಸ್:*
    ಕಾಂಗ್ರೆಸ್ ಪುಣ್ಯತಿಥಿ:
    ಬಾದಾಮಿ ಮತ್ತು ಗದಗ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಎಸಗಿದ ತಪ್ಪಿನಿಂದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜೀವಂತವಿದೆ. ನಮ್ಮ ಕಾರ್ಯಕರ್ತರು ನಿಷ್ಠುರವಾಗಿ ಇದ್ದಿದ್ದರೆ ಕಾಂಗ್ರೆಸ್ಸಿನ 5ನೇ ಪುಣ್ಯತಿಥಿ ಜರಗುತ್ತಿತ್ತು. ಈ ಬಾರಿ ತಪ್ಪು ಮರುಕಳಿಸಬಾರದು. ಟಿಕೆಟ್ ಆಕಾಂಕ್ಷಿಗಳು ಹಲವರಿದ್ದಾರೆ. ಆದರೆ, ಟಿಕೆಟ್ ಘೋಷಣೆ ನಂತರ ಎಲ್ಲರು ಒಟ್ಟಾಗಿ ಪಕ್ಷಕ್ಕೆ ದುಡಿಯಬೇಕು ಎಂದು ವೇದಿಕೆ ಮೇಲಿದ್ದ ಟಿಕೆಟ್ ಆಕಾಂಕ್ಷಿಗಳಿಗೆ ಸಿ.ಸಿ.ಪಾಟೀಲ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts