More

    ವಿಜಯಸಂಕಲ್ಪ ಯಾತ್ರೆ ಗದಗನಲ್ಲಿ ರೋಡ್ ಶೋ

    ಗದಗ:
    ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಗುತುವಾರ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದರು.
    ನಗರದ ಮುಳಗುಂದ ನಾಕಾದಿಂದ ಆರಂಭವಾದ ರೋಡ್ ಶೋ ರಾಚೋಟೇಶ್ವರ ದೇವಸ್ಥಾನ ರಸ್ತೆ, ಬಸವೇಶ್ವರ ಸರ್ಕಲ್, ಸ್ಟೇಷನ್ ರಸ್ತೆ, ಮಹೇಂದ್ರಕರ್ ಸರ್ಕಲ್ ಮಾರ್ಗವಾಗಿ ಸಾಗಿ ಬಂದಿತು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಪುಷ್ಪ ವೃಷ್ಠಿ ಮಾಡಿ‌ ಸ್ವಾಗತಿಸಿದರು.
    ರೋಡ್ ಶೋನಲ್ಲಿ ಸಚಿವರಾದ ಸಿ.ಸಿ. ಪಾಟೀಲ, ಗೋವಿಂದ ಕಾರಜೋಳ, ಸಂಸದ ಶಿವಕುಮಾರ್ ಉದಾಸಿ, ಮುಖಂಡ ಅನಿಲ‌ಮೆಣಸಿನಕಾಯಿ, ಸೇರಿ ಹಲವಾರು ನಾಯಕರು ಭಾಗಿಯಾಗಿದ್ದರು. ಅನಿಲ ಮೆಣಸಿನಕಾಯಿ ಡೊಳ್ಳಿ ಬಾರಿಸಿ ಗಮನ ಸೆಳೆದರು.
    ರೋಡ್ ಶೋನಲ್ಲಿ ನೂರಾರು ಬೈಕ್ ಗಳ ರ್ಯಾಲಿ, ಆಟೋ ರ್ಯಾಲಿ ನಡೆಯಿತು. ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಜಯಘೋಷ ಹಾಕುತ್ತ ಸಾಗಿದರು.


    ಬಾಕ್ಸ್.
    ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾಣಿ ಮಾತನಾಡಿ, ಮುಂಬರುವ ಕರ್ನಾಟಕ ಚುನಾವಣೆ ರಾಜ್ಯದ ಚುನಾವಣೆಯಲ್ಲ, ರಾಷ್ಟ್ರ ಮಟ್ಟದ ಚುನಾವಣೆಯಾಗಿದೆ. ಸತ್ವಯುತ ಮಣ್ಣಿನ ಕುರಿತು ಭಕ್ತಿಯನ್ನು ಪ್ರಕಟಿಸಬೇಕಾದ ಸಮಯ ಇದಾಗಿದೆ. ರಾಹುಲ್ ಗಾಂಧಿ ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿದ್ದಾರೆ. ಭಾರತೀಯತೆಯನ್ನೇ ಮೈಗೂಡಿಸಿಕೊಂಡಿರುವ ಬಿಜೆಪಿ ಕಾರ್ಯಕರ್ತರು ದೇಶಾಭಿಮಾನಿ ಮತದಾರರು ದೇಶ ವಿರೋಧಿ ಕಾಂಗ್ರೆಸ್ ಪಕ್ಷವನ್ನು ದಿಕ್ಕರಿಸುವ ಸೂಕ್ತ ನಿರ್ಣಯ ಕೈಕೊಳ್ಳಲು ಇದು ಸೂಕ್ತ ಸಮಯವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts