More

    ಮತ್ತೊಂದು ದಾಖಲೆಗೆ ಸಜ್ಜು: ಜಪಾನ್​ನಲ್ಲೂ ತೆರೆ ಕಾಣಲಿದೆ RRR!

    ನವದೆಹಲಿ: ಎಸ್​ಎಸ್​ ರಾಜಮೌಳಿ ನಿರ್ದೇಶನದ ಬ್ಲಾಕ್​ಬಸ್ಟರ್​ ಸಿನಿಮಾ ಇದೀಗ ಜಪಾನ್​ನಲ್ಲೂ ತೆರೆ ಕಾಣುತ್ತಿದೆ.

    ಬರುವ ಅಕ್ಟೋಬರ್​ನಲ್ಲಿ ಈ ಚಿತ್ರ ಜಪಾನ್​ನಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ. 1920ರಲ್ಲಿ ಬ್ರಿಟೀಷ್ ಆಳ್ವಿಕೆಯ ಸಮಯದಲ್ಲಿನ ಕಥೆಯನ್ನಾಧರಿಸಿರುವ ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಇತಿಹಾಸವನ್ನೇ ಬರೆದಿದೆ.

    ನೆಟ್​ಫ್ಲಿಕ್ಸ್ ಹಾಗೂ ಒಟಿಟಿಯಲ್ಲೂ ಭಾರತದ ಅತಿ ಹೆಚ್ಚು ಜನಪ್ರಿಯ ಚಿತ್ರಗಳಲ್ಲಿ ಆರ್​ಆರ್​ಆರ್​ ಮೊದಲ ಸ್ಥಾನ ಪಡೆದುಕೊಂಡಿದೆ. ಹೊರದೇಶದಲ್ಲೂ ಆರ್​ಆರ್​ಆರ್​ಗೆ ಭಾರೀ ಬೇಡಿಕೆ ಇದೆ.

    ಬಾಹುಬಲಿ, ಕೆಜಿಎಫ್​​ ಹಾಗೂ ಆರ್​ಆರ್​ಆರ್​ ಈ ಮೂರು ಚಿತ್ರಗಳು ಗಳಿಕೆಯಲ್ಲಿ ದಾಖಲೆಯನ್ನೇ ಬರೆದಿದೆ. ಮೇ ತಿಂಗಳಲ್ಲಿ ಬಿಡುಗಡೆಯಾದ ಚಿತ್ರ ಭಾರೀ ದಾಖಲೆಯನ್ನು ಬರೆದಿತ್ತು. ರಾಮಚರಣ್​ ಹಾಗೂ ಜೂನಿಯರ್​ ಎನ್​ಟಿಆರ್​ ಚಿತ್ರದ ಪ್ರಮುಖ ಪಾತ್ರದಲ್ಲಿದ್ದು, ಆಲಿಯಾಭಟ್​, ಅಜಯ್​ ದೇವಗನ್​ ಕೂಡ ಈ ಚಿತ್ರದಲ್ಲಿದ್ದಾರೆ.ಸದ್ಯ ಅಕ್ಟೋಬರ್​ 21ರಂದು ಜಪಾನ್​ನಲ್ಲೂ ಚಿತ್ರ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts