More

    ಡೆಡ್ಲಿ 3 ಚಿತ್ರದಲ್ಲಿ ರಕ್ಷಿತಾ?; ಇದು ಸೋಮನ ಮುಂದುವರಿದ ಭಾಗ..

    ಬೆಂಗಳೂರು: ಶಿವರಾಜಕುಮಾರ್ ಅಭಿನಯದ ‘ತಾಯಿಯ ಮಡಿಲು’ ಚಿತ್ರದ ನಂತರ ರಕ್ಷಿತಾ ಪ್ರೇಮ್ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ಹಲವು ರಿಯಾಲಿಟಿ ಶೋಗಳಲ್ಲಿ ತೀರ್ಪಗಾರರಾಗಿ ಗುರುತಿಸಿಕೊಂಡಿರುವ ರಕ್ಷಿತಾ, ಇದೀಗ ಮತ್ತೆ ಬಣ್ಣ ಹಚ್ಚುತ್ತಾರಾ ಎಂಬ ಪ್ರಶ್ನೆಯೊಂದು ಕೇಳಿಬಂದಿದೆ. ಅದಕ್ಕೆ ಕಾರಣ ‘ಡೆಡ್ಲಿ 3’. ರವಿ ಶ್ರೀವತ್ಸ ಅಭಿನಯದ ‘ಡೆಡ್ಲಿ 3’ ಚಿತ್ರವು, 16 ವರ್ಷಗಳ ಹಿಂದೆ ಅವರೇ ನಿರ್ದೇಶಿಸಿದ್ದ ‘ಡೆಡ್ಲಿ ಸೋಮ’ ಚಿತ್ರದ ಮುಂದುವರಿದ ಭಾಗವಂತೆ.

    ಮೂಲ ಚಿತ್ರದಲ್ಲಿ ನಟಿಸಿದ್ದ ದೇವರಾಜ್, ಅವಿನಾಶ್ ಮುಂತಾದವರು ಈ ಚಿತ್ರದಲ್ಲೂ ತಮ್ಮ ಪಾತ್ರಗಳನ್ನು ಮುಂದುವರಿಸುತ್ತಿದ್ದಾರಂತೆ. ಇನ್ನು, ಆ ಚಿತ್ರದಲ್ಲಿ ಸೋಮನ ಹೆಂಡತಿ ಜ್ಯೋತಿ ಪಾತ್ರ ಮಾಡಿದ್ದ ರಕ್ಷಿತಾ ಸಹ, ಈ ಮುಂದುವರಿದ ಭಾಗದಲ್ಲಿ ಇರುತ್ತಾರಾ? ಎಂಬ ಪ್ರಶ್ನೆ ಸಹಜ. ಈ ಪ್ರಶ್ನೆಯನ್ನು ನಿರ್ದೇಶಕ ರವಿ ಶ್ರೀವತ್ಸ ಮುಂದಿಟ್ಟರೆ, ‘ಚಿತ್ರ ಬಿಡುಗಡೆಯಾದ ಮೇಲೆ ಒಟ್ಟಿಗೆ ಕುಳಿತು ನೋಡೋಣ. ಆಗ ಎಲ್ಲವೂ ಗೊತ್ತಾಗುತ್ತದೆ’ ಎಂದು ಸ್ಮೈಲ್ ಮಾಡುತ್ತಾರೆ. ಈ ಮೂಲಕ, ಚಿತ್ರದಲ್ಲಿ ರಕ್ಷಿತಾ ನಟಿಸುತ್ತಾರಾ? ಎಂಬ ಸಸ್ಪೆನ್ಸ್ ಕಾಯ್ದಿಟ್ಟುಕೊಂಡಿದ್ದಾರೆ.

    ‘ಡೆಡಿ ್ಲ 3’ ಚಿತ್ರದ ಚಿತ್ರೀಕರಣ 10 ದಿನಗಳಿಂದ ನಡೆಯುತ್ತಿದೆ. ಈಗಾಗಲೇ ಒಂದು ಫೈಟ್ ಮತ್ತು ಚೇಸ್ ದೃಶ್ಯಗಳ ಚಿತ್ರೀಕರಣ ಮುಗಿದಿದೆ. ನಾಯಕ ದೀಕ್ಷಿತ್ ಗ್ಲಾಸ್ ಬ್ರೇಕ್ ಮಾಡುವುದಕ್ಕೆ ಹೋಗಿ ಏಟು ಬಿದ್ದು, ಮೂಗಿಗೆ ಮೂರು ಹೊಲಿಗೆ ಬಿದ್ದಿದ್ದೂ ಆಗಿದೆ. ಮಂಗಳವಾರ, ನಾಯಕನ ಇಂಟ್ರೋಡಕ್ಷನ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ಇನ್ನೂ ಕೆಲವು ದಿನಗಳಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದು, ನಂತರ ಕಾಂಬೋಡಿಯಾ, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

    ಈ ಕುರಿತು ಮಾತನಾಡುವ ರವಿ ಶ್ರೀವತ್ಸ, ‘‘ಡೆಡ್ಲಿ ಸೋಮ’ ಎಲ್ಲಿಗೆ ಮುಗಿಯುತ್ತದೋ, ‘ಡೆಡ್ಲಿ 3’ ಅಲ್ಲಿಂದ ಮುಂದುವರೆಯುತ್ತದೆ. ಮೊದಲ ಭಾಗದಲ್ಲಿ ಸೋಮನ ಹೆಂಡತಿ ಗರ್ಭಿಣಿಯಾಗಿರುತ್ತಾಳೆ. ಅವಳ ಮಗ ಬೆಳೆದು ಮುಂದೇನಾಗುತ್ತಾನೆ ಎನ್ನುವುದು ಈ ಚಿತ್ರದ ಕಥೆ. ಬೆಂಗಳೂರು ಭೂಗತಲೋಕದಲ್ಲಿ ನಡೆದ ಹಲವು ಘಟನೆಗಳನ್ನು ಈ ಚಿತ್ರದಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ. ‘ಡೆಡ್ಲಿ 3’ ಚಿತ್ರದಲ್ಲಿ ದೀಕ್ಷಿತ್​ಗೆ ನಾಯಕಿಯಾಗಿ ಯಶಾ ಶಿವಕುಮಾರ್ ನಟಿಸುತ್ತಿದ್ದಾರೆ. ಶೋಭಾ ರಾಜಣ್ಣ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

    1 ರೂಪಾಯಿ ಸಹ ಬಿಡುವುದಿಲ್ಲ…

    ಡೆಡ್ಲಿ 3 ಚಿತ್ರದಲ್ಲಿ ರಕ್ಷಿತಾ?; ಇದು ಸೋಮನ ಮುಂದುವರಿದ ಭಾಗ..ರವಿ ಶ್ರೀವತ್ಸ ಕಳೆದ ವರ್ಷ ಮುತ್ತಪ್ಪ ರೈ ಕುರಿತು ‘ಎಂಆರ್’ ಚಿತ್ರ ಮಾಡುವುದಕ್ಕೆ ಮುಂದಾಗಿದ್ದು, ಅದಕ್ಕೆ ಆಕ್ಷೇಪ ವ್ಯಕ್ತವಾದಾಗ ‘ಡಿಆರ್’ ಎಂಬ ಚಿತ್ರ ಘೋಷಿಸಿದ್ದು, ಕೊನೆಗೆ ಅದನ್ನೂ ಬಿಟ್ಟು ಈಗ ‘ಡೆಡ್ಲಿ 3’ ಮಾಡುತ್ತಿರುವುದು ಗೊತ್ತೇ ಇದೆ. ಹಾಗಾದರೆ, ‘ಎಂಆರ್’ ಚಿತ್ರ ಶಾಶ್ವತವಾಗಿ ನಿಂತು ಹೋಯಿತಾ ಎಂದರೆ, ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎನ್ನುತ್ತಾರೆ ಅವರು. ‘‘ಎಂಆರ್’ ಚಿತ್ರವನ್ನು ಸ್ವಲ್ಪ ಮುಂದಕ್ಕೆ ಹಾಕಿದ್ದೇವೆ. ಆ ಚಿತ್ರವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಆ ಚಿತ್ರಕ್ಕೆ ಖರ್ಚು ಮಾಡಿದ ಒಂದೊಂದು ರೂಪಾಯಿಯನ್ನೂ ವಾಪಸ್ಸು ಪಡೆಯುತ್ತೇನೆ’ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts