More

    ಸಪ್ತ ಸಾಗರದಾಚೆ ಭಾವನೆಗಳ ಮಹಾಕಾವ್ಯ; ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ರಕ್ಷಿತ್ ಶೆಟ್ಟಿ ಸಿನಿಮಾ

    ಬೆಂಗಳೂರು: ರಕ್ಷಿತ್ ಶೆಟ್ಟಿ ಮಂಗಳವಾರ (ಜೂ. 6) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸದ್ಯ ಅಮೆರಿಕದಲ್ಲಿ ‘ರಿಚರ್ಡ್ ಆ್ಯಂಟನಿ’ ಚಿತ್ರದ ಸಿದ್ಧತೆಯಲ್ಲಿ ತೊಡಗಿರುವ ಅವರಿಗೆ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರತಂಡ ಹುಟ್ಟುಹಬ್ಬದ ಉಡುಗೊರೆಯಾಗಿ ಹೊಸ ಅಪ್‌ಡೇಟ್ ನೀಡಿದೆ.

    ಎರಡು ಭಾಗಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ನಿರ್ದೇಶಕ ಹೇಮಂತ್ ರಾವ್ ಘೋಷಿಸಿದ್ದಾರೆ. ‘ಸಪ್ತ ಸಾಗರಚಾಚೆ ಎಲ್ಲೋ ಸೈಡ್ ಎ’ ಮತ್ತು ‘ಸೈಡ್ ಬಿ’ ಶೀರ್ಷಿಕೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಬಗ್ಗೆ ಹೇಮಂತ್, ‘ಎರಡು ಭಾಗಗಳಲ್ಲಿ ಸಿನಿಮಾ ರಿಲೀಸ್ ಮಾಡಲಿದ್ದೇವೆ. ಜೂನ್ 9ರಂದು ರಕ್ಷಿತ್ ಅಮೆರಿಕದಿಂದ ಮರಳಲಿದ್ದಾರೆ. ಅವರ ಜತೆ ಚರ್ಚಿಸಿ, ಇದೇ ತಿಂಗಳ 15ರಂದು ಮೊದಲ ಭಾಗ ಯಾವಾಗ ಬಿಡುಗಡೆ ಎಂಬುದನ್ನು ಅಧಿಕೃತವಾಗಿ ಅನೌನ್ಸ್ ಮಾಡಲಿದ್ದೇವೆ. ಹಾಗಂತ ಎರಡು ಭಾಗಗಳ ರಿಲೀಸ್ ನಡುವೆ ಆರೇಳು ತಿಂಗಳ ಗ್ಯಾಪ್ ಇರುವುದಿಲ್ಲ. ಇದೊಂದು ಭಾವನಾತ್ಮಕ ಪಯಣದ ದೃಶ್ಯಮಹಾಕಾವ್ಯ ಎನ್ನಬಹುದು. ತೀವ್ರವಾದ ಭಾವನೆಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. ಥಿಯೇಟರ್‌ನಲ್ಲಿ ನೋಡಿ ಅನುಭವಿಸುವ ಸಿನಿಮಾ. ಹೀಗಾಗಿ ಕಡಿಮೆ ಅಂತರದಲ್ಲಿ ಎರಡೂ ಭಾಗಗಳು ರಿಲೀಸ್ ಆಗಲಿವೆ’ ಎಂದು ಮಾಹಿತಿ ನೀಡುತ್ತಾರೆ.

    ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಎರಡೂ ಭಾಗಗಳಲ್ಲಿ 140 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರು, ಶಿವಮೊಗ್ಗ, ಮಂಗಳೂರು, ದಾವಣಗೆರೆ, ದೊಡ್ಡಬಳ್ಳಾಪುರ ಸೇರಿದಂತೆ ಹಲವೆಡೆ ಶೂಟಿಂಗ್ ನಡೆಸಲಾಗಿದೆ. ಮೊದಲ ಭಾಗದಲ್ಲಿ ಒಂದು ಲುಕ್‌ನಲ್ಲಿ ಹಾಗೂ ಎರಡನೇ ಭಾಗದಲ್ಲಿ 25 ಕೆಜಿ ತೂಕ ಹೆಚ್ಚಿಸಿಕೊಂಡು ಮತ್ತೊಂದು ಲುಕ್‌ನಲ್ಲಿ ರಕ್ಷಿತ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಅದ್ವೆತ ಗುರುಮೂರ್ತಿ ಛಾಯಾಗ್ರಹಣವಿರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts