More

    ಖತರ್​ನಾಕ್​ ‘ರಾಕ್ಷಸರ’ನ್ನು ಬೇಟೆ ಆಡಲು ಹೊರಟ ಸಾಯಿಕುಮಾರ್​ …

    ಬೆಂಗಳೂರು: ಒಂದು ಕಾಲದಲ್ಲಿ ಪೊಲೀಸ್​ ಪಾತ್ರಗಳಲ್ಲಿ ಅಬ್ಬರಸಿ ಬೊಬ್ಬಿರಿದಿದ್ದ ನಟ ಸಾಯಿಕುಮಾರ್​, ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಈಗ ಬಹಳ ದಿನಗಳ ನಂತರ ಅವರು ಪುನಃ ‘ರಾಕ್ಷಸರು’ ಎಂಬ ಚಿತ್ರದಲ್ಲಿ ಪೊಲೀಸ್​ ಯೂನಿಫಾರ್ಮ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು, ಡಿ. 16ಕ್ಕೆ ಚಿತ್ರವೇ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: 180 ಆಯ್ತು, ಈ ವರ್ಷ 200ರ ಕ್ಲಬ್​ ಸೇರುತ್ತದಾ ಕನ್ನಡ ಚಿತ್ರರಂಗ?

    ‘ರಾಕ್ಷಸ’ ಚಿತ್ರವು ಕನ್ನಡದಲ್ಲಿ ತಯಾರಾಗಿ, ಐದು ಭಾಷೆಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರವನ್ನು ರಮೇಶ್​ ಕಶ್ಯಪ್​ ತಮ್ಮ ಗರುಡಾದ್ರಿ ಸಿನಿಮಾಸ್​ನಡಿ ನಿರ್ಮಿಸಿದ್ದು, ರಜತ್​ ನಿರ್ದೇಶನ ಮಾಡಿದ್ದಾರೆ. ಇನ್ನು, ಸೆಂಟಿಮೆಂಟ್​ ಚಿತ್ರಗಳಿಗೆ ಕಥೆ-ಚಿತ್ರಕಥೆ ಬರೆಯುವಲ್ಲಿ ಜನಪ್ರಿಯರಾಗಿರುವ ಅಜಯ್​ ಕುಮಾರ್​, ಮೊದಲ ಬಾರಿಗೆ ಕ್ರೈಂ ಕಥೆಯೊಂದಕ್ಕೆ ಕಥೆ ಬರೆದಿದ್ದಾರೆ.

    ‘ರಾಕ್ಷಸರು’ ಎಂಬ ಹೆಸರು ಮತ್ತು ಪೋಸ್ಟರ್​ ನೋಡಿದರೆ, ಚಿತ್ರದ ಕಥೆ ಏನಿರಬಹುದು ಎಂದು ಗೊತ್ತಾಗುತ್ತದೆ. ಈ ಚಿತ್ರದಲ್ಲಿ ಐದು ಜನ ಕ್ರಿಮಿನಲ್ ಗಳು ಮಾಡಬಾರದ ದುಷ್ಕೃತ್ಯಗಳನ್ನು ಮಾಡಿ ತಲೆ ಮರಸಿಕೊಂಡಿರುತ್ತಾರೆ. ಅವರನ್ನು ಪೊಲೀಸರು ಹೇಗೆ ಹುಡುಕುತ್ತಾರೆ? ಎಂಬುದೇ ಕಥಾಹಂದರ. ಈ ಚಿತ್ರವನ್ನು ಆರಕ್ಷಕರಿಗೆ ಅರ್ಪಿಸಲಾಗುತ್ತಿದೆಯಂತೆ.

    ಈ ಚಿತ್ರದ ಕುರಿತು ಮಾತನಾಡುವ ಅವರು, ‘ನಾನು ನಟನೆ ಆರಂಭಿಸಿ, ಐವತ್ತು ವರ್ಷಗಳಾಗಿದೆ. ಅದರಲ್ಲೂ ಇಪ್ಪತ್ತೈದು ವರ್ಷಗಳ ಹಿಂದೆ ತೆರೆಕಂಡ ‘ಪೊಲೀಸ್‌ ಸ್ಟೋರಿ’ ನನಗೆ ಹೆಸರು ತಂದುಕೊಟ್ಟ ಚಿತ್ರ. ಈ ಸಮಯದಲ್ಲಿ ನಾನು ನನ್ನ ತಂದೆ – ತಾಯಿಯನ್ನು ಸ್ಮರಿಸುತ್ತೇನೆ. ‘ಹೆತ್ತವರು’ ಚಿತ್ರದ ನಂತರ ಅಜಯ್ ಕುಮಾರ್ ಅವರೊಂದಿಗೆ ‘ರಾಕ್ಷಸರು’ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ’ ಎನ್ನುತ್ತಾರೆ ಸಾಯಿಕುಮಾರ್​.

    ‘ಇಷ್ಟು ದಿನಗಳು ನಾನು ಸೆಂಟಿಮೆಂಟ್ ಕಥೆಗಳನ್ನೇ ಬರೆಯುತ್ತಿದ್ದೆ’ ಎನ್ನವ ಅಜಯ್​ ಕುಮಾರ್, ‘ಈ ಭಾರಿ ಅದಕ್ಕೆ ವಿರುದ್ಧವಾಗಿ ಮೊದಲ ಸಲ ಕ್ರೈಮ್, ಥ್ರಿಲ್ಲರ್, ಆ್ಯಕ್ಷನ್ ಕಥೆ ಮಾಡಿದ್ದೇನೆ. ಈ ಚಿತ್ರದಲ್ಲಿ ಹೆಚ್ಚು ಕ್ರೈಮ್ ತೋರಿಸಲಾಗಿದೆ. ಹಾಗಾಗಿ ಎಲ್ಲಾ ಭಾಷೆಗಳಲ್ಲೂ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳನ್ನು ತೆಗೆಯಲು ಹೇಳಿದರು‌. ಅದರಿಂದ ಸ್ವಲ್ಪ ವಿಳಂಬವಾಯಿತು. ಈಗ ಬಿಡುಗಡೆ ಹಂತಕ್ಕೆ ಬಂದಿದೆ. ನಮ್ಮ ಸುತ್ತಮುತ್ತ ನಡೆವ ಘಟನೆಗಳನ್ನೇ ತೆಗೆದುಕೊಂಡು ಕಥೆ ಮಾಡಲಾಗಿದೆ. ಚಿತ್ರದಲ್ಲಿ ಕ್ರೈಮ್ ಹೆಚ್ಚಾಗಿದ್ದರೂ, ಎಲ್ಲರೂ ನೋಡಲೇ ಬೇಕಾದ ಸಿನಿಮಾ ಇದು’ ಎನ್ನುತ್ತಾರೆ ಅವರು.

    ಇದನ್ನ ಓದಿ: ವಿಜಯಾನಂದ ಎಂಬ ಸುಂದರ ಪ್ರಯಾಣ: ಲಿವಿಂಗ್ ಲೆಜೆಂಡ್ ಪಾತ್ರ ಮಾಡಿದ ಖುಷಿಯಲ್ಲಿ ಭರತ್

    ಈ ಚಿತ್ರಕ್ಕೆ ಥ್ರಿಲ್ಲರ್​ ಮಂಜು ಎಂಟು ಫೈಟ್​ಗಳನ್ನು ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲ, ಒಂದು ಹಾಡಿಗೆ ನಿರ್ದೇಶನವನ್ನೂ ಅವರೇ ಮಾಡಿದ್ದಾರಂತೆ. ‘ಇದೊಂದು ಮೆಸೇಜ್ ಇರುವಂತಹ ಸುಂದರ ಸಿನಿಮಾ. ನಾನು ಸಿನಿಮಾ ನೋಡಿದ್ದೇನೆ. ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ.

    ಈ ಚಿತ್ರದಲ್ಲಿ ಸಾಯಿಕುಮಾರ್ ಜತೆಗೆ ತ್ರಿವೇಣಿ ರಾವ್, ಪುನೀತ್, ಅಂಜಿ, ಜಿತಿನ್ ಅವಿ, ಕಿರಣ್, ಸುನೀಲ್ ಮುಂತಾದವರು ನಟಿಸಿದ್ದಾರೆ. ಎರಡು ಹಾಡುಗಳಿರುವ ಈ‌ ಚಿತ್ರಕ್ಕೆ ಎಮಿಲ್ ಸಂಗೀತ ನೀಡಿದ್ದಾರೆ.

    ನಾಗಶೇಖರ್​ ಈಗ ‘ಪಾದರಾಯ; ‘ವಿಕ್ರಾಂತ್​ ರೋಣ’ ನಿರ್ಮಾಪಕರ ಹೊಸ ಚಿತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts