More

    ನಾಗಶೇಖರ್​ ಈಗ ‘ಪಾದರಾಯ; ‘ವಿಕ್ರಾಂತ್​ ರೋಣ’ ನಿರ್ಮಾಪಕರ ಹೊಸ ಚಿತ್ರ

    ಬೆಂಗಳೂರು: ‘ವಿಕ್ರಾಂತ್ ರೋಣ’ ನಂತರ ನಿರ್ಮಾಪಕ ಜಾಕ್​ ಮಂಜು ಹೊಸ ತಂಡ ಕಟ್ಟಿಕೊಂಡು ಒಂದಿಷ್ಟು ಚಿತ್ರಗಳನ್ನು ನಿರ್ಮಿಸುವುದಕ್ಕೆ ಹೆಜ್ಜೆ ಇಟ್ಟಿದ್ದರು. ಮೊದಲ ಪ್ರಯತ್ನವಾಗಿ ಅವರು, ‘ಪಾದರಾಯ’ ಎಂಬ ಹೊಸ ಚಿತ್ರವೊಂದನ್ನು ಘೋಷಿಸಿದ್ದಾರೆ. ಈ ಚಿತ್ರವನ್ನು ಚಕ್ರವರ್ತಿ ಚಂದ್ರಚೂಡ್​ ನಿರ್ದೇಶನ ಮಾಡುತ್ತಿದ್ದು, ನಾಗಶೇಖರ್​ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ‘ದಿ ಕಾಶ್ಮೀರ್​ ಫೈಲ್ಸ್​’ ಅಸಭ್ಯವಾಗಿತ್ತು ಎಂದ ಲ್ಯಾಪಿಡ್​ಗೆ ಜ್ಯೂರಿ ಸದಸ್ಯರ ಬೆಂಬಲ

    ಹನುಮಂತ ಜಯಂತಿಯ ಅಂಗವಾಗಿ ಸೋಮವಾರ ಸಂಜೆ, ಚಿತ್ರದ ಟೈಟಲ್​ ಪೋಸ್ಟರ್​ ಬಿಡುಗಡೆಯಾಗಿದೆ. ಈ ಚಿತ್ರವು ಕನ್ನಡವಲ್ಲದೆ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

    ಅಯ್ಯೋದ್ಯೆಯಲ್ಲಿ ನಡೆದ ನೈಜಘಟನೆಯನ್ನು ಆಧರಿಸಿ, ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ಚಂದ್ರಚೂಡ್​. ದೇಶವ್ಯಾಪಿ ಸುದ್ದಿ ಮಾಡಿದ ಈ ಘಟನೆಯನ್ನಾಧರಿಸಿ ಚಿತ್ರ ಮಾಡುತ್ತಿದ್ದಾರೆ. ನಿರ್ದೇಶಕರಾಗಿ ಇದು ಅವರ ಎರಡನೆಯ ಚಿತ್ರ. ಇನ್ನು, ನಾಗಶೇಖರ್​ ಈ ಚಿತ್ರದಲ್ಲಿ ನಾಯಕನಷ್ಟೇ ಅಲ್ಲ, ಜಾಕ್ ಮಂಜು ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.

    ಇದನ್ನೂ ಓದಿ: ರಾಜಸ್ತಾನದ ಅರಮನೆಯಲ್ಲಿ ಅದ್ದೂರಿಯಾಗಿ ನೆರವೇರಿತು ಹನ್ಸಿಕಾ-ಸೋಹೈಲ್​ ಮದುವೆ

    ಅಂಜನಾದ್ರಿ ಹಿನ್ನೆಲೆಯಲ್ಲಿ ಚಿತ್ರೀಕರಣ ನಡೆಯಲಿದ್ದು, ಸಂಕ್ರಾಂತಿ ನಂತರ ಶೂಟಿಂಗ್​ ಪ್ರಾರಂಭವಾಗಲಿದೆ. ಅಜನೀಶ್​ ಲೋಕನಾಥ್​ ಸಂಗೀತ ಮತ್ತು ಸತ್ಯ ಹೆಗಡೆ ಛಾಯಾಗ್ರಹಣ ಈ ಚಿತ್ರಕ್ಕಿದೆ. ತಮಿಳನ ಖ್ಯಾತ ಸಂಕಲನಕಾರ ಆಂಟೋನಿ ಈ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

    180 ಆಯ್ತು, ಈ ವರ್ಷ 200ರ ಕ್ಲಬ್​ ಸೇರುತ್ತದಾ ಕನ್ನಡ ಚಿತ್ರರಂಗ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts