More

    ಬಾಲಿವುಡ್​ ನಟಿ ರಾಖಿ ಸಾವಂತ್​ ಬಂಧನ; ಯಾಕೆ ಗೊತ್ತಾ?

    ಮುಂಬೈ: ರಾಖಿ ಸಾವಂತ್​ ಇತ್ತೀಚೆಗಷ್ಟೇ ಆದಿಲ್ ಖಾನ್ ದುರಾನಿ ಎಂಬಾತನನ್ನು ಮದುವೆಯಾಗಿರುವ ಸುದ್ದಿಯೊಂದು ಬಂದಿತ್ತು. ಅಷ್ಟೇ ಅಲ್ಲ, ಇಸ್ಲಾಂಗೆ ಧರ್ಮಕ್ಕೆ ರಾಖಿ ಸಾವಂತ್​​ ಮತಾಂತರಗೊಂಡ ಸುದ್ದಿಯೂ ಹೊರಬಿದ್ದಿತ್ತು. ಇದೀಗ ಅವರಿಗೆ ಸಂಕಷ್ಟ ಎದುರಾಗಿದೆ. ರಾಖಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಇದನ್ನೂ ಓದಿ: ಬಾಬುಗೆ ಕೋರ್ಟ್​ನಲ್ಲಿ ಜಯ; ‘ಸ್ವಾತಿಮುತ್ತಿನ ಮಳೆ ಹನಿಯೇ’ ಶೀರ್ಷಿಕೆಯನ್ನು ರಮ್ಯಾ ಬಳಸುವಂತಿಲ್ಲ!

    ರಾಖಿ ಸಾವಂತ್​ ಮದುವೆಯಾಗುವುದಕ್ಕೂ, ಮತಾಂತರಗೊಳ್ಳುವುದಕ್ಕೂ ಮತ್ತು ಅವರ ಬಂಧನವಾಗುವುದಕ್ಕೂ ಯಾವುದೇ ಸಂಬಂಧಿವಿಲ್ಲ. ಮುಂಬೈನ ಅಂಬೋಲಿ ಪೊಲೀಸರು ರಾಖಿಯನ್ನು ಬಂಧಿಸಿರುವುದಕ್ಕೆ ಬೇರೆಯದೇ ಕಾರಣವಿದೆ.

    ರಾಖಿ ವಿರುದ್ಧ ಮಾಡೆಲ್​ ಒಬ್ಬರು ದೂರು ನೀಡಿದ್ದಾರೆ. ತನ್ನ ಅನುಮತಿ ಇಲ್ಲದೆ ಫೋಟೋ ಮತ್ತು ವಿಡಿಯೋಗಳನ್ನು ಮಾಡಿ, ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮೂಲಕ ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಅಂಬೋಲಿ ಪೊಲೀಸರು ರಾಖಿಯನ್ನು ಬಂಧಿಸಿದ್ದು, ಆಕೆಯ ವಿಚಾರಣೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಸ್ಯಾಂಡಲ್​ವುಡ್​ ನಟ ಧನುಷ್​ ನಿಧನ; ಇಂದು ಅಂತ್ಯಕ್ರಿಯೆ

    ಇದಕ್ಕೂ ಮುನ್ನ, ಕಳೆದ ವರ್ಷ ರಾಖಿ ಮತ್ತು ಆಕೆಯ ಲಾಯರ್​ ಫಲ್ಘುಣಿ ಬ್ರಹ್ಮಭಟ್​ ವಿರುದ್ಧ ಎಫ್​.ಐ.ಆರ್​ ದಾಖಲಾಗಿತ್ತು. ಸಮಾರಂಭದಲ್ಲಿ ಅವರಿಬ್ಬರೂ ತಮ್ಮನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎಂದು ದೂರು ನೀಡಿದ್ದರು.

    ರಾಖಿ ಸಾವಂತ್ ಜತೆಗಿನ ಮದುವೆ ಫೇಕಾ..? ನಿಜವಾ..?; ಆದಿಲ್ ಹೇಳೋದೇನು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts