More

    ಭಾರತ ನಿರ್ಮಾಣಕ್ಕೆ ರಾಜೀವ್ ಗಾಂಧಿ ಕೊಡುಗೆ ಅಪಾರ

    ಚಿಕ್ಕಮಗಳೂರು: ಸ್ಥಳೀಯ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣಗೊಳಿಸಿ ರಾಷ್ಟ್ರದ ದಲಿತರು, ಹಿಂದುಳಿದವರು ಹಾಗೂ ಜನಸಾಮಾನ್ಯರಿಗೆ ಶಾಶ್ವತವಾಗಿ ಮೀಸಲಾತಿ ಕಲ್ಪಿಸಿದ ನಾಯಕ ರಾಜೀವ್‌ಗಾಂಧಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
    ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಏರ್ಪಡಿಸಿದ್ದ ಮಾಜಿ ಪ್ರಧಾನಿ ದಿ. ರಾಜೀವ್‌ಗಾಂಧಿ ಅವರ 33ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಮತದಾನದ ವಯಸ್ಸನ್ನು ಕಡಿಮೆಗೊಳಿಸುವುದು, ಪಂಚಾಯತ್ ರಾಜ್, ಟೆಲಿಕಾಂ ಮತ್ತು ಐಟಿ ಕ್ರಾಂತಿ ಬಲಪಡಿಸುವುದು ಮತ್ತು ನಿರಂತರ ಶಾಂತಿ ಒಪ್ಪಂದಗಳಂತಹ ಬಹು ಮಧ್ಯಸ್ಥಿಕೆಗಳ ಮೂಲಕ ರಾಜೀವ್‌ಗಾಂಧಿ ಭಾರತವನ್ನು ಪರಿವರ್ತಿಸಿದರು ಎಂದರು.
    ರಾಜೀವ್‌ಗಾಂಧಿ ಹತ್ಯೆಯಗದೆ ನಮ್ಮೊಂದಿಗೆ ಇದ್ದರೆ ದೇಶ ಇನ್ನಷ್ಟು ಬಲಿಷ್ಟವಾಗುವ ಜತೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ಕಾಣಲು ಸಾಧ್ಯವಾಗುತ್ತಿತ್ತು. ದುರಾದೃಷ್ಟ ಸಂಗತಿ ಇಂಥ ಮಹಾ ಮೇಧಾವಿ ನಾಯಕನನ್ನು ಕಳೆದುಕೊಂಡಿರುವುದು ದೇಶದ ದೊಡ್ಡ ದುರಂತ. ನೆಹರು ಹಾಗೂ ಇಂದಿರಾಗಾಂಧಿ ಪ್ರಧಾನಿಯಾದಗ ಭಾರತ ಹಲವಾರು ಯುದ್ಧಗಳನ್ನು ಎದುರಿಸಿ ವಿಜಯಶಾಲಿಯಾಗಿದೆ. ಆದರೆ ಅಂದಿನ ಸಮಯದಲ್ಲಿ ಹೆಚ್ಚಾಗಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳು ಇಲ್ಲದಿರುವುದರಿಂದ ಈ ವಿಷಯ ಜನತೆಗೆ ಸಮರ್ಪಕವಾಗಿ ಮುಟ್ಟಿಲ್ಲ ಎಂದರು.
    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪ ಗೌಡ, ಸಂಯೋಜಕ ಹಿರೇಮಗಳೂರು ರಾಮಚಂದ್ರ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಮಲ್ಲೇಶ ಸ್ವಾಮಿ, ನಗರಾಧ್ಯಕ್ಷ ತನೋಜ್‌ನಾಯ್ಡು, ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ನಗರಸಭೆ ಸದಸ್ಯರಾದ ಮುನೀರ್ ಅಹ್ಮದ್, ಜಾವೀದ್, ಶಾದಬ್ ಆಲಂ, ಮುಖಂಡರಾದ ಅನ್ಸರ್‌ಆಲಿ, ಜೇಮ್ಸ್ ಡಿಸೋಜಾ, ರಸೂಲ್‌ಖಾನ್, ಗುರುಮಲ್ಲಪ್ಪ, ಹುಣಸೇಮಕ್ಕಿ ಲಕ್ಷ್ಮಣ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts