More

    71ನೇ ವಸಂತಕ್ಕೆ ಕಾಲಿಟ್ಟ ತಲೈವಾಗೆ ಶುಭಾಶಯಗಳ ಮಹಾಪೂರ: ರಜನಿ ಬಗ್ಗೆ ನಿಮಗೆ ತಿಳಿಯಬೇಕಾದ 12 ವಿಶೇಷ ಸಂಗತಿಗಳು!

    ಚೆನೈ: ಮೆಗಾ, ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು 71ನೇ ವಸಂತಕ್ಕೆ ಕಾಲಿಟ್ಟಿದ್ದು, ಇಡೀ ಭಾರತೀಯ ಸಿನಿಮಾರಂಗವೇ ಈ ಸಂಭ್ರಮವನ್ನು ಆಚರಿಸುತ್ತಿದೆ. ತಲೈವಾ ಅವರು ಡಿ.12 1950ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಸಾಮಾನ್ಯ ಬೆಂಗಳೂರಿನ ಹುಡುಗನಾಗಿದ್ದು ನಂತರ ದಕ್ಷಿಣ ಸಿನಿರಂಗದ ತಲೈವಾಆದ ರಜನಿಕಾಂತ್ ಅವರ ಜೀವನ ಪ್ರಯಾಣವು, ಇಡೀ ಭಾರತೀಯ ಜನಸಾಮಾನ್ಯರಿಗೆ ಸ್ಫೂರ್ತಿ ಎಂದೇ ಹೇಳಬೇಕು. ಹಾಗಾಗಿ, ಬರೀ ಸಿನಿಮಾ ರಂಗದವರಿಂದ ಮಾತ್ರವಲ್ಲದೆ, ಅಸಂಖ್ಯಾತ ಅಭಿಮಾನಿಗಳಿಂದ ಮತ್ತು ಜನಸಾಮಾನ್ಯರಿಂದ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ನಟನಿಗೆ ಹರಿದು ಬರುತ್ತಿದೆ.
    ರಜನಿಕಾಂತ್ ಹುಟ್ಟುಹಬ್ಬಕ್ಕೆ ಸೆಲೆಬ್ರಿಟಿಗಳ ಶುಭಾಶಯಗಳು: ತಲೈವಾಗೆ ಬರೀ ಸಾಮಾನ್ಯರು ಅಭಿಮಾನಿಗಳು ಮಾತ್ರ ಅಲ್ಲ, ಅವರಿಗೆ ಬೇರೆ ಸೆಲೆಬ್ರಿಟಿಗಳು ಅಭಿಮಾನಿಗಳು ಎಂದರೆ ತಪ್ಪಲ್ಲ. ಪ್ರಧಾನಿ ನರೇಂದ್ರ ಮೋದಿ, ರಜನಿಕಾಂತ್ ಅಳಿಯಾ ನಟ ಧನುಷ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಸೌತ್ ಲೇಡಿ ಸೂಪರ್ ಸ್ಟಾರ್ ನಯಂತರಾ, ಧಕ್ ಧಕ್ ಹುಡುಗಿ ಮಾಧುರಿ ದೀಕ್ಷಿತ್, ರತ್ನವೇಲು, ಮಮ್ಮುಟ್ಟಿ, ಹನ್ಸಿಕಾ, ರಾಘವ ಲಾರೆನ್ಸ್ ಸೇರೆ 300ಕ್ಕೂ ಹೆಚ್ಚು ಸೌತ್ ಸಿನಿತಾರೆಯರು ಟ್ವಿಟರ್​ನಲ್ಲಿ ಟ್ವೀಟ್ ಮಾಡುವ ಮೂಲಕ ತಲೈವಾಗೆ ಶುಭಾಶಯಗಳು ತಿಳಿಸಿದ್ದಾರೆ. ಹೀಗಾಗಿ, ಸದ್ಯ #HappyBirthdayRajinikanth #HappyBirthdayThalaiva #Thalaiva71stBirthday ಎಂಬ ಹ್ಯಾಶ್​ಟ್ಯಾಗ್​ಗಳು ಟ್ವಿಟರ್​ನಲ್ಲಿ ಧೂಳೆಬ್ಬಿಸುತ್ತಿವೆ

    71ನೇ ವಸಂತಕ್ಕೆ ಕಾಲಿಟ್ಟ ತಲೈವಾಗೆ ಶುಭಾಶಯಗಳ ಮಹಾಪೂರ: ರಜನಿ ಬಗ್ಗೆ ನಿಮಗೆ ತಿಳಿಯಬೇಕಾದ 12 ವಿಶೇಷ ಸಂಗತಿಗಳು!

    ಅಭಿಮಾನಿಗಳ ಸಂಭ್ರಮಾಚರಣೆ: ಇನ್ನು, 1975ರಲ್ಲಿ ಬಿಡುಗಡೆಯಾದ ಅಪೂರ್ವ ರಾಗಂಗಳ್ಸಿನಿಮಾದಿಂದ ಕಲಾರಂಗಕ್ಕೆ ರಜನಿ ಪಾರ್ದಾಪಣೆ ಮಾಡಿದ್ದು, ಅಲ್ಲಿಂದ ಈಗೀನ ಅಣ್ಣಾತೆವೆರೆಗೆ ಜನರ ನೆಚ್ಚಿನ ತಲೈವಾ ಎನಿಸಿಕೊಂಡ ನಟನ ಜೀವನದಲ್ಲಿ ಬಹು ದೊಡ್ಡ ಪಾತ್ರವಹಿಸಿದ್ದು ಅವರ ಅಭಿಮಾನಿಗಳು ಎಂದೇ ಹೇಳಿಬೇಕು. ನಟನ ಸಿನಿಮಾ ಬಿಡುಗಡೆಯಾದರೆನೆ ಅವರ ಅಭಿಮಾನಿಗಳನ್ನು ಹಿಡಿಯಲು ಸಾಧ್ಯವಿಲ್ಲ. ಹಾಗಿದ್ದರೆ, ರಜನಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಎಷ್ಟು ಸೂಪರ್ ಎಕ್ಸೈಟ್ ಆಗಿರುತ್ತಾರೆಂದು ವರ್ಣಿಸಲು ಸಾಧ್ಯವಿಲ್ಲ. ಇವತ್ತು, ಸೌತ್​ನ ನಾಲ್ಕು ರಾಜ್ಯಗಳಲ್ಲಿ ತಲೈವಾ ಅವರ ಹುಟ್ಟುಹಬ್ಬ ಸಂಭ್ರಮದ್ದೆ ಹವಾ. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವುದು ಅಲ್ಲದೇ, ರಜನಿ ಅವರ ವಯಸ್ಸಿನ ಬಗ್ಗೆ ಒಂದಿಷ್ಟು ಮೀಮ್​​ಗಳು ಹರಿದಾಡುತ್ತಿವೆ. ಅವುಗಳ ಪೈಕಿ ಒಂದು ಮೀಮ್ ಮಾತ್ರ ಸದ್ಯ ಎಲ್ಲರ ಗಮನ ಸೆಳೆದಿದೆ. ಅದು, ‘ರಜನಿಗೆ ವಯಸ್ಸಾಗುವುದಿಲ್ಲ, ಬದಲಿಗೆ ಆ ಸಮಯಕ್ಕೆ ವಯಸ್ಸಾಗುತ್ತೆಎಂಬ ಮೀಮ್ ಈಗ ಎಲ್ಲರ ಮನೆ ಮಾತಾಗಿದೆ. ಜೊತೆಗೆ, ಹಲವು ಕಡೆ ತಲೈವಾ ಹುಟ್ಟುಹಬ್ಬವನ್ನು ಕೇಕ್​ಗಳು, ಹೂ ಮಾಲೆಗಳು, ದೊಡ್ಡ ಪೋಸ್ಟರ್​​ಗಳು, ದೊಡ್ಡ ದೊಡ್ಡ ಬ್ಯಾನರ್​ಗಳು, ಹಾಲಿನ ಅಭಿಷೇಕ ಮಾಡುವುದರ ಮೂಲಕ ಭರ್ಜರಿಯಾಗಿ ಆಚರಿಸಲಾಗುತ್ತಿದೆ.
    71 ನೇ ಹುಟ್ಟುಹಬ್ಬದಂದು, ತಲೈವಾ ಅವರ ಬಗ್ಗೆ 10 ವಿಶೇಷ ಸಂಗತಿಗಳು ಇಲ್ಲಿವೆ: ಯಾವುದೇ ಸಿನಿ ಹಿನ್ನೆಲೆ ಇಲ್ಲದೆ, ಕೇವಲ ತಮ್ಮ ನಟನೆ ಮತ್ತು ಸ್ಟೈಲ್​ನಿಂದ ಬಹಳಷ್ಟು ಸಂಚಲನ ಮೂಡಿಸಿ ಅಸಂಖ್ಯಾತ ಅಭಿಮಾನಿಗಳನ್ನು ಪಡೆದಿರುವ ತಲೈವಾ, ಸಾಕಷ್ಟು ಕಷ್ಟಗಳನ್ನು ಜೀವನದಲ್ಲಿ ಅನುಭವಿಸಿದ್ದಾರೆ. ರಜನಿ ಬೆಳೆದುಬಂದ ಹಾದಿ ತುಂಬಾನೆ ರೋಚಕ ಎನ್ನಬಹುದು. ಹಾಗಾಗಿ, ಇಂತಹ ಮೇರು ನಟನ ಬಗ್ಗೆ ನಿಮಗೆ ತುಂಬಾ ಕಡಿಮೆ ತಿಳಿದಿರುವ ಒಂದಿಷ್ಟು ಸಂಗತಿಗಳನ್ನು ಇಲ್ಲಿ ತಿಳಿಸಿದ್ದೀವಿ.
    1.) ರಜನಿಕಾಂತ್ ಅವರ ಮೊದಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ಅವರಿಗೆ ಮರಾಠಾ ಯೋಧ ರಾಜ ಛತ್ರಪತಿ ಶಿವಾಜಿಯ ಹೆಸರನ್ನು ಇಡಲಾಯಿತು.
    2.) ನಟ ಮರಾಠಿ ಮತ್ತು ಕನ್ನಡ ಕಲಿತು ಬೆಳೆದರು. ನಂತರ, ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನೆಯಲ್ಲಿ ಡಿಪ್ಲೊಮಾ ಓದುತ್ತಿದ್ದಾಗ, ಅವರು ತಮಿಳು ಕಲಿತರು.
    3.) ನಟನಾ ವೃತ್ತಿಜೀವನಕ್ಕೆ ಕಾಲಿಡುವ ಮೊದಲು, ಅವರು ಜೀವನೋಪಾಯಕ್ಕಾಗಿ ಕೂಲಿ, ಕಾರ್ಪೆಂಟರ್ ಮತ್ತು ಬಸ್ ಕಂಡಕ್ಟರ್ ಉದ್ಯೋಗಗಳನ್ನು ಮಾಡುತ್ತಿದ್ದರು.
    4.) ರಜನಿಕಾಂತ್ ಅವರ ನಟನಾ ವೃತ್ತಿಯು ಖಳನಾಯಕನ ಪಾತ್ರಗಳೊಂದಿಗೆ ಪ್ರಾರಂಭವಾಯಿತು. ಮೊದಲೆರಡು ವರ್ಷಗಳಲ್ಲಿ ಅವರು ನಾಯಕವಿರೋಧಿ ಪಾತ್ರಗಳನ್ನು ನಿರ್ವಹಿಸಿದರು. ಅವರು ನಿಂದನೀಯ ಪತಿ, ಸ್ತ್ರೀವಾದಿ, ಅತ್ಯಾಚಾರಿ ಮತ್ತು ಬೇರೆ ಬೇರೆ ನೆಗೆಟಿವ್ ಪಾತ್ರಗಳನ್ನುಆರಂಭದಲ್ಲಿ ನಿರ್ವಹಿಸಿದ್ದಾರೆ. 1977 ರಲ್ಲಿ, ಅವರು ಭುವನ ಒರು ಕೇಳ್ವಿಕುರಿಚಿತ್ರದ ಮೂಲಕ ಪಾಸಿಟಿವ್ ಪಾತ್ರಗಳನ್ನು ಮಾಡುವುದು ಆರಂಭಿಸಿದರು.
    5.) ತಲೈವಾ ಅವರು ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರನ್ನು ತಮ್ಮ ಸ್ಫೂರ್ತಿ ಎಂದು ಹೇಳುತ್ತಾರೆ ಮತ್ತು ತಮಿಳಿಗೆ ರೀಮೇಕ್ ಆದಂತಹ ಬಿಗ್ ಬಿ ಅವರ 11 ಚಿತ್ರಗಳಲ್ಲಿ ತಲೈವಾ ನಟಿಸಿದ್ದಾರೆ.
    6.) ತಲೈವಾ ತಮ್ಮ 46 ವರ್ಷಗಳ ಸುದೀರ್ಘ ನಟನಾ ವೃತ್ತಿಜೀವನದಲ್ಲಿ, ರಜನಿಕಾಂತ್ ಅವರು 170ಕ್ಕೂ ಹೆಚ್ಚು ಚಲನಚಿತ್ರಗಳ ಭಾಗವಾಗಿದ್ದಾರೆ.
    7.) ಪದ್ಮವಿಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ನಟ ರಜನಿಕಾಂತ್ ಅವರನ್ನು ಫೋರ್ಬ್ಸ್ ಇಂಡಿಯಾ 2010 ರಲ್ಲಿ ಅತ್ಯಂತ ಪ್ರಭಾವಶಾಲಿ ಭಾರತೀಯ ಎಂದು ಗುರುತಿಸಿದೆ.
    8.) ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಪಠ್ಯಕ್ರಮದಲ್ಲಿ ಬಸ್ ಕಂಡಕ್ಟರ್‌ನಿಂದ ಸೂಪರ್‌ಸ್ಟಾರ್ಎಂಬ ಪಾಠದ ಮೂಲಕ ಮಕ್ಕಳು ಓದುವಂತಹ ಏಕೈಕ ಭಾರತೀಯ ನಟ ರಜನಿಕಾಂತ್.
    9.) 2015 ರಲ್ಲಿ, 71 ನೇ ವೆನಿಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಟ ರಜನಿಕಾಂತ್ ಅವರ ಬಗೆಗಿನ ಫ್ಯಾಂಡಮ್ ಫಾರ್ ದಿ ಲವ್ ಆಫ್ ಎ ಮ್ಯಾನ್ಎಂಬ ಚಲನಚಿತ್ರವನ್ನು ಪ್ರಥಮವಾಗಿ ಪ್ರದರ್ಶನ ಮಾಡಲಾಯಿತು.
    10.) 2010 ರಲ್ಲಿ, ಅವರ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರ ಎಂಥಿರಾನ್ಪ್ರಪಂಚದಾದ್ಯಂತದ IMDb ನ ಟಾಪ್ 50 ಚಲನಚಿತ್ರಗಳಲ್ಲಿ ಸ್ಥಾನ ಪಡೆದ ಏಕೈಕ ತಮಿಳು ಚಲನಚಿತ್ರವಾಯಿತು. ಇದನ್ನು, ಐಐಎಂಎ ಪಿಜಿ ಚುನಾಯಿತ ಕೋರ್ಸ್‌ನಲ್ಲಿ ಕೇಸ್ ಸ್ಟಡಿಯಾಗಿ ಸೇರಿಸಲಾಗಿದೆ.
    11.) ರಜನಿಕಾಂತ್ ಕೇವಲ ತಮಿಳು ಸಿನಿಮಾಗಳಿಗೆ ಸೀಮಿತಗವಾಗದೆ, ಅವರು ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ್, ಮಲಯಾಳಂ, ಬೆಂಗಾಳಿ ಭಾಷೆಗಳ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು. ಇದೇ, ಕಾರಣಕ್ಕೆ ಅಭಿಮಾನಿಗಳಿಗೆ ತಲೈವಾ ಆರಾಧ್ಯದೈವವಾಗಿದ್ದಾರೆ.
    12.) ಇನ್ನು, ಸಂಕಷ್ಟ ಸಮಯದಲ್ಲಿ ಇವರು ಅಭಿಮಾನಿಗಳ ಮತ್ತು ತಮಿಳುನಾಡಿನ ಜನತೆಗೆ ಸಹಾಯ ಮಾಡುವುದು ಸಹ ಎಲ್ಲರ ಗಮನ ಸೆಳೆಯುವುದಲ್ಲದೆ, ಎಲ್ಲರ ಮೆಚ್ಚುಗೆಯೂ ಪಡೆಯುತ್ತದೆ.

    ಜೂನಿಯರ್​ ಎನ್​ಟಿಆರ್​​ ಧರಿಸಿರುವ ಈ ವಾಚ್​ನ​ ಬೆಲೆ ಕೇಳಿದ್ರೆ ನಿಜಕ್ಕೂ ಬೆರಗಾಗ್ತಿರಾ..!

    ಹಾಸ್ಯನಟ ಸಂಜು ಬಸಯ್ಯ ಅವರದ್ದು 8 ವರ್ಷಗಳ ಪ್ರೀತಿ! ಪ್ರೇಯಸಿ ಜೊತೆಗಿನ ಫೋಟೋಗಳು ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts