More

    ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ ಸೂಪರ್ ಸ್ಟಾರ್ ರಜನಿಕಾಂತ್​ ಅವರ ಹೊಸ ರಾಜಕೀಯ ಪಕ್ಷ…

    ಚೆನ್ನೈ: ಸೂಪರ್​ ಸ್ಟಾರ್​ ರಜನೀಕಾಂತ್​ ಅವರು ರಾಜಕೀಯಕ್ಕೆ ಬರಲಿದ್ದಾರೆ. ಅವರು ಹೊಸದೊಂದು ಪಕ್ಷವನ್ನು ಸ್ಥಾಪಿಸಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ವರ್ಷಗಳಿಂದಲೂ ಆಗಾಗ ಮುನ್ನೆಲೆಗೆ ಬರುತ್ತಲೇ ಇದೆ. ಈ ಬಾರಿಯ ಮಾರ್ಚ್​​ನಲ್ಲಿ ಕೂಡ ತಾವು ರಾಜಕೀಯ ಪ್ರವೇಶಿಸುವುದು ನಿಶ್ಚಿತ ಎಂದು ಘೋಷಿಸಿದ್ದರು. ಆದರೆ ಪಕ್ಷ ಘೋಷಣೆಯನ್ನು ಮಾಡಿರಲಿಲ್ಲ.

    ಇದೀಗ ಅವರ ಆಪ್ತರಲ್ಲಿ ಒಬ್ಬರಾದ, ಚೆನ್ನೈನ ಮಾಜಿ ಡೆಪ್ಯೂಟಿ ಮೇಯರ್​ ಕರಾಟೆ ತ್ಯಾಗರಾಜ್​ ಅವರು ರಜನೀಕಾಂತ್​ ಅವರ ಹೊಸ ರಾಜಕೀಯ ಪಕ್ಷ ನವೆಂಬರ್​ನಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಮಾಧ್ಯಮವೊಂದರ ಜತೆ ಮಾತನಾಡಿದ ಕರಾಟೆ ತ್ಯಾಗರಾಜ್​, ಈ ಬಾರಿ ಮಾರ್ಚ್​ನಲ್ಲಿ ರಜನೀಕಾಂತ್​ ಅವರು ಆಗಸ್ಟ್​​​ನಲ್ಲಿ ತಮ್ಮ ಹೊಸ ರಾಜಕೀಯ ಪಕ್ಷವನ್ನು ಉದ್ಘಾಟಿಸುವುದಾಗಿ ಹೇಳಿದ್ದರು. ಆದರೆ ಕೊವಿಡ್​-19 ಪರಿಸ್ಥಿತಿಯಿಂದ ಅಗಸ್ಟ್​​ನಲ್ಲಿ ಅವರಿಗೆ ತಮ್ಮ ಪಕ್ಷ ಘೋಷಣೆ ಸಾಧ್ಯವಾಗುತ್ತಿಲ್ಲ. ನನಗೆ ಬಂದ ಅಧಿಕೃತ ಮಾಹಿತಿಯ ಪ್ರಕಾರ, ರಜನೀಕಾಂತ್​ ಅವರು ತಮ್ಮ ಹೊಸ ರಾಜಕೀಯ ಪಕ್ಷವನ್ನು ನವೆಂಬರ್​​ನಲ್ಲಿ ಉದ್ಘಾಟನೆ ಮಾಡಿ, ಸಕ್ರಿಯ ರಾಜಕಾರಣದಲ್ಲಿ ತೊಡಗುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಕೊವಿಡ್​-19 ಲಸಿಕೆಯನ್ನು ದೇಶದ ಮೂಲೆಮೂಲೆಗೂ ತಲುಪಿಸುವ ಜವಾಬ್ದಾರಿ ರಿಲಯನ್ಸ್​ ಸಂಸ್ಥೆಯದ್ದು…’

    ಈಗಾಗಲೇ ತಮಿಳುನಾಡಿನಲ್ಲಿ ಡಿಎಂಕೆ ನಾಯಕ ಸ್ಟಾಲಿನ್, ಮುಖ್ಯಮಂತ್ರಿ ಇ.ಕೆ.ಪಳಿನಿಸ್ವಾಮಿ ಅವರಂತಹ ಯಶಸ್ವಿ ನಾಯಕರು ಇದ್ದಾರೆ. ಈ ಮಧ್ಯೆ ರಜನೀಕಾಂತ್​​ ಅವರು ತಮ್ಮ ಹೊಸ ಪಕ್ಷದೊಂದಿಗೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಕರಾಟೆ ತ್ಯಾಗರಾಜ್​ ಅವರು, ಪಳಿನಿಸ್ವಾಮಿ ಮತ್ತು ರಜನಿಕಾಂತ್​ ನಡುವೆ ನೇರವಾದ ಸ್ಪರ್ಧೆ ಏರ್ಪಡುತ್ತದೆ. ಎಂ.ಕೆ.ಸ್ಟಾಲಿನ್​ ಮೂರನೇ ಸ್ಥಾನದಲ್ಲಿ ಇರುತ್ತಾರೆ. ಯಾಕೆಂದರೆ ರಾಜ್ಯದಲ್ಲಿ ಅವರು ಈಗಾಗಲೇ ಮುಖ್ಯಮಂತ್ರಿಯೊಂದಿಗೆ ವೈಮನಸ್ಸು ತಳೆದಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಕರೊನಾದಿಂದ ನಮ್ಮನ್ನು ದೇವರೇ ಕಾಪಾಡಬೇಕು ಎಂದ ಶ್ರೀರಾಮುಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts