More

    ‘ಕೊವಿಡ್​-19 ಲಸಿಕೆಯನ್ನು ದೇಶದ ಮೂಲೆಮೂಲೆಗೂ ತಲುಪಿಸುವ ಜವಾಬ್ದಾರಿ ರಿಲಯನ್ಸ್​ ಸಂಸ್ಥೆಯದ್ದು…’

    ಮುಂಬೈ: ಕರೊನಾ ವೈರಸ್​ಗೆ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ತಕ್ಷಣ ಅದನ್ನು ದೇಶದ ಮೂಲೆಮೂಲೆಗೂ ತಲುಪಿಸುವ ಜವಾಬ್ದಾರಿ ನಮ್ಮ ಕಂಪನಿಯದ್ದು ಎಂದು ರಿಲಯನ್ಸ್​ ಫೌಂಡೇಶನ್​ ಸಂಸ್ಥಾಪಕಿ, ಅಧ್ಯಕ್ಷೆ ನೀತಾ ಅಂಬಾನಿಯವರು ತಿಳಿಸಿದ್ದಾರೆ.

    ಹಾಗೇ, ದೇಶಾದ್ಯಂತ ಕೊವಿಡ್​-19 ಕ್ಷಿಪ್ರ ತಪಾಸಣೆಗಾಗಿ ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳೊಂದಿಗೆ ಸಹಭಾಗಿತ್ವ ಹೊಂದಲು ರಿಲಯನ್ಸ್​ ಫೌಂಡೇಶನ್​ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಜಿಯೋ ಡಿಜಿಟಲ್​ ಸೌಕರ್ಯದ ಸಹಾಯ ಪಡೆಯಲಾಗುವುದು ಎಂದೂ ನೀತಾ ಅಂಬಾನಿಯವರು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಯಾನ್​​ನಲ್ಲಿ ಇಂಧನ ನೀಡಲು ನಿರಾಕರಿಸಿದ್ದಕ್ಕೆ ಆತ ಏನು ಮಾಡಿದ? ಕೇಳಿದರೆ ನಿಮಗೂ ಶಾಕ್ ಆಗುತ್ತೆ…

    ಕೊವಿಡ್​-19 ಲಸಿಕೆ ಯಾವಾಗ ಲಭ್ಯವಾಗುತ್ತದೆ ಗೊತ್ತಿಲ್ಲ. ಹಾಗೆ ಲಸಿಕೆ ಅಭಿವೃದ್ಧಿ ಆದ ತಕ್ಷಣ ಅದನ್ನು ದೇಶದ ಎಲ್ಲ ಕಡೆಗೂ ತಲುಪಿಸುವ ಜವಾಬ್ದಾರಿಯನ್ನು ನಮ್ಮ ಸಂಸ್ಥೆಯೂ ಹೊರಲಿದೆ. ಈ ವಿಚಾರಲ್ಲಿ ಸಂಪೂರ್ಣ ಭರವಸೆ ನೀಡುತ್ತೇವೆ ರಿಲಯನ್ಸ್​ ವಾರ್ಷಿಕ ಸಭೆಯಲ್ಲಿ ಹೇಳಿದ್ದಾರೆ.

    ಭಾರತದಲ್ಲಿ ಹೈದರಾಬಾದ್ ಮೂಲದ ಸಂಸ್ಥೆ ತಯಾರಿಸಿದ ಲಸಿಕೆಯ ಮಾನವ ಪ್ರಯೋಗ ನಿನ್ನೆಯಿಂದ ಪಟನಾದ ಏಮ್ಸ್​ನಲ್ಲಿ ಶುರುವಾಗಿದೆ. ಅದರ ಬೆನ್ನಲ್ಲೇ ನೀತಾ ಅಂಬಾನಿಯವರೂ ಈ ಮಾತು ಹೇಳಿದ್ದು, ಕೊವಿಡ್​-19 ಬಿಕ್ಕಟ್ಟಿನ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸುತ್ತೇವೆ ಎಂದಿದ್ದಾರೆ.(ಏಜೆನ್ಸೀಸ್​)

    ಕೊವಿಡ್​-19 ಲಸಿಕೆ ಸಂಪೂರ್ಣ ಸುರಕ್ಷಿತ ಎಂದ ರಷ್ಯಾ ರಕ್ಷಣಾ ಸಚಿವಾಲಯ; ಜುಲೈ ಅಂತ್ಯಕ್ಕೆ ಫೈನಲ್​ ರಿಸಲ್ಟ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts