More

    VIDEO| ನಿರ್ದೇಶಕ ಬೇರ್​ ಗ್ರೀಲ್ಸ್​ನ “ಮ್ಯಾನ್​ ವರ್ಸಸ್​ ವೈಲ್ಡ್​” ಕಾರ್ಯಕ್ರಮದ 2ನೇ ಪ್ರೋಮೋದಲ್ಲಿ ತಲೈವಾ ಮಿಂಚಿಂಗ್​

    ಬೆಂಗಳೂರು: “ಇದು ರಿಯಲ್​ ಅಡ್ವೆಂಚರ್​” ಎನ್ನುವ ಸೂಪರ್​ಸ್ಟಾರ್​ ರಜನಿಕಾಂತ್​ ತಮ್ಮದೇ ಸ್ಟೈಲ್​ನಲ್ಲಿ ಕನ್ನಡಕ ಹಾಕಿಕೊಳ್ಳುತ್ತಾರೆ. ವನ್ಯ ಜೀವಿ ಸಾಹಸಿ ನಿರ್ದೇಶಕ ಬೇರ್​ ಗ್ರೀಲ್ಸ್​ನ “ಮ್ಯಾನ್​ ವರ್ಸಸ್​ ವೈಲ್ಡ್​” ಕಾರ್ಯಕ್ರಮದ 2ನೇ ಪ್ರೋಮೋ ಬಿಡುಗಡೆಯಾಗಿದ್ದು, ಇದರಲ್ಲಿ ತಲೈವಾ ತಮ್ಮದೇ ಲುಕ್​ನಲ್ಲಿ ಕಂಡು ಬಂದಿದ್ದಾರೆ.

    ಪ್ರೋಮೋವನ್ನು ಟ್ವೀಟ್​ ಮಾಡಿರುವ ಬೇರ್​ ಗ್ರೀಲ್ಸ್​ ಅವರು ಸೂಪರ್‌ಸ್ಟಾರ್ ರಜನಿಕಾಂತ್​ ಅವರ ಸಕಾರಾತ್ಮಕತೆ ಎಂದಿಗೂ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ.

    ಒಂದು ನಿಮಿಷದ ವಿಡಿಯೋದಲ್ಲಿ ರಜನಿಕಾಂತ್​ ಎಟಿವಿ ಬೈಕ್​ನಲ್ಲಿ ಆಗಮಿಸುತ್ತಾರೆ. ಹೆಲ್ಮೆಟ್​, ಸನ್​ ಗ್ಲಾಸ್​ ಹಾಕಿಕೊಂಡ ಅವರು ತಮ್ಮದೇ ಶೈಲಿಯಲ್ಲಿಯೇ ಪರಿಚಯವಾಗುತ್ತಾರೆ. ನಂತರ ಬೇರ್​ ಗ್ರೀಲ್ಸ್​ ಜತೆಗೆ ಪ್ರಯಾಣ. ಹಗ್ಗ ಹಿಡಿದ ರಜನಿಕಾಂತ್​ ಇದನ್ನು ಹತ್ತಬೇಕು ಎನ್ನುತ್ತಿರಾ ಎಂದು ಬೇರ್​ ಗ್ರೀಲ್ಸ್​ಗೆ ಪ್ರಶ್ನಿಸುತ್ತಾರೆ.

    ನಂತರ ತೆರೆದ ಜೀಪ್​ನಲ್ಲಿ ಹುಲಿ, ಆನೆ ಮತ್ತು ಜಿಂಕೆಯಂತಹ ಕಾಡು ಪ್ರಾಣಿಗಳ ನಡುವೆಯೇ ಪ್ರಯಾಣಿಸುತ್ತಾರೆ. ನಂತರ ಒಂದು ಕೊಳದಲ್ಲಿ ನೀರಿನಲ್ಲಿ ನಡೆಯುತ್ತಾರೆ. ಒಂದು ನಿಮಿಷದ ಪ್ರೋಮೋದಲ್ಲಿ ಇಷ್ಟೆಲ್ಲ ತೋರಿಸಲಾಗಿದೆ. ತಲೈವಾ ರಜನಿ ತಮ್ಮದೇ ಶೈಲಿಯಲ್ಲಿ ಕನ್ನಡಕವನ್ನು ತಿರುಗಿಸಿ ಹಾಕುವಲ್ಲಿಗೆ ಪ್ರೋಮೋ ಮುಕ್ತಾಯವಾಗುತ್ತದೆ.

    ಕಾಯಕ್ರಮ ಮಾರ್ಚ್​ 23ರಂದು ರಾತ್ರಿ 8 ಗಂಟೆಗೆ ಡಿಸ್ಕವರಿ ಚಾನಲ್​ನಲ್ಲಿ ಪ್ರಸಾರವಾಗಲಿದೆ. ಬಂಡೀಪುರ ಹಾಗೂ ಸುತ್ತಮುತ್ತಲ ಅರಣ್ಯದಲ್ಲಿ ಚಿತ್ರೀಕರಣಗೊಂಡ “ಮ್ಯಾನ್​ ವರ್ಸಸ್​ ವೈಲ್ಡ್​” ಕಾರ್ಯಕ್ರಮದಲ್ಲಿ ತಲೈವಾ ರಜನಿಕಾಂತ್​ ಅಲ್ಲದೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಕೂಡ ನಟಿಸಿದ್ದಾರೆ. (ಏಜೆನ್ಸೀಸ್​)  

    VIDEO| ಗ್ರಾಮಸ್ಥರನ್ನು ಅಟ್ಟಿಸಿಕೊಂಡು ಗ್ರಾಮಕ್ಕೆ ಬಂದ ಸಿಂಹ, ಮುಂದೆ ಏನಾಯಿತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts