More

    ಶಿಕ್ಷಕರೆ, ಕ್ವಾರಂಟೈನ್​ನಲ್ಲಿ ಮನರಂಜಿಸಲು ಹೋಗಿ ಎಂದ ರಾಜಸ್ಥಾನ

    ಜೈಪುರ: ರಾಜಸ್ಥಾನ ಸರ್ಕಾರಿ ಶಾಲಾ ಶಿಕ್ಷಕರಿಗೆ ವಿವಿಧ ಜಿಲ್ಲಾಡಳಿತಗಳು ವಿಲಕ್ಷಣ ಜವಾಬ್ದಾರಿ ವಹಿಸಿ ಮುಜುಗರಕ್ಕೀಡಾಗಿವೆ.
    ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರಿಗೆ ಕೋವಿಡ್ -19 ರೋಗಿಗಳನ್ನು ರಂಜಿಸಲು, ದಾರಿತಪ್ಪಿದ ಪ್ರಾಣಿಗಳನ್ನು ಎಣಿಸಲು, ಮದುವೆ ಸಮಯದಲ್ಲಿ ಸಾಮಾಜಿಕ ಅಂತರ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸದ್ಯ ನಡೆಯುತ್ತಿರುವ ಮಿಡತೆ ದಾಳಿಯ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ವಹಿಸಲಾಗಿದೆ.

    ಇದನ್ನೂ ಓದಿ: 80ರ ಇಳಿವಯಸ್ಸಿನಲ್ಲೂ ಈ ಅಜ್ಜ ಹೀರೋ ಆಗಿದ್ದು ಯಾಕೆ ಗೊತ್ತಾ?

    ಇಂಥ ವಿಲಕ್ಷಣ ಆದೇಶಗಳನ್ನು ಕಳೆದ ವಾರ ಅಂಗೀಕರಿಸಲಾಗಿದ್ದು, ಇದು ಶಿಕ್ಷಕ ವಲಯದಲ್ಲಿ ಕೋಲಾಹಲವೆಬ್ಬಿಸಿದೆ. ಇಂಥ ಕರ್ತವ್ಯಗಳನ್ನು ನಿರ್ವಹಿಸುವ ಶಿಕ್ಷಕರ ವಿಡಿಯೋ ಕೂಡ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋಟಾಸರ ಅವರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಆದೇಶಗಳನ್ನು ಹಿಂಪಡೆಯಲಾಗಿದೆ. “ನಾವು ಅಸಂಬದ್ಧ ಆದೇಶಗಳನ್ನು ಹಿಂತೆಗೆದುಕೊಂಡಿದ್ದೇವೆ ಮತ್ತು ಯಾವುದೇ ಲಿಖಿತ ಮಾರ್ಗಸೂಚಿಗಳಿಲ್ಲದೆ ಅಂತಹ ಆದೇಶಗಳನ್ನು ಕೈಗೊಳ್ಳದಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ದೋಟಾಸರ ಟ್ವೀಟರ್​​ನಲ್ಲಿ ತಿಳಿಸಿದ್ದಾರೆ.

    ಹಲವಾರು ಉಪ ವಿಭಾಗಾಧಿಕಾರಿಗಳು ಈ ಆದೇಶಗಳನ್ನು ಅಂಗೀಕರಿಸಿದ್ದಾರೆ. ಅಂತಹ ಒಂದು ಆದೇಶದಲ್ಲಿ, ಕರೌಲಿ ಜಿಲ್ಲಾ ಮುಖ್ಯ ಶಿಕ್ಷಣ ಅಧಿಕಾರಿ ಗಣಪತ್ ಲಾಲ್ ಮೀನಾ, ಮಂದರಾಯಣ್ ಮತ್ತು ತೋಡಾಭಿಮ್​ನ 12 ಕ್ವಾರಂಟೈನ್ ಕೇಂದ್ರಗಳಲ್ಲಿ ಬೆಳಿಗ್ಗೆ ಯೋಗವನ್ನು ಕಲಿಸಲು ಮತ್ತು ಸಂಜೆ ಹಾಡು ಹಾಗೂ ಸಂಗೀತ ಕಾರ್ಯಕ್ರಮಗಳಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ದೈಹಿಕ ಶಿಕ್ಷಕರು ಮತ್ತು ಸಂಗೀತ ಶಿಕ್ಷಕರಿಗೆ ತಿಳಿಸಿದ್ದರು.

    ಇದನ್ನೂ ಓದಿ: ಮರಳಿನಲ್ಲಿ ಅರಳಿತು ಸೋನು ಸೂದ್​ ಕಲಾಕೃತಿ; ಸುದರ್ಶನ್​ ಪಟ್ನಾಯಕ್ ಕಲಾನಮನ

    ಕ್ವಾರಂಟೈನ್​​​ನಲ್ಲಿ ರೋಗಿಗಳಿಗೆ ಮನರಂಜನೆ ನೀಡುವಂತೆ ಕೆಲ ಶಿಕ್ಷಕರಿಗೆ ತಿಳಿಸಲಾಗಿತ್ತು. ಆ ಶಿಕ್ಷಕರ ಗುಂಪಿನಲ್ಲಿ ಓರ್ವ ಶಿಕ್ಷಕಿ ಕೂಡ ಇದ್ದರು. ಅಷ್ಟೇ ಅಲ್ಲದೆ, ಕಾರ್ಯಕ್ರಮಗಳ ವಿಡಿಯೊಗಳನ್ನು ತಯಾರಿಸಲು ಮತ್ತು ಹೆಚ್ಚುವರಿ ಜಿಲ್ಲಾ ಶಿಕ್ಷಣ ಅಧಿಕಾರಿ ಧರ್ಮ ಸಿಂಗ್ ಮೀನಾ ಅವರಿಗೆ ಕಳುಹಿಸಲು ಸಹ ಅವರಿಗೆ ತಿಳಿಸಲಾಗಿತ್ತು.

    ಬಾರನ್ ಜಿಲ್ಲೆಯ ಕಿಶನ್​​​ಪುರದ ಪಂಚಾಯತ್ ಪ್ರಾಥಮಿಕ ಶಿಕ್ಷಣ ಅಧಿಕಾರಿ ಹೊರಡಿಸಿದ ಎರಡನೇ ಆದೇಶದಲ್ಲಿ, ಶಾಲೆಯ ಪ್ರಾಂಶುಪಾಲ, ಎಸ್‌ಡಿಒ ಆದೇಶಗಳನ್ನು ಉಲ್ಲೇಖಿಸಿ, ಗ್ರಾಮದಲ್ಲಿ ನಡೆಯುವ ವಿವಾಹದ ಸಂದರ್ಭದಲ್ಲಿ ಸಾಮಾಜಿಕ ಅಂತರ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಆ ಸಂದರ್ಭದಲ್ಲಿ 50 ಕ್ಕೂ ಹೆಚ್ಚು ಜನರು ಹಾಜರಾಗದಿರುವುದನ್ನು ಖಚಿತಪಡಿಸಿಕೊಳ್ಳಲು ಓರ್ವ ಶಿಕ್ಷಕರಿಗೆ ತಿಳಿಸಿದ್ದರು

    ಇದನ್ನೂ ಓದಿ: ಕೇರಳ ಜಲಸಾರಿಗೆ ಇಲಾಖೆ ಪ್ರಶಂಸೆಗಿಟ್ಟಿಸಿದ್ದು ಯಾಕೆ ಗೊತ್ತಾ?

    ಕರೋನವೈರಸ್ ನಿಂದಾಗಿ ಉಂಟಾದ ವಿಷಮ ಸ್ಥಿತಿಯಲ್ಲಿ ಶಿಕ್ಷಕರಿಗೆ ಇಂತಹ ಸಾಕಷ್ಟು ಆದೇಶಗಳನ್ನು ನೀಡಲಾಗಿದೆ. ಈ ಹಿಂದೆ ಧೋಲ್ಪುರ ಜಿಲ್ಲಾಧಿಕಾರಿ ಶಿಕ್ಷಕರನ್ನು ಉದ್ಯೋಗ ಖಾತ್ರಿ ಯೋಜನೆ (ಮನರೆಗಾ)ತಪಾಸಣೆ ಕರ್ತವ್ಯಕ್ಕೆ ನಿಯೋಜಿಸಿದ್ದರು. ಶಿಕ್ಷಕರು ಮಿಡತೆ ನಿಯಂತ್ರಣ ತಂಡಗಳಿಗೆ ಸೇರಬೇಕೆಂದು ಕೋಟಾದ ಎಟಾವಾ ಉಪವಿಭಾಗದ ಎಸ್‌ಡಿಒ ತಿಳಿಸಿದಾಗ ಶಿಕ್ಷಕ ವಲಯದಲ್ಲಿ ಕೋಲಾಹಲ ಉಂಟಾಗಿತ್ತು.

    ಇಂತಹ ಬೋಧಕೇತರ ಚಟುವಟಿಕೆಗಳಿಗೆ ಶಿಕ್ಷಕರನ್ನು ನಿಯೋಜಿಸಬಾರದೆಂದು ರಾಜಸ್ಥಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಶಿ ಭೂಷಣ್ ಶರ್ಮಾ, ರಾಜಸ್ಥಾನ್ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ರವಿ ಆಚಾರ್ಯ, ಸಮಸ್ತ ರಾಜಸ್ಥಾನ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ರಾಮಕೃಷ್ಣ ಅಗರವಾಲ್ ಸಿಎಂಗೆ ಮನವಿ ಮಾಡಿದ್ದಾರೆ.

    ನಿರ್ಗತಿಕರಿಗೆ ಸಹಾಯ ಹಸ್ತ ನೀಡಿದ ಅಂಗವಿಕಲ ಭಿಕ್ಷಕ; ‘ಮನ್ ಕಿ ಬಾತ್​​’ನಲ್ಲಿ ಶ್ಲಾಘಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts