More

    18ರಿಂದ ನೆಲ ಗಮಲು ನಾಟಕೋತ್ಸವ

    ಕೋಲಾರ: ಬುಡ್ಡಿ ದೀಪ ವೇದಿಕೆ ವತಿಯಿಂದ ಸಂಸತಿ ಸಂಗಮ-3ರ ನೆಲ ಗಮಲು ನಾಟಕೋತ್ಸವವನ್ನು ಮೇ 18 ಮತ್ತು 19ರಂದು ಸಂಜೆ 6 ಗಂಟೆಗೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಮಕ್ಕಳು ನೋಡಲೇಬೇಕಾದ ನಾಟಕಗಳ ಪ್ರದರ್ಶನ ಏರ್ಪಡಿಸಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಿದರು.

    ಮೇ 18ರಂದು ಹಕ್ಕಿ ಹಾಡು ಮತ್ತು ಗಾದೆ ಗುರ್ರಕ್ಕ, ಮೇ 19ರಂದು ದೊಡ್ಡ ಮಾರಿ, ಚಿಕ್ಕ ಮಾರಿ ಹಾಗೂ ಕುಸ್​ಕುಸ್​ ದಿಲ್​ ಕುಷ್​ ನಾಟಕಗಳನ್ನು ಪ್ರದರ್ಶಿಸಲಿದ್ದೇವೆ. ನಚಿಕೇತನ ನಿಲಯ ಚಂದಗೊಳಿಸೋಣ, ಕೆ.ಇ.ಬಿ. ಪ.ಜಾತಿ ಮತ್ತು ಪ.ವರ್ಗಗಳ ನೌಕರರ ಕಲ್ಯಾಣ ಸಂಘದ ಸಹಕಾರದೊಂದಿಗೆ ಮಕ್ಕಳ ನಾಟಕಗಳ ಪ್ರದರ್ಶನ ನಡೆಯಲಿದೆ ಎಂದರು.

    ಕೇಂದ್ರ ವಲಯದ ಡಿಐಜಿ ರವಿಕಾಂತೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅರ್ತಿಥಿಗಳಾಗಿ ಜಿಲ್ಲಾಧಿಕಾರಿ ಅಕ್ರಂಪಾಷಾ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ್​ ಭಾಗವಹಿಸಲಿದ್ದಾರೆ. ನಚಿಕೇತನ ನಿಲಯದ ಕಾರಂಜಿ ಉದ್ಘಾಟನೆ ನೆರವೇರಲಿದೆ, ಕಸದ ತಿಪ್ಪೆಯಂತಾಗಿರುವ ನಿಚಿಕೇತನ ನಿಯವನ್ನು ಜ್ಞಾನದ ದೇಗುಲವನ್ನಾಗಿಸುವ ಪ್ರಯತ್ನಕ್ಕೂ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

    ನೆಲಗಮಲು ನಾಟಕೋತ್ಸವ 30 ವರ್ಷಗಳಿಂದ ಪ್ರಾಥಮಿಕ ಶಿಕ್ಷಣದಲ್ಲಿ ಕಲೆ, ಸಾಹಿತ್ಯ, ಸಂಸತಿ, ಜಾನಪದ, ರಂಗಭೂಮಿ ಹೀಗೆ ಹಲವು ಜ್ಞಾನ ಶಿಸ್ತುಗಳನ್ನು ಬೆಸೆಯುವ ಪ್ರಯೋಗಗಳ ಅಂತಿಮ ಫಲವಾಗಿದೆ. ನುಡಿ- ನೆಲ ಗುರುತುಗಳ ಮೂಲಕ ಶಿಕ್ಷಣ ನೀಡಬೇಕೆಂಬ ಹೊಸ ನೋಟದ ತಿಳಿವಳಿಕೆಯಾಗಿದೆ ಎಂದರು. ಸಂಸತಿ ಸಂಗಮ-1 ಕಳೆದ 2023ರ ಅಕ್ಟೋಬರ್​ನಲ್ಲಿ ಕೋಲಾರದಿಂದ ಆರಂಭವಾಗಿ ಸಂಸತಿ ಸಂಗಮ-2 ಮಂಡ್ಯದಲ್ಲಿ 15 ನಾಟಕಗಳ ರಚನೆಯಾಗಿ 4 ನಾಟಕಗಳ ಪ್ರದರ್ಶನ ಮುಗಿದಿವೆ. ಇದೀಗ ಸಂಸತಿ ಸಂಗಮ-3ಕ್ಕಾಗಿ ನೆಲ ಗಮಲು ನಾಟಕೋತ್ಸವ ಶೀರ್ಷಿಕೆಯಡಿ ದಿ.ಶ್ರೀರಾಮರೆಡ್ಡಿ ಮೇಷ್ಟ್ರು ನೆನಪಿನಲ್ಲಿ ನಾಲ್ಕು ನಾಟಕಗಳ ಪ್ರದರ್ಶನ ನಡೆಯಲಿವೆ ಎಂದರು.

    ಇದಕ್ಕಾಗಿ ಮೇ 1ರಿಂದ ಯಡಳ್ಳಿ, ಕಾರ್ಮನಹಳ್ಳಿಯಲ್ಲಿ ಹಾಗೂ ನಚಿಕೇತ ನಿಲಯ ಮೂರು ಕಡೆ ಮಕ್ಕಳ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ. ಇಲ್ಲಿ ತಯಾರಾಗುವ ನಾಟಕಗಳೊಂದಿಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸಂಸತಿ ಸಂಗಮ-2 ರಲ್ಲಿ ತಯಾರಾದ ನಾಟಕವೂ ಸೇರಿ ಒಟ್ಟು 4 ನಾಟಕ ಪ್ರದರ್ಶನ ನಡೆಯಲಿದೆ ಎಂದರು.
    ಮುಖಂಡರಾದ ಅನಂತ ಕೀರ್ತಿ, ಪ್ರಮೋದ್​ಕುಮಾರ್​, ಪ್ರಕಾಶ್​, ಶ್ರೀರಾಮ್​, ರಾಮು, ರಾಜು, ಅಲೇರಿ ರಾಘವೇಂದ್ರ, ಚೇತನ ಬಾಬು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts