More

    ಕೇರಳ ಜಲಸಾರಿಗೆ ಇಲಾಖೆ ಪ್ರಶಂಸೆಗಿಟ್ಟಿಸಿದ್ದು ಯಾಕೆ ಗೊತ್ತಾ?

    ಅಲಪುಳ: ಕೋವಿಡ್-19 ಅವಧಿಯಲ್ಲಿ ಕೇರಳ ರಾಜ್ಯ ಜಲ ಸಾರಿಗೆ ಇಲಾಖೆ (ಎಸ್‌ಡಬ್ಲ್ಯುಟಿಡಿ) ಒಬ್ಬಳೇ ಬಾಲಕಿಯನ್ನು ಶಾಲಾ ಪರೀಕ್ಷೆಗೆ ಕರೆದೊಯ್ಯಲು 70 ಆಸನಗಳ ದೋಣಿ ವ್ಯವಸ್ಥೆ ಮಾಡಿ ಪ್ರಶಂಸೆಗೆ ಪಾತ್ರವಾಗಿದೆ.
    ಐದು ಜನ ಸಿಬ್ಬಂದಿಯೊಂದಿಗೆ ಪ್ರಯಾಣಿಕರ ದೋಣಿ ಕುಟ್ಟಿನಾಡ್​​​ನ ಎಂ. ಎನ್. ಬ್ಲಾಕ್​​ನಿಂದ ಕೊಟ್ಟಾಯಮ್ ಗೆ ಸಂಚರಿಸುತ್ತದೆ. ಸಂದ್ರಾ ಬಾಬು ಎಂಬ ವಿದ್ಯಾರ್ಥಿನಿ ಕೊಟ್ಟಾಯಮ್​​ನ ಕಂಜಿರಾಮ್​​​ ಎಸ್​ಎನ್​ಡಿಪಿ ಹೈಯರ್ ಸೆಕೆಂಡರಿ ಶಾಲೆ 12ನೇ ತರಗತಿ ವಿದ್ಯಾರ್ಥಿನಿ. ಮೇ 29 ಮತ್ತು 30 ರಂದು ಪರೀಕ್ಷೆ ನಿಗದಿಯಾಗಿತ್ತು.

    ಇದನ್ನೂ ಓದಿ: 80ರ ಇಳಿವಯಸ್ಸಿನಲ್ಲೂ ಈ ಅಜ್ಜ ಹೀರೋ ಆಗಿದ್ದು ಯಾಕೆ ಗೊತ್ತಾ?

    ಲಾಕ್​ಡೌನ್​ ಅವಧಿಯಲ್ಲಿ ಕುಟ್ಟನಾಡು ಪ್ರದೇಶದ ಪ್ರಯಾಣಿಕರ ದೋಣಿ ಸಂಚಾರ ವ್ಯವಸ್ಥೆಯನ್ನು ರದ್ದುಪಡಿಸಲಾಗಿತ್ತು. ಆದರೆ ಸಾರ್ವತ್ರಿಕ ಪರೀಕ್ಷಾ ದಿನಾಂಕ ಕೂಡ ಪ್ರಕಟಗೊಂಡ ಕಾರಣ ಆ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರ ತಲುಪುವುದು ಕಷ್ಟವಾಗಿತ್ತು. ಈ ಆತಂಕವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಾಗ ಅವರು ಸಂಚಾರ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಈ ಎರಡು ದಿನ ಪರೀಕ್ಷಾ ಕೇಂದ್ರಕ್ಕೆ ಹೋಗಿಬರಲು ಬಾಲಕಿಗೆ ಇಲಾಖೆ 70 ಆಸನಗಳ ದೋಣಿ ವ್ಯವಸ್ಥೆ ಕಲ್ಪಿಸಲಾಗಿತ್ತು.
    ಕೊಟ್ಟಾಯಮ್ ನಿಲ್ದಾಣದಿಂದ ಎಂ.ಎನ್.ಬ್ಲಾಕ್​​ವರೆಗಿನ ದೋಣಿ ಸಂಚಾರ ಬೆಳಿಗ್ಗೆ ಆರಂಭಗೊಂಡು ಆ ಬಾಲಕಿಯನ್ನು ಶಾಲೆಗೆ ತಲುಪಿಸಿ ನಂತರ ಆಕೆ ಪರೀಕ್ಷೆ ಮುಗಿಸಿ ಬರುವವರೆಗೂ ಕಾದು ಅದೇ ದೋಣಿಯ ಮೂಲಕ ಅವಳನ್ನು ಮರಳಿ ಕರೆತರಲಾಯಿತು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಮರಳಿನಲ್ಲಿ ಅರಳಿತು ಸೋನು ಸೂದ್​ ಕಲಾಕೃತಿ; ಸುದರ್ಶನ್​ ಪಟ್ನಾಯಕ್ ಕಲಾನಮನ

    “ಇಲಾಖೆ ಸಚಿವ ಮತ್ತು ನಿರ್ದೇಶಕ ಶಾಜಿ ವಿ ನಾಯರ್ ಅವರು ನನಗೆ ಪರೀಕ್ಷೆ ಬರೆಯಲು ಸಹಾಯ ಮಾಡಿದರು” ಎಂದು ಸಾಂಡ್ರಾ ಹೇಳಿದ್ದಾಳೆ. “ನನ್ನ ಪೋಷಕರು ಇಲಾಖೆಯನ್ನು ಸಂಪರ್ಕಿಸಿ ಪರೀಕ್ಷೆ ಕುರಿತು ತಿಳಿಸಿ ಸಂಚಾರ ವ್ಯವಸ್ಥೆಗೆ ವಿನಂತಿಸಿದ್ದರು. ಸಚಿವರು ದೋಣಿ ಸೇವೆಗೆ ಅವಕಾಶ ಕಲ್ಪಿಸಿದರು, ಇದು ನನಗೆ ದೊಡ್ಡ ಸಹಾಯವಾಗಿದೆ, ”ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ.
    ಇಲಾಖೆಯ ನಿರ್ದೇಶಕ ಶಾಜಿ ವಿ ನಾಯರ್ ಮಾತನಾಡಿ, ಈ ಸೇವೆಯನ್ನು ನಿರ್ವಹಿಸಲು ಸರ್ಕಾರ ಮತ್ತು ಸಚಿವರು ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು. ಸಾಂಡ್ರಾಗೆ ಒಂದೇ ದಿನದ ಪ್ರಯಾಣಕ್ಕೆ 18 ರೂ.
    ಮಾತ್ರ ವಿಧಿಸಲಾಗಿದೆ ಎಂದು ಶಾಜಿ ಹೇಳಿದರು.

    ಚೆನ್ನೈನಲ್ಲಿನ್ನು ಕ್ಷೌರ ಮಾಡಿಸಲು ಆಧಾರ್ ಕಡ್ಡಾಯ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts