More

    ತೆವಾಟಿಯಾ-ಪರಾಗ್ ಸಾಹಸ; ಗೆಲುವಿನ ಹಾದಿಗೆ ಮರಳಿದ ರಾಜಸ್ಥಾನ

    ದುಬೈ: ರಾಹುಲ್ ತೆವಾಟಿಯಾ (45*ರನ್, 28 ಎಸೆತ, 4 ಬೌಂಡರಿ, 2 ಸಿಕ್ಸರ್) ಮತ್ತು ರಿಯಾನ್ ಪರಾಗ್ (42*ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್) ಜೋಡಿಯ ಅಮೋಘ ಸಾಹಸದಿಂದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-13ರಲ್ಲಿ ಸತತ 4 ಸೋಲಿನ ಬಳಿಕ ಗೆಲುವಿನ ಹಾದಿಗೆ ಮರಳಿದೆ. ಭಾನುವಾರದ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ 5 ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿತು.

    ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್‌ ತಂಡ ಕನ್ನಡಿಗ ಮನೀಷ್ ಪಾಂಡೆ (54 ರನ್, 44 ಎಸೆತ, 2 ಬೌಂಡರಿ, 3 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್‌ನಿಂದ 4 ವಿಕೆಟ್‌ಗೆ 158 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ರಾಜಸ್ಥಾನ ತಂಡ 19.5 ಓವರ್‌ಗಳಲ್ಲಿ 5 ವಿಕೆಟ್‌ಗೆ 163 ರನ್ ಪೇರಿಸಿ ಜಯಿಸಿತು.

    ಅಗ್ರ ಸರದಿಯ ವೈಫಲ್ಯದಿಂದಾಗಿ ಒಂದು ಹಂತದಲ್ಲಿ 78 ರನ್‌ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಹಾದಿಯಲ್ಲಿದ್ದ ರಾಯಲ್ಸ್ ತಂಡ ರಾಹುಲ್ ತೆವಾಟಿಯಾ ಮತ್ತು ರಿಯಾನ್ ಪರಾಗ್ ಜೋಡಿಯ ಸಾಹಸದಿಂದ ಗೆಲುವಿನ ಗುರಿ ತಲುಪಿತು. ಈ ಜೋಡಿ ಮುರಿಯದ 6ನೇ ವಿಕೆಟ್‌ಗೆ 47 ಎಸೆತಗಳಲ್ಲಿ 85 ರನ್ ಪೇರಿಸಿ ಗೆಲುವು ತಂದಿತು. ಕೊನೇ 5 ಓವರ್‌ಗಳಲ್ಲಿ 65 ರನ್ ಬೇಕಾಗಿದ್ದಾಗ ತೆವಾಟಿಯಾ-ಪರಾಗ್ ಜೋಡಿ ಖಲೀಲ್ ಅಹ್ಮದ್, ಸಂದೀಪ್ ಶರ್ಮ, ರಶೀದ್ ಖಾನ್ ಮತ್ತು ಟಿ. ನಟರಾಜನ್ ಓವರ್‌ಗಳಲ್ಲಿ ಕ್ರಮವಾಗಿ 11, 18, 14, 14 ರನ್ ಕಸಿಯಿತು. ಕೊನೇ ಓವರ್‌ನಲ್ಲಿ 8 ರನ್ ಅಗತ್ಯವಿದ್ದಾಗ ಮೊದಲ 4 ಎಸೆತಗಳಲ್ಲಿ 6 ರನ್ ಕಸಿದರು. 5ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ 18 ವರ್ಷದ ಪರಾಗ್ ತಂಡವನ್ನು ಗೆಲುವಿನ ದಡ ಸೇರಿಸಿದರು.

    ತೆವಾಟಿಯಾ-ಪರಾಗ್ ಸಾಹಸ; ಗೆಲುವಿನ ಹಾದಿಗೆ ಮರಳಿದ ರಾಜಸ್ಥಾನ

    ಸನ್‌ರೈಸರ್ಸ್‌ಗೆ ವಾರ್ನರ್-ಮನೀಷ್ ಆಸರೆಪಂದ್ಯದ ಆರಂಭದಲ್ಲಿ ರಾಜಸ್ಥಾನದ ಬೌಲರ್‌ಗಳು ಬಿಗಿ ದಾಳಿಯೊಂದಿಗೆ ಸನ್‌ರೈಸರ್ಸ್‌ ತಂಡ ರನ್‌ಗಾಗಿ ಪರದಾಡುವಂತೆ ಮಾಡಿದರು. ಇದರಿಂದಾಗಿ ಪವರ್‌ಪ್ಲೇಯಲ್ಲಿ 26 ರನ್ ಗಳಿಸಿದ ಸನ್‌ರೈಸರ್ಸ್‌ ಆರಂಭಿಕ ಜಾನಿ ಬೇರ್‌ಸ್ಟೋ (16) ವಿಕೆಟ್ ಕೂಡ ಕಳೆದುಕೊಂಡಿತ್ತು. ಆದರೆ ಡೇವಿಡ್ ವಾರ್ನರ್ (48 ರನ್, 38 ಎಸೆತ, 3 ಬೌಂಡರಿ, 2 ಸಿಕ್ಸರ್) ಮತ್ತು ಮನೀಷ್ ಪಾಂಡೆ ಜೋಡಿ 2ನೇ ವಿಕೆಟ್‌ಗೆ 10 ಓವರ್‌ಗಳಲ್ಲಿ 73 ರನ್ ಪೇರಿಸುವ ಮೂಲಕ 15ನೇ ಓವರ್‌ವರೆಗೂ ತಂಡ ಯಾವುದೇ ಅಪಾಯ ಎದುರಿಸದಂತೆ ನೋಡಿಕೊಂಡರು. ಆದರೆ ಸ್ಲಾಗ್ ಓವರ್‌ಗಳಲ್ಲಿ ರನ್‌ಗತಿ ಏರಿಸುವ ಪ್ರಯತ್ನದಲ್ಲಿದ್ದಾಗ ವಾರ್ನರ್ ನಿರ್ಗಮಿಸಿದರು. ಬಳಿಕ ಮನೀಷ್ ಪಾಂಡೆ ಕೂಡ ಅರ್ಧಶತಕ ಪೂರೈಸಿ ನಿರ್ಗಮಿಸಿದರು. ಈ ವೇಳೆ ಕೇನ್ ವಿಲಿಯಮ್ಸನ್ (22*ರನ್, 12 ಎಸೆತ, 2 ಸಿಕ್ಸರ್) ಬಿರುಸಿನ ಆಟದ ಮೂಲಕ ರನ್‌ಗತಿ ಏರಿಸಿದರು. ಇದರಿಂದಾಗಿ ಸನ್‌ರೈಸರ್ಸ್‌ ಕೊನೇ 2 ಓವರ್‌ಗಳಲ್ಲಿ 62 ರನ್ ಕಸಿಯುವಲ್ಲಿ ಸಲವಾಯಿತು. ಬ್ಯಾಟಿಂಗ್‌ಗೆ ಸವಾಲೆನಿಸಿದ್ದ ಪಿಚ್‌ನಲ್ಲಿ ಸನ್‌ರೈಸರ್ಸ್‌ ಬ್ಯಾಟ್ಸ್‌ಮನ್‌ಗಳಿಗೆ ಬೌಂಡರಿಗಿಂತ (6) ಸಿಕ್ಸರ್ (9) ಸಿಡಿಸುವುದೇ ಸುಲಭವೆನಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts