More

    ಮಿಲ್ಲರ್, ಮಾರಿಸ್ ಅಬ್ಬರ; ಡೆಲ್ಲಿ ಎದುರು ರೋಚಕ ಜಯ ಕಂಡ ರಾಜಸ್ಥಾನ

    ಮುಂಬೈ: ಬೌಲರ್‌ಗಳ ಅಬ್ಬರಕ್ಕೆ ಸಾಕ್ಷಿಯಾದ ಸಮರದಲ್ಲಿ ದಕ್ಷಿಣ ಆಫ್ರಿಕಾ ಆಟಗಾರರಾದ ಡೇವಿಡ್ ಮಿಲ್ಲರ್ (62ರನ್, 43 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಕ್ರಿಸ್ ಮಾರಿಸ್ (36*ರನ್, 18 ಎಸೆತ, 4 ಸಿಕ್ಸರ್) ಜೋಡಿ ಬಿರುಸಿನ ಬ್ಯಾಟಿಂಗ್ ಫಲವಾಗಿ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-14ರಲ್ಲಿ ಗೆಲುವಿನ ಹಳಿಗೇರಿತು. ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬಳಗ 3 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 4 ರನ್‌ಗಳಿಂದ ವೀರೋಚಿತ ಸೋಲು ಕಂಡಿದ್ದ ರಾಯಲ್ಸ್ ಆರಂಭಿಕ ಕುಸಿತದ ನಡುವೆಯೂ ಕಡೇ ಹಂತದಲ್ಲಿ ಕ್ರಿಸ್ ಮಾರಿಸ್ ಹೋರಾಟದ ಫಲವಾಗಿ ಗೆಲುವಿನ ದಡ ಸೇರಿತು.

    ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಬದಲಿಗೆ ಕರ್ನಾಟಕದ ಆಟಗಾರನಿಗೆ ಮಣೆ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ರಿಷಭ್ ಪಂತ್ (51ರನ್, 32 ಎಸೆತ, 9 ಬೌಂಡರಿ) ಅರ್ಧಶತಕದ ನೆರವಿನಿಂದ 8 ವಿಕೆಟ್‌ಗೆ 147 ರನ್‌ಪೇರಿಸಿದರೆ, ಪ್ರತಿಯಾಗಿ ರಾಜಸ್ಥಾನ ರಾಯಲ್ಸ್ ತಂಡ 19.4 ಓವರ್‌ಗಳಲ್ಲಿ 7 ವಿಕೆಟ್‌ಗೆ 150 ರನ್‌ಗಳಿಸಿ ಜಯದ ನಗೆ ಬೀರಿತು.

    ಡೆಲ್ಲಿ ಕ್ಯಾಪಿಟಲ್: 8 ವಿಕೆಟ್‌ಗೆ 147 (ರಿಷಭ್ ಪಂತ್ 51, ಲಲಿತ್ ಯಾದವ್ 20, ಟಾಮ್ ಕರ‌್ರನ್ 21, ಕ್ರಿಸ್ ವೋಕ್ಸ್ 15*, ಜೈದೇವ್ ಉನಾದ್ಕತ್ 15ಕ್ಕೆ 3, ಮುಸ್ತಾಫಿಜರ್ ರೆಹಮಾನ್ 29ಕ್ಕೆ 2), ರಾಜಸ್ಥಾನ ರಾಯಲ್ಸ್ : 19.4 ಓವರ್‌ಗಳಲ್ಲಿ 7 ವಿಕೆಟ್‌ಗೆ 150 (ಡೇವಿಡ್ ಮಿಲ್ಲರ್ 62, ರಾಹುಲ್ ತೆವಾಟಿಯಾ 19, ಕ್ರಿಸ್ ಮಾರಿಸ್ 36*, ಜೈದೇವ್ ಉನಾದ್ಕತ್ 11*, ಅವೇಶ್ ಖಾನ್ 32ಕ್ಕೆ 3, ಕ್ರಿಸ್ ವೋಕ್ಸ್ 22ಕ್ಕೆ 2, ಕಗಿಸೊ ರಬಾಡ 30ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts