More

    ರಾಜಸ್ಥಾನಕ್ಕೆ ಸಾಧಾರಣ ಗುರಿ ನೀಡಿದ ಪಂಜಾಬ್: ಶಿಖರ್ ಧವನ್ ಗೈರು

    ಮುಲ್ಲನ್‌ಪುರ: ಸಂಘಟಿತ ಬೌಲಿಂಗ್ ನಿರ್ವಹಣೆ ತೋರಿದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-17ರಲ್ಲಿ ಮಹಾರಾಜ ಯದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಪಂಜಾಬ್ ಕಿಂಗ್ಸ್ ತಂಡವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸಿದೆ.
    ಶನಿವಾರ ನಡೆದ ಟೂರ್ನಿಯ 27ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್, ಅಗ್ರ ಕ್ರಮಾಂಕ ಬ್ಯಾಟರ್‌ಗಳ ವೈಲ್ಯದಿಂದ 70 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಆಗ ಇಂಪ್ಯಾಕ್ಟ್ ಪ್ಲೇಯರ್ ಆಶುತೋಶ್ ಶರ್ಮ (31 ರನ್, 16 ಎಸೆತ, 1 ಬೌಂಡರಿ, 3 ಸಿಕ್ಸರ್) ಹೋರಾಟದ ಲವಾಗಿ ಅಂತಿಮವಾಗಿ 8 ವಿಕೆಟ್‌ಗೆ 147 ರನ್‌ಗಳ ಗೌರವಯುತ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ.

    ಸಾಧಾರಣ ಆರಂಭ: ಧವನ್ ಗೈರಿನಲ್ಲಿ ಜಾನಿ ಬೇರ್ ಸ್ಟೋ (15) ಜತೆಯಾಗಿ ಆಥರ್ವ ತೈಡೆ (10) ಇನಿಂಗ್ಸ್ ಆರಂಭಿಸಿದರು. ಆದರೆ ಈ ಜೋಡಿ ಉತ್ತಮ ಆರಂಭ ಒದಗಿಸಲು ವಿಲವಾಯಿತು. ಇವರಿಬ್ಬರು ಮೊದಲ ವಿಕೆಟ್‌ಗೆ 22 ಎಸೆತಗಳಲ್ಲಿ 27 ರನ್‌ಗಳಿಸಿತು. ಬಳಿಕ ಬೇರ್ ಸ್ಟೋ ರನ್‌ಗಳಿಸಲು ತಿಣುಕಾಡಿ ಟೂರ್ನಿಯಲ್ಲಿ ವೈಲ್ಯ ಮುಂದುವರಿಸಿದರು. ಪ್ರಭ್‌ಸಿಮ್ರಾನ್ ಸಿಂಗ್ (10), ಹಂಗಾಮಿ ನಾಯಕ ಸ್ಯಾಮ್ ಕರ‌್ರನ್ (6), ಶಶಾಂಕ್ ಸಿಂಗ್ (9) ಬೇಗನೆ ನಿರ್ಗಮಿಸಿದರು. ಕೇಶವ್ ಮಹಾರಾಜ್ (23ಕ್ಕೆ 2) ಪಂಜಾಬ್‌ಗೆ ಆರಂಭಿಕ ಕಡಿವಾಣ ಹೇರಿದರು.

    ಧವನ್ ಗೈರು:ಪಂಜಾಬ್ ಕಿಂಗ್ಸ್ ತಂಡದ ಕಾಯಂ ನಾಯಕ ಶಿಖರ್ ಧವನ್ ಗಾಯದ ಸಮಸ್ಯೆಯಿಂದಾಗಿ ರಾಜಸ್ಥಾನ ವಿರುದ್ಧದ ಪಂದ್ಯದಿಂದ ಹೊರಗುಳಿದರು. ಧವನ್ ಗೈರಿನಲ್ಲಿ ಆಲ್ರೌಂಡರ್ ಸ್ಯಾಮ್ ಕರ‌್ರನ್ ಹಂಗಾಮಿ ಸಾರಥ್ಯವಹಿಸಿದರು. ಟೂರ್ನಿ ಆರಂಭಕ್ಕೂ ಮುನ್ನ ಉಪನಾಯಕನಾಗಿ ನೇಮಕಗೊಂಡಿದ್ದ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮ, ಧವನ್ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸದಿರುವುದು ಅಚ್ಚರಿ ಸಹ ಮೂಡಿಸಿದೆ. ಧವನ್ ಬದಲಿಗೆ ಆಥರ್ವ ತೈಡೆ ಅವಕಾಶ ಪಡೆದರೆ, ಸಿಕಂದರ್ ರಾಜಾ, ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ಸ್ಥಾನ ಬಿಟ್ಟುಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts