More

    ನಾನು ಪೂಜಿಸುವ ನಾಲ್ಕು ದೇವರುಗಳ ಪೈಕಿ ಅವರೂ ಒಬ್ಬರು …

    `ಇವತ್ತು ನಾನೇನಾದರೂ ಆಗಿದ್ದರೆ, ಇಷ್ಟೊಂದು ಚಿತ್ರಗಳಲ್ಲಿ ನಟಿಸಿದ್ದರೆ, ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದರೆ ಅದಕ್ಕೆ ಕಾರಣ ಅವರೇ …’

    ಹಾಗಂತ ರಜನಿಕಾಂತ್ ಹೇಳಿಕೊಂಡಿದ್ದಾರೆ. ಅವರು ಹೀಗೆ ಹೇಳಿದ್ದು ತಮ್ಮ ಗುರುಗಳಾದ ಕೆ. ಬಾಲಚಂದರ್ ಅವರ ಬಗ್ಗೆ. 70ರ ದಶಕದಲ್ಲಿ ರಜನಿಕಾಂತ್ ಅವರನ್ನು ತಮಿಳು ಚಿತ್ರಂಗಕ್ಕೆ, `ಅಪೂರ್ವ ರಾಗಂಗಳ್’ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದು ಕೆ. ಬಾಲಚಂದರ್ ಅವರೇ. ಬರೀ ಪರಿಚಯಿಸಿದ್ದಷ್ಟೇ ಅಲ್ಲ, ರಜನಿಕಾಂತ್ ಅವರ ಆರಂಭದ ದಿನಗಳಲ್ಲಿ ಹಲವು ಅವಕಾಶಗಳನ್ನು ಕೊಟ್ಟವರೂ ಅವರೇ. ಅಷ್ಟೇ ಅಲ್ಲ, ರಜನಿಕಾಂತ್ ಅಭಿನಯದ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದ ಬಾಲಚಂದರ್, ರಜನಿ ಅಭಿನಯದ ನೂರನೇ ಚಿತ್ರವನ್ನು ಸಹ ನಿರ್ದೇಶಿಸಿದ್ದರು.

    ಇದನ್ನೂ ಓದಿ: ಎಲ್ಲಿ ಕರಣ್ ಅಳ್ತಿಲ್ವಲ್ಲಾ? ಟ್ರೋಲಿಗರ ಪ್ರಶ್ನೆ

    ಗುರುವಾರ ಕೆ. ಬಾಲಚಂದರ್ ಅವರ 90ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ರಜನಿಕಾಂತ್ ಅವರು ತಮ್ಮ ಗುರುಗಳನ್ನು ನೆನಪಿಸಿಕೊಂಡಿದ್ದಾರೆ. ಒಂದು ವಿಡಿಯೋ ಬಿಡುಗಡೆ ಮಾಡುವ ಮೂಲಕ ತಮ್ಮ ಮತ್ತು ತಮ್ಮ ಗುರುಗಳ ಸಂಬಂಧವನ್ನು ಹೇಳಿಕೊಂಡಿದ್ದಾರೆ.

    `ಇವತ್ತು ನಾನೇನಾದರೂ ಸ್ವಲ್ಪ ಸಾಧಿಸಿದ್ದರೆ, ಅದಕ್ಕೆ ಕಾರಣ ಕೆ. ಬಾಲಚಂದರ್. ಚೆನ್ನೈ ಫಿಲ್ಮ್ ಇನ್‍ಸ್ಟಿಟ್ಯೂಟ್‍ನಿಂದ ಪಾಸ್ ಆಗಿ ಬಂದವನನ್ನು ಗುರುತಿಸಿ, ಅವಕಾಶ ಕೊಟ್ಟು, ಪೋಸಿಷದಿದ್ದರೆ, ನಾನು ಇಷ್ಟು ಎತ್ತರಕ್ಕೆ ಬೆಳೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ನನ್ನ ಪಾಲಿನ ನಾಲ್ಕು ದೇವರಗಳಲ್ಲಿ ಅವರೂ ಒಬ್ಬರು. ನನ್ನ ತಂದೆ, ತಾಯಿ, ಸಹೋದರ ಸತ್ಯನಾರಾಯಣ್ ಜತೆಗೆ ಅವರೂ ನನ್ನ ಪಾಲಿನ ದೇವರು’ ಎಂದು ರಜನಿಕಾಂತ್ ಭಾವುಕರಾಗಿ ನುಡಿದಿದ್ದಾರೆ.

    ಇದನ್ನೂ ಓದಿ: ಜಯಂತಿ ಆರೋಗ್ಯದಲ್ಲಿ ಚೇತರಿಕೆ

    `ಬಾಲಚಂದರ್ ಸಾರ್ ನನ್ನನ್ನು ಪರಿಚಯಿಸದಿದ್ದರೂ, ನಾನು ನಟನಾಗಿರುತ್ತಿದ್ದೆ. ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿರುತ್ತಿದ್ದೆ. ಇಷ್ಟೊತ್ತಿಗೆ ಜನ ನನ್ನನ್ನೂ ಮರೆತೂಬಿಡುತ್ತಿದ್ದರು. ಆದರೆ, ಇವತ್ತು ನಾನು ಒಂದಿಷ್ಟು ಹೆಸರು ಮಾಡಿದ್ದರೆ, ಅದಕ್ಕೆ ಕಾರಣ ಬಾಲಚಂದರ್. ನಾನೇನೂ ಅಲ್ಲದ ಸಂದರ್ಭದಲ್ಲಿ ನಾಲ್ಕು ಚಿತ್ರಗಳಲ್ಲಿ ನನಗೆ ಪ್ರಮುಖ ಪಾತ್ರಗಳನ್ನು ನೀಡಿದರು. ನನ್ನ ಪಾಸಿಟಿವ್‍ಗಳನ್ನು ಪತ್ತೆ ಮಾಡಿ, ಅದನ್ನೇ ಜಗತ್ತಿಗೆ ತೋರಿಸಿದರು. ನನ್ನನ್ನೊಬ್ಬ ಪರಿಪೂರ್ಣ ನಟನನ್ನಾಗಿ ಮಾಡಿದರು’ ಎಂದು ರಜನಿಕಾಂತ್ ಹೇಳಿಕೊಂಡಿದ್ದಾರೆ.

    ಉತ್ಸಾಹಿ ಯುವಕರ ಬೆನ್ನಿಗೆ ನಿಲ್ಲಲು ರೆಡಿಯಾದ್ರಾ ರಾಜಮೌಳಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts