More

    ತಂಡ ಸಮೇತ ಬೆಂಗಳೂರಿಗೆ ಬರಲಿದ್ದಾರೆ ರಾಜಮೌಳಿ, ಜೂ.ಎನ್​ಟಿಆರ್​; ಕಾರಣ ‘ಆರ್​​​ಆರ್​​​ಆರ್’…

    ಬೆಂಗಳೂರು: ನಿರ್ದೇಶಕ ರಾಜಮೌಳಿ ಸಿನಿಮಾ ‘ಆರ್​​​ಆರ್​​​ಆರ್’ಗೆಂದು ಇಡೀ ಭಾರತದ ಸಿನಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಬರೋಬ್ಬರಿ 350-400 ಕೋಟಿ ರೂ. ಬಂಡವಾಳ ಹೊಂದಿರುವ ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದಲ್ಲಿನ 3 ಹಾಡುಗಳು, 5 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

    ಇನ್ನು ಸಿನಿಮಾ 2022 ಜನವರಿ 7ಕ್ಕೆ ರಿಲೀಸ್ ಆಗಲು ರೆಡಿಯಾಗಿದೆ. ಹಾಗಾಗಿ, ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರ ಅಂಗವಾಗಿ ಆರ್​​​ಆರ್​​​ಆರ್ ಚಿತ್ರತಂಡ ಬೆಂಗಳೂರಿಗೆ ಕಾಲಿಡಲು ಸಜ್ಜಾಗಿದೆ.

    ಇದನ್ನೂ ಓದಿ: ಅತಿಯಾಸೆ ಗತಿಗೇಡು: ಕ್ರಿಪ್ಟೋಕರೆನ್ಸಿಯಲ್ಲಿ ಹಣ ಕಳ್ಕೊಂಡ.. ಬಳಿಕ ಕಾರು-ಚೆಕ್​ ಮಾತ್ರವಲ್ಲ, ಲಾಡ್ಜ್​ನಲ್ಲಿ ಪ್ರಾಣ ಕೂಡ ಕಳ್ಕೊಂಡ..

    ನವೆಂಬರ್ 26 ರಂದು ಚಿತ್ರತಂಡ ಬೆಂಗಳೂರಿಗೆ ಆಗಮಿಸಿ ತಮ್ಮ ‘ಆರ್​​​ಆರ್​​​ಆರ್’ ಸಿನಿಮಾ ಪ್ರಚಾರ ಮಾಡಲಿದ್ದಾರೆ. ರಾಜಮೌಳಿ ಸಿನಿ ಕರಿಯರ್ ಬದಲಾಯಿಸಿದ ಸಿನಿಮಾ ಅಂದರೆ ಅದು ‘ಬಾಹುಬಲಿ’. ಆ ಸಿನಿಮಾದಿಂದ ಅವರು ಇಡೀ ಜಗತ್ತಿನ ಗಮನ ಸೆಳೆದರು. ಆದರೆ, ‘ಬಾಹುಬಲಿ’ ಸಿನಿಮಾ ಬರೀ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಈಗ ‘ಆರ್​​​ಆರ್​​​ಆರ್’ ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಕನ್ನಡ ಪ್ರೇಕ್ಷಕರು ತಮ್ಮ ನೆಚ್ಚಿನ ನಿರ್ದೇಶಕನ ಸಿನಿಮಾ ತಮ್ಮ ಭಾಷೆಯಲ್ಲೇ ನೋಡಬಹುದು.

    ಇದನ್ನೂ ಓದಿ: ದನ ಕೊಳ್ಳಲು ಹಣವಿಲ್ಲ ಎಂಬ ಚಿಂತೆಯಲ್ಲಿದ್ದವರ ಬ್ಯಾಂಕ್​ ಖಾತೆಗೆ ಬಂತು 2 ಕೋಟಿ ರೂಪಾಯಿ!; ಕಾರಣ ‘ಕೌ ಇನ್​ಸ್ಪೆಕ್ಟರ್’ ಝಾನ್ಸಿ..

    ಇದೇ ಕಾರಣಕ್ಕೆ ‘ಆರ್​​​ಆರ್​​​ಆರ್’ ತಂಡ ಪ್ರೇಕ್ಷಕರಿಗೆ ಚಿತ್ರವನ್ನು ಕನ್ನಡದಲ್ಲಿಯೇ ನೋಡಿ ಆನಂದಿಸಿ ಎಂದು ವಿನಂತಿಸಲು ಬೆಂಗಳೂರಿಗೆ ಬರುತ್ತಿದ್ದಾರೆ. ಪ್ರಚಾರ ಕಾರ್ಯಕ್ರಮದಲ್ಲಿ ಇಡೀ ಆರ್​​ಆರ್​​ಆರ್ ಸಿನಿಮಾ ತಂಡ ಭಾಗಿಯಾಗಲಿದೆ ಎನ್ನುವುದು ಸದ್ಯದ ಮಾಹಿತಿ. ಜೊತೆಗೆ, ಸಿನಿಮಾ ತಂಡ ದೇಶದ ಬೇರೆ ಬೇರೆ ಪ್ರಮುಖ ಸ್ಥಳಗಳಿಗೂ ಭೇಟಿ ನೀಡಲಿದ್ದಾರೆ.

    ಇದನ್ನೂ ಓದಿ: ಕಾರು-ಟ್ರ್ಯಾಕ್ಟರ್ ಭೀಕರ ಅಪಘಾತ: ತಾಯಿ, ಮಗ, 6 ವರ್ಷದ ಮೊಮ್ಮಗು ಸ್ಥಳದಲ್ಲೇ ಸಾವು, ಇನ್ನೊಬ್ಬಾಕೆಯ ಸ್ಥಿತಿ ಚಿಂತಾಜನಕ…

    ಸಿನಿಮಾದ ಟ್ರೈಲರ್ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇಲ್ಲಿಯವರೆಗೆ ಸಿನಿಮಾ ಪೋಸ್ಟರ್​​​ಗಳನ್ನು, ಹಾಡುಗಳನ್ನು, ವಿಶೇಷ ವಿಡಿಯೋಗಳನ್ನು ಆಧರಿಸಿದ ಕನ್ನಡಿಗರು ಮುಂದೆ ಚಿತ್ರದ ಟ್ರೈಲರ್, ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳಲಿದ್ದಾರೆ ಎನ್ನುವ ಭರವಸೆ ಚಿತ್ರತಂಡಕ್ಕೆ ಇದೆ.

    ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತ ಮೂರೇ ದಿನಕ್ಕೆ ಅಮ್ಮ ಇನ್ನಿಲ್ಲ; ಸಿಜೇರಿಯನ್ ಮಾಡಿದ ವೈದ್ಯರ ನಿರ್ಲಕ್ಷ್ಯ ಎಂದು ಪಾಲಕರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts