More

    ಮುದ್ದೇಬಿಹಾಳದಲ್ಲಿ ಮಳೆ&ಗಾಳಿಗೆ ಹಲವೆಡೆ ಹಾನಿ

    ಮುದ್ದೇಬಿಹಾಳ: ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಗುರುವಾರ ಭಾರಿ ಗಾಳಿ, ಮಳೆಗೆ ಹಲವು ಅವಡಗಳು ಸಂಭವಿಸಿವೆ. ಪಟ್ಟಣದ ಬಸ್​ ನಿಲ್ದಾಣದ ಎದುರಿಗೆ ಮುಖ್ಯ ರಸ್ತೆ ಪಕ್ಕದ ುಟ್​ಪಾತ್​ ಮೇಲೆ ನುಗ್ಗೆಕಾಯಿ ಮತ್ತು ನೀಲಗಿರಿ ಮರಗಳು ಮುರಿದು ಬಿದ್ದಿವೆ.

    ಈ ವೇಳೆ ುಟ್​ಪಾತ್​ನಲ್ಲಿದ್ದ ಹಣ್ಣು, ಹೂವಿನ ಗೂಡಂಗಡಿಗಳ ವ್ಯಾಪಾರಸ್ಥರು, ಗ್ರಾಹಕರು ದೂರ ಓಡಿ ಹೋಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಹಲವೆಡೆ ವಿದ್ಯುತ್​ ತಂತಿಗಳ ಮೇಲೆ ಮರದ ಕೊಂಬೆಗಳು ಮುರಿದು ಬಿದ್ದು ಸಮಸ್ಯೆ ಉಂಟಾಗಿತ್ತು. ಹೆಸ್ಕಾ ಸಿಬ್ಬಂದಿ ಮರದ ಕೊಂಬೆಗಳನ್ನು ತೆರವುಗೊಳಿಸಿದರು. ಬಸ್​ ನಿಲ್ದಾಣದ ಎದುರು ಮುರಿದ ಬಿದ್ದಿದ್ದ ಮರಗಳನ್ನು ಪುರಸಭೆಯವರು ಜೆಸಿಬಿ ಬಳಸಿ ತೆರವುಗೊಳಿಸಿದರು.

    ಭಾರಿ ಮಳೆಗೆ ಬಸವೇಶ್ವರ ವೃತ್ತ ಸೇರಿ ಕೆಲವೆಡೆ ತಗ್ಗು ಪ್ರದೇಶಗಳಲ್ಲಿನ ಅಂಗಡಿಗಳಿಗೆ ನೀರು ನುಗ್ಗಿದ್ದು, ಸಾಮಗ್ರಿಯಾಗಿವೆ. ಅಂಗಡಿಯವರು ಒಳಗೆ ಬಂದ ನೀರನ್ನು ಹೊರಗೆ ಹಾಕಲು ಹರಸಾಹಸ ಪಟ್ಟರು.

    ಬಸ್​ ನಿಲ್ದಾಣದ ಎದುರಿನ ತಾಲೂಕು ಪಂಚಾಯಿತಿ ಕಚೇರಿ ಹಾಗೂ ಅಕ್ಕಪಕ್ಕದಲ್ಲಿರುವ ಡಬ್ಬಾ ಅಂಗಡಿಗಳಿಗೂ ನೀರು ನುಗ್ಗಿತ್ತು. ಗೆದ್ದಲಮರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ದೊಡ್ಡ ಬೇವಿನ ಮರ ಮುರಿದು ಬಿದ್ದು ಸಂಚಾರಕ್ಕೆ ಕೆಲ ಹೊತ್ತು ಸಮಸ್ಯೆಯಾಗಿತ್ತು.

    ಕವಡಿಮಟ್ಟಿಯಲ್ಲಿ ಮಳೆ ಗಾಳಿಗೆ ಮರಗಳು ಉರುಳಿ ಕೆಲವೆಡೆ ಹಾನಿ ಸಂಭವಿಸಿವೆ. ದೊಡ್ಡ ಚರಂಡಿಗಳಲ್ಲಿ ಪ್ಲಾಸ್ಟಿಕ್​ ಸೇರಿ ಇನ್ನಿತರ ನ ತ್ಯಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಂಡಿದ್ದರಿಂದ ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೆ ರಸ್ತೆಯಲ್ಲಿ ಚರಂಡಿ ತ್ಯಾಜ್ಯ ಹರಡುವಂತಾಗಿತ್ತು.

    ಸಿಡಿಲಿಗೆ ಆಕಳು, ಎಮ್ಮೆ ಬಲಿ : ಮುದ್ದೇಬಿಹಾಳ ತಾಲೂಕಿನ ಗೋನಾಳ ಎಸ್​.ಎಚ್​. ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ರೈತ ಬಸವರಾಜ ಪಾಟೀಲ ಅವರ 50,000 ರೂ. ಮೌಲ್ಯದ ಆಕಳು, ಬಸಪ್ಪ ಉಪ್ಪಲದಿನ್ನಿ ಅವರ 80,000 ರೂ. ಮೌಲ್ಯದ ಎತ್ತು ಹಾಗೂ ಹಡಲಗೇರಿ ಗ್ರಾಮದಲ್ಲಿ ನಾಗಪ್ಪ ಹುಳ್ಳಿ ಅವರ ಅಂದಾಜು 40,000 ರೂ. ಮೌಲ್ಯದ ಎಮ್ಮೆ ಬಲಿಯಾಗಿದೆ. ತಾಲೂಕಿನ ಅಡವಿ ಹುಲಗಬಾಳ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಹಣಮಂತ್ರಾಯ ಕಂಬಾರ ಅವರ ಒಂದು ಲ ರೂ. ಮೌಲ್ಯದ ಎತ್ತು ಸಾವಿಗೀಡಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts