More

    ನಾಳೆಯಿಂದ ರಾಜ್ಯದ ಹಲವೆಡೆ ಮಳೆ ಸಿಂಚನ :ಹವಾಮಾನ ಇಲಾಖೆ ಮೂನ್ಸೂಚನೆ

    ಬೆಂಗಳೂರು: ಬಿಸಿಲು ಹೊಡೆತಕ್ಕೆ ತತ್ತರಿಸಿರುವ ರಾಜ್ಯದಲ್ಲಿ ಏ.11ರಿಂದ ಮಳೆ ಸಿಂಚನವಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಏ.15ರಿಂದ ಮುಂದಿನ ಮೂರು ದಿನ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ.

    ಬಾಗಲಕೋಟೆ, ಬೆಳಗಾವಿ, ಬೀದರ್​, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಏ.12ರಿಂದ ಮುಂದಿನ ನಾಲ್ಕ ದಿನ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಏ.11ರಿಂದ ಏ.17ರವರೆಗೆ ಗುಡುಗು ಮಿಂಚು ಸಹಿತ ಮಳೆ ಬೀಳಲಿದೆ. ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯನಗರ, ಚಿತ್ರದುರ್ಗ, ದಾವಣಗೆರೆ, ಏ.13 ಮತ್ತು ಏ.14ರಂದು ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಜೂ. ಎನ್​ಟಿಆರ್​ ವಾಚ್​ ಬೆಲೆ ಕೇಳಿ ದಂಗಾದ್ರೂ ಫ್ಯಾನ್ಸ್​! ಇದನ್ನು ಮಾರಿದ್ರೆ ಐದಾರು ಮಂದಿಯ ಲೈಫ್​ ಸೆಟ್ಲ್

    ತಾಪಮಾನ ತುಸು ಇಳಿಕೆ: ಉತ್ತರ ಕರ್ನಾಟಕ ಹಲವು ಜಿಲ್ಲೆಗಳಲ್ಲಿ 42ರ ಅಸುಪಾಸಿನಲ್ಲಿ ದಾಖಲಾಗುತ್ತಿದ್ದ ಉಷ್ಣಾಂಶ ತುಸು ಇಳಿಮುಖವಾಗಿದೆ. ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ ಸೇರಿ ಕೆಲ ಜಿಲ್ಲೆಗಳಲ್ಲಿ ತಾಪಮಾನ ತುಸು ಕೆಳಗಿಳಿದಿದೆ. ಮುಂದಿನ ಐದು ದಿನಗಳಲ್ಲಿ ತಾಪಮಾನದಲ್ಲಿ ದೊಡ್ಡ ಬದಲಾವಣೆ ಆಗುವುದಿಲ್ಲ ಎಂದು ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಏಪ್ರಿಲ್​ ಮೊದಲ ವಾರದಿಂದ ಬೆಂಗಳೂರಿನಲ್ಲಿ 37ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿತ್ತು. ಮುಂದಿನ ಎರಡು ದಿನ 35-36 ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗಲಿದೆ. ಇದೇ ರೀತಿ ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ತಾಪಮಾನದಲ್ಲಿ ಅಷ್ಟೊಂದು ಬದಲಾವಣೆ ಕಂಡುಬರುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts