More

    ಇಂಗ್ಲೆಂಡ್​-ವಿಂಡೀಸ್​ 2ನೇ ಟೆಸ್ಟ್​ಗೂ ಮಳೆ ಅಡಚಣೆ

    ಮ್ಯಾಂಚೆಸ್ಟರ್​: ಆತಿಥೇಯ ಇಂಗ್ಲೆಂಡ್​ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಟೆಸ್ಟ್​ ಸರಣಿಯ ಮೊದಲ ಪಂದ್ಯದ ಮೊದಲ ದಿನದಾಟಕ್ಕೆ ಅಡ್ಡಿಪಡಿಸಿದ್ದ ಮಳೆ ಎರಡನೇ ಟೆಸ್ಟ್​ ಪಂದ್ಯಕ್ಕೂ ಅಡಚಣೆ ತಂದಿದೆ. ಇದರಿಂದಾಗಿ ಪಂದ್ಯ ಟಾಸ್​ ಪ್ರಕ್ರಿಯೆ ವಿಳಂಬಗೊಂಡಿದೆ.

    ಬೆಳಗ್ಗೆ ಮಳೆ ಸುರಿದ ಕಾರಣ ಓಲ್ಡ್​ ಟ್ರಾಫೋರ್ಡ್​ ಕ್ರೀಡಾಂಗಣವನ್ನು ಹೊದಿಕೆಯಿಂದ ಮುಚ್ಚಲಾಗಿದೆ. ಇದರಿಂದಾಗಿ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ನಡೆಯಬೇಕಾಗಿದ್ದ ಟಾಸ್​ ಪ್ರಕ್ರಿಯೆ ನಿಗದಿಯಂತೆ ನಡೆದಿಲ್ಲ. ಸೌಥಾಂಪ್ಟನ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲೂ ಮಳೆಯಿಂದಾಗಿ ಟಾಸ್​ ವಿಳಂಬಗೊಂಡಿತ್ತು. ಭೋಜನ ವಿರಾಮದ ಬಳಿಕ ಟಾಸ್​ ನಡೆದಿತ್ತು ಮತ್ತು ಇಡೀ ದಿನ ಕೇವಲ 106 ಎಸೆತಗಳ ಆಟ ನಡೆದಿತ್ತು.

    ಇದನ್ನೂ ಓದಿ: ಯುಎಇಯಲ್ಲಿ ಐಪಿಎಲ್​ ಆಯೋಜನೆಗೆ ಬಿಸಿಸಿಐ ಪ್ಲ್ಯಾನ್​ ಹೇಗಿದೆ ಗೊತ್ತಾ?

    3 ಪಂದ್ಯಗಳ ಸರಣಿಯಲ್ಲಿ ಈಗ ವೆಸ್ಟ್​ ಇಂಡೀಸ್​ 1-0 ಮುನ್ನಡೆಯಲ್ಲಿದೆ. ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ 4 ವಿಕೆಟ್​ಗಳಿಂದ ಸೋಲು ಕಂಡಿತ್ತು. ಈ ಪಂದ್ಯದಲ್ಲೂ ಗೆದ್ದರೆ ವಿಂಡೀಸ್​ 32 ವರ್ಷಗಳ ಬಳಿಕ ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿ ಜಯಿಸಿದ ಸಾಧನೆ ಮಾಡಲಿದೆ. ಇಂಗ್ಲೆಂಡ್​ ವೇಗಿ ಜೋಫ್ರಾ ಆರ್ಚರ್​ ಜೈವಿಕ-ಸುರಕ್ಷಾ ವಾತಾವರಣದ ನಿಯಮ ಉಲ್ಲಂಘನೆ ಮಾಡಿರುವ ಕಾರಣ 2ನೇ ಟೆಸ್ಟ್​ ಪಂದ್ಯದಿಂದ ಹೊರಬಿದ್ದಿದ್ದಾರೆ.

    ಜೈವಿಕ ಸುರಕ್ಷೆಯಿಂದ ಹೊರಹೋದ ಆರ್ಚರ್​ 2ನೇ ಟೆಸ್ಟ್​ನಿಂದ ಔಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts