More

    ಮಳೆ ಕೊರತೆಯಿಂದ ಬೆಳೆ ಹಾಳು, ಪರಿಹಾರ ನೀಡುವಂತೆ ರೈತರ ಆಗ್ರಹ

    ಅಳವಂಡಿ: ಬೆಳೆಹಾನಿ ನೀಡುವಂತೆ ಕಂದಾಯ ಇಲಾಖೆಯ ಗ್ರಾಮಾಡಳಿತ ಅಧಿಕಾರಿ ಮಲ್ಲಮ್ಮ, ಕೃಷಿ ಅಧಿಕಾರಿಗಳಾದ ಪ್ರತಾಪಗೌಡ ನಂದನಗೌಡ್ರ, ಬಿ.ಎಂ.ಗೊಬ್ಬರಗುಂಪಿ, ಗ್ರಾಪಂ ಪಿಡಿಒ ಬಸವರಾಜ ಕೀರ್ದಿ ಅವರಿಗೆ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಮನವಿ ಸಲ್ಲಿಸಿದರು.

    ಇದನ್ನೂ ಓದಿ: ರೈತರಿಗೆ ಆರ್ಥಿಕ ನಷ್ಟ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಆಗ್ರಹ

    ವಲಯ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ನಡೆಸಲಾಯಿತು. ಆದರೆ, ಇದುವರೆಗೂ ಮಳೆಯಾಗಿಲ್ಲ. ಇದರಿಂದ ಬೆಳೆಗಳು ತೇವಾಂಶದಿಂದ ನಾಶವಾಗುವ ಹಂತ ತಲುಪಿವೆ.

    ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆ ಹಾನಿಯಾದರೂ ಇನ್ಸುರೆನ್ಸ್ ಕಂಪನಿಯವರು ಬೆಳೆವಿಮೆ ಕೊಟ್ಟಿಲ್ಲ, ಹಿಂಗಾರು ಹಂಗಾಮಿನಲ್ಲಿಯೂ ಅಳವಂಡಿ ಗ್ರಾಪಂ ವ್ಯಾಪ್ತಿಯಲ್ಲಿ ಕಡಲೆ (ಹುಳಕಡಲೆ), ಜೋಳಕ್ಕೂ ಬೆಳೆವಿಮೆ ಹಣ ನೀಡಿಲ್ಲ.

    ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಬಿತ್ತಿದ ಬೆಳೆಗಳು ಒಣಗಿದ್ದು, ರೈತ ನಷ್ಟದ ಹಾದಿ ಹಿಡಿದಿದ್ದಾನೆ. ಕೂಡಲೇ ಸರ್ಕಾರ ರೈತರಿಗೆ ಬೆಳೆಹಾನಿ ಪರಹಾರ ನೀಡಬೇಕು ಎಂದು ಆಗ್ರಹಿಸಿದರು.

    ರೈತರಾದ ಹನುಮಂತ ಮೂಲಿಮನಿ, ಶ್ರೀನಿವಾಸ ಕಲಾದಗಿ, ರೇಣುಕಪ್ಪ ಹಳ್ಳಿಕೇರಿ, ಅನಿಲ ಹಕ್ಕಂಡಿ, ಪರಪ್ಪ ನಾಗರಳ್ಳಿ, ಹನುಮಂತಪ್ಪ ಉಂಕಿ, ಸುರೇಶ ಚನ್ನಳ್ಳಿ, ವಿರುಪಕ್ಷಿ ಜೋಳದ, ಶಂಕರಪ್ಪ, ವೀರಪ್ಪ, ರವಿಶಂಕರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts