More

    ಮಳೆಯಿಂದ ಮೂರು ಮನೆಗೆ ಹಾನಿ

    ಸೊರಬ: ಪಟ್ಟಣದ ಸುತ್ತಮುತ್ತ ಗುರುವಾರ ಸುರಿದ ಮಳೆಯಿಂದ ವ್ಯಾಪ್ತಿಯ ಹಲವೆಡೆ ರಸ್ತೆಬದಿಯ ಮರಗಳು ಮತ್ತು ವಿದ್ಯುತ್ ಕಂಬಗಳು, ತೆಂಗು ಮತ್ತು ಅಡಕೆ ಮರಗಳು ಧರೆಗುರುಳಿವೆ. ಕೆಲವೆಡೆ ಮನೆಯ ಹೆಂಚುಗಳು, ಶೀಟ್‌ಗಳು ಹಾರಿಹೋಗಿವೆ.

    ರಾಜೀವ್ ನಗರದಲ್ಲಿ ರಾಘವೇಂದ್ರ, ಕಮಲಮ್ಮ ಎಂಬುವರ ಮನೆಗಳು, ಹೊಸಪೇಟೆ ಬಡಾವಣೆಯಲ್ಲಿ ನೀಲಮ್ಮ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಗೀಡಾಗಿವೆ.
    ಹೊಸಪೇಟೆ ಬಡಾವಣೆಯ ನಂದನ ಲೇಔಟ್ ಎದುರು 2 ವಿದ್ಯುತ್ ಕಂಬ, ಹೊಸಬಾಳೆ ರಸ್ತೆ ಕಾಳೆ ಮಿಲ್ ಹತ್ತಿರ 2, ರಾಜೀವ್ ನಗರದಲ್ಲಿ 8, ಕಾನುಕೇರಿ 3, ಕೆಇಬಿ ಕಾಲನಿ 2 ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಯಲಸಿ, ಕರಡಿಗೆರೆ, ಗುಂಡಶೆಟ್ಟಿಕೊಪ್ಪ, ಕಕ್ಕರಸಿ, ಜಂಗಿನಕೊಪ್ಪ, ಮರೂರು, ನಡಹಳ್ಳಿ ಗ್ರಾಮಗಳಲ್ಲಿ 22 ವಿದ್ಯುತ್ ಕಂಬಗಳು ಸೇರಿ 39 ಕಂಬಗಳು ನೆಲಕಚ್ಚಿವೆ.
    ಹೊಸಪೇಟೆ ಬಡಾವಣೆಯ ಚಂದ್ರಗುತ್ತಿ-ಸಿದ್ದಾಪುರ ರಸ್ತೆ, ಜಂಗೀನಕೊಪ್ಪ, ಹೊಸಬಾಳೆ ರಸ್ತೆ ಸರ್ಕಲ್, ಹಳೇ ಸೊರಬ ರಸ್ತೆಯಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಕಂಬಗಳು ತುಂಡಾಗಿ ಬಿದ್ದಿವೆ. ಪಟ್ಟಣದ ಮುರುಘಾ ಮಠದ ಸಮೀಪ ತೆಂಗಿನ ಹಾಗೂ ಅಡಕೆ ಮರಗಳು ಬಿದ್ದಿವೆ. ಕೆಲ ಸಮಯ ರಸ್ತೆ ಸಂಚಾರಕ್ಕೆ ಆಡಚಣೆ ಊಂಟಾಗಿತ್ತು. ಸ್ಥಳಕ್ಕೆ ಮೆಸ್ಕಾಂ ಎಇಇ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts