ರೈಲು ಸಂಚಾರ ವಿಸ್ತರಣೆ

1 Min Read
ರೈಲು ಸಂಚಾರ ವಿಸ್ತರಣೆ

ಹುಬ್ಬಳ್ಳಿ : ವಿವಿಧ ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೆ ವಲಯ ವಿಸ್ತರಿಸಿದೆ.

ಎಸ್​ಎಸ್​ಎಸ್ ಹುಬ್ಬಳ್ಳಿ – ರಾಮೇಶ್ವರಮ್ ರೈಲು ಸಂಚಾರವನ್ನು ಜುಲೈ 6 ರಿಂದ ಡಿಸೆಂಬರ್ 28ರವರೆಗೆ, ರಾಮೇಶ್ವರಮ್ ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ಸಂಚಾರವನ್ನು ಜು. 7 ರಿಂದ ಡಿ. 29ರವರೆಗೆ, ಯಶವಂತಪುರ- ವಿಜಯಪುರ ರೈಲು ಸಂಚಾರವನ್ನು ಜು. 1 ರಿಂದ ಡಿ, 25 ರವರೆಗೆ, ವಿಜಯಪುರ- ಯಶಂತಪುರ ರೈಲು ಸಂಚಾರವನ್ನು ಜು. 2 ರಿಂದ 2025ರ ಜ. 1ರವರೆಗೆ, ಎಸ್​ಎಸ್​ಎಸ್ ಹುಬ್ಬಳ್ಳಿ – ಕೆಎಸ್​ಆರ್ ಬೆಂಗಳೂರು ರೈಲು ಸಂಚಾರವನ್ನು ಜು. 1 ರಿಂದ ಡಿ. 31ರವರೆಗೆ, ಕೆಎಸ್​ಆರ್ ಬೆಂಗಳೂರು – ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ಸಂಚಾರವನ್ನು ಜು. 2 ರಿಂದ 2025ರ ಜ. 1ರವರೆಗೆ ವಿಸ್ತರಿಸಲಾಗಿದೆ.

See also  ವಕೀಲರು, ಪೊಲೀಸರ ಮಧ್ಯೆ ಜಟಾಪಟಿ
Share This Article