More

    ಸಿಡಿಲು ಬಡಿದು ಬೈಕ್ ಸವಾರರಿಬ್ಬರ ಸಾವು :ಪತ್ರಾಸ್ ಮೇಲಿನ ಕಲ್ಲು ಬಿದ್ದು ಬಾಲಕಿ ಬಲಿ


    ಕಲಬುರಗಿ : ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಹಲವಡೆ ಭಾನುವಾರ ಸಂಜೆ ಗುಡುಗು,ಸಿಡಲು ಬಿರುಗಾಳಿಯೊಂದಿಗೆ ಅಬ್ಬರದ ಮಳೆಯಾಗಿದೆ. ವಿದ್ಯುತ್ ಕಂಬ, ಮರ-ಗಿಡಗಳು ನೆಲಕ್ಕುರುಳಿವೆ. ಸಿಡಿಲು ಬಡಿದು ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಬಳಿ ಇಬ್ಬರು ಮೃತಪಟ್ಟರೆ, ಪತ್ರಾಸ್ ಹಾರಿ ಗುರುಮಠಕಲ್ ಪಟ್ಟಣದಲ್ಲಿ ಬಾಲಕಿ ಬಲಿಯಾಗಿದ್ದಾಳೆ.
    ರಾಷ್ಟಿçÃಯ ಹೆದ್ದಾರಿ ೧೫೦ರಲ್ಲಿರುವ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಬಳಿ ಸಿಡಿಲು ಬಡಿದು ವಾಡಿ ಪಟ್ಟಣದ ನಿವಾಸಿಗಳಾಗಿದ್ದ ಪ್ರಕಾಶ ಅಲಿಯಾಸ್ ದೊಂಡಿರಾಮ (೫೦) ಮತ್ತು ಸತೀಶ (೪೫) ಮೃತಪಟ್ಟಿದ್ದಾರೆ.ಕೆಲಸ ನಿಮಿತ್ತ ಇಬ್ಬರು ಸೇರಿಕೊಂಡು ಬೈಕ್ ಮೇಲೆ ನಾಲವಾರಕ್ಕೆ ಹೋಗಿ ಮರಳಿ ವಾಡಿಗೆ ಬರುವಾಗ ಜೋರಾದ ಮಳೆ ಶುರುವಾಗಿದ್ದರಿಂದ ಲಾಡ್ಲಾಪುರ ಹೊರವಲಯದಲ್ಲಿ ಬೈಕ್ ನಿಲ್ಲಿಸಿ, ಮರದ ಆಸರೆಗೆ ನಿಂತುಕೊAಡಿದ್ದಾಗ ಸಿಡಿಲು ಹೊಡೆದಿದ್ದರಿಂದ ಇಬ್ಬರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
    ಪತ್ರಾಸ್ ಹಾರಿ ಅದರ ಮೇಲಿದ್ದ ಕಲ್ಲು ಬಿದ್ದ ಪರಿಣಾಮ ಗುರುಮಠಕಲ್ ಪಟ್ಟಣದ ಉಪ್ಪಾರಗಡ್ಡ ಬಡಾವಣೆಯ ತಿಮ್ಮಪ್ಪ-ಪದ್ಮಮ್ಮ ದಂಪತಿ ಪುತ್ರಿ ಮಾನಸ (೬) ಮೃತಪಟ್ಟಿದ್ದಾಳೆ. ಸಂಜೆ ಏಕಾಏಕಿ ಗುಡುಗು ಮಿಂಚಿನೊAದಿಗೆ ಶುರುವಾದ ಭಾರಿ ಗಾಳಿ ಮಳೆ ನೋಡಲು ಹೊರಬಂದ ಕಂದಮ್ಮಳ ಮೇಲೆ ಪತ್ರಾಸ್ ಮೇಲಿನಿಂದ ಬಿದ್ದ ಕಲ್ಲು ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts