More

    ಇನ್ನು ಮುಂದೆ ರೈಲಿನಲ್ಲಿ ಬೆಡ್​ಶೀಟ್​ ಕೊಡಲ್ಲ, ಕರ್ಟನ್​ ಇರಲ್ಲ! ಬೇಕಾದರೆ ನೀವೇ ತಂದುಕೊಳ್ಳಿ ಎಂದ ಸಚಿವಾಲಯ

    ನವದೆಹಲಿ: ಚೀನಾದ ಕರೊನಾ ವೈರಸ್​ ವಿಶ್ವದಾದ್ಯಂತ ಹರಡುತ್ತಿದೆ. ದೇಶದಲ್ಲಿಯೂ ಸಹ ಕರೊನಾ ಭೀತಿ ಹೆಚ್ಚಾಗಿದ್ದು, ಸೋಂಕು ಹರಡದಂತೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೈಲುಗಳಲ್ಲಿ ಸೋಂಕಿನ ನಿಯಂತ್ರಣಕ್ಕಾಗಿ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ಎಸಿ ಕೋಚ್​ಗಳಲ್ಲಿರುವ ಕೆಲ ಸೌಲಭ್ಯಗಳನ್ನು ಹಿಂಪಡೆಯುವುದಾಗಿ ತಿಳಿಸಲಾಗಿದೆ.

    ಸಾಮಾನ್ಯವಾಗಿ ರೈಲಿನ ಎಸಿ ಕೋಚ್​ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಬೆಡ್​ಶೀಟ್​ಗಳನ್ನು ಕೊಡಲಾಗುತ್ತದೆ. ಹಾಗೆಯೇ ಅದರ ಕಿಟಕಿಗಳಲ್ಲಿ ಕರ್ಟನ್​ಗಳನ್ನು ಹಾಕಲಾಗಿರುತ್ತದೆ. ಇದೀಗ ಈ ಎರಡೂ ಸೇವೆಯನ್ನು ಹಿಂಪಡೆಯುವುದಾಗಿ ಕೇಂದ್ರ ರೈಲ್ವೇ ಮತ್ತು ಪಶ್ಚಿಮ ರೈಲ್ವೇ ಇಲಾಖೆ ತಿಳಿಸಿದೆ. ಪ್ರತಿ ಪ್ರಯಾಣದ ನಂತರ ಬೆಡ್​ಶೀಟ್​ ಮತ್ತು ಕರ್ಟನ್​ಗಳನ್ನು ತೊಳೆಯಲಾಗದ ಕಾರಣ ಅದೆರೆಡನ್ನು ಮುಂದಿನ ಆದೇಶದವರೆಗೂ ರೈಲುಗಳಿಂದ ತೆರವುಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

    ಕರೊನಾ ವೈರಸ್​ ಭೀತಿ ಹೆಚ್ಚಾದ ಹಿನ್ನೆಲೆ ರೈಲುಗಳಲ್ಲಿ ಅಗತ್ಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದಾಗಿ ರೈಲ್ವೇ ಸಚಿವಾಲಯ ತಿಳಿಸಿತ್ತು. ರೈಲಿನಲ್ಲಿ ಪ್ರಯಾಣಿಕರು ಅತಿ ಹೆಚ್ಚು ಸ್ಪರ್ಶಿಸುವ ಬಾಗಿಲಿನ ಹಿಡಿಕೆಗಳು, ಚಿಲಕಗಳು, ಸಿಟ್​ ಗಾರ್ಡ್​, ಸ್ನ್ಯಾಕ್ಸ್​ ಟ್ರೇಗಳು, ಕಿಟಕಿಯ ಗ್ಲಾಸ್​ ಮತ್ತು ಗ್ರಿಲ್​ಗಳು, ಮೇಲಿನ ಬರ್ತ್​ಗೆ ಹತ್ತಲು ಇರುವ ಏಣಿ, ಸ್ವಿಚ್​ಗಳು, ಕಸದ ಬುಟ್ಟಿಗಳು ಇತ್ಯಾದಿಯನ್ನು ಸೋಂಕುನಿವಾರಕಗಳಿಂದ ಆಗಾಗ ಸ್ವಚ್ಛ ಮಾಡುವಂತೆ ತಿಳಿಸಲಾಗಿತ್ತು. ರೈಲ್ವೇ ಶೌಚಾಲಯಗಳ ಬಗ್ಗೆ ವಿಶೇಷ ಕಾಳಜಿ ತೋರಿಸಲಾಗಿದ್ದು, ಸ್ವಚ್ಛತೆಯನ್ನು ನಡೆಸಲಾಗುತ್ತಿದೆ. ಹೀಗಿರುವಾಗ ಎಸಿ ಕೋಚ್​ಗಳಲ್ಲಿ ಇರುವ ಬೆಡ್​ಶೀಟ್​ ಮತ್ತು ಕರ್ಟನ್​ಗಳನ್ನು ಆಗಾಗ ಸ್ವಚ್ಛ ಮಾಡುವುದು ಕಷ್ಟವಾದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಪ್ರತಿ ಬೋಗಿಯಲ್ಲಿಯೂ ಒಂದಿಷ್ಟು ಬೆಡ್​ಶೀಟ್​ಗಳನ್ನು ಹೆಚ್ಚುವರಿಯಾಗಿ ಇಡಲಾಗುತ್ತದೆ. ತೀರಾ ಅಗತ್ಯತೆ ಇದ್ದರೆ ಅದನ್ನು ಕೇಳಿ ಪಡೆದುಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ. ಇನ್ನು ನಾಲ್ಕರಿಂದ ಐದು ದಿನಗಳಲ್ಲಿ ಎಲ್ಲಾ ಕರ್ಟನ್​ ಮತ್ತು ಬೆಡ್​ಶೀಟ್​ಗಳನ್ನು ತೆರವು ಮಾಡುವುದಾಗಿ ತಿಳಿಸಲಾಗಿದೆ. ಪ್ರಯಾಣಿಕರಿಗೆ ಅಗತ್ಯವಿದ್ದರೆ ತಾವೇ ಮನೆಯಿಂದ ಬೆಡ್​ಶೀಟ್​ ತಂದುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಹೊಸ ಬೆಡ್​ಶೀಟ್​ಗಳನ್ನು ಪ್ರಯಾಣಿಕರಿಗೆ ನೀಡಲಾಗುವುದು ಎಂದು ಮಾಹಿತಿ ನೀಡಲಾಗಿದೆ. (ಏಜೆನ್ಸೀಸ್​)

    VIDEO| “ಜೈ ಕರೊನಾ” ಎಂದು ಘೋಷಣೆ ಕೂಗಿ ಕುಣಿದು ಕುಪ್ಪಳಿಸಿದ ಯುವಕರ ಗುಂಪು: ಕಾರಣ ಕೇಳಿದ್ರೆ ಶಾಕ್​ ಆಗ್ತಿರಾ!

    ಕರೊನಾ ಭೀತಿ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಗಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts