ಕರೊನಾ ಭೀತಿ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಗಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

ವಾಷಿಂಗ್ಟನ್​: ಜಾಗತಿಕವಾಗಿ ಮಹಾಮಾರಿ ಕರೊನಾ ವೈರಸ್​ ಮರಣ ಮೃದಂಗ ಮುಂದುವರಿಸಿದೆ. ಅಮೆರಿಕದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 50ರ ಗಡಿ ಮೀರಿದ್ದು, ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ರಾಷ್ಟ್ರೀಯ ವಿಪತ್ತು ಘೋಷಿಸಿ ತಾವೂ ಸಹ ಕರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಟ್ರಂಪ್​ ಅವರ ಕರೊನಾ ಪರೀಕ್ಷಾ ಫಲಿತಾಂಶ ನೆಗಿಟಿವ್​ ಆಗಿರುವುದಾಗಿ ವೈಟ್​ಹೌಸ್​ನ ವೈದ್ಯರೊಬ್ಬರು ಶನಿವಾರ ತಿಳಿಸಿದ್ದಾರೆ. ಟ್ರಂಪ್​ ಅವರು ಫ್ಲೋರಿಡಾದಲ್ಲಿರುವ ತಮ್ಮ ರೆಸಾರ್ಟ್​ನಲ್ಲಿ ಬ್ರೆಜಿಲಿಯನ್​ ಅಧ್ಯಕ್ಷೀಯ ನಿಯೋಗದ ಅನೇಕ ಸದಸ್ಯರೊಟ್ಟಿಗೆ ಸಭೆ ನಡೆಸಿದ ಬಳಿಕ ಕರೊನಾ ಪರೀಕ್ಷೆ ಮಾಡಿಸಿದ್ದಾರೆ. ಬ್ರೆಜಿಲಿಯನ್​ ನಿಯೋಗದಲ್ಲಿ … Continue reading ಕರೊನಾ ಭೀತಿ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಗಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್