ವಾಷಿಂಗ್ಟನ್: ಜಾಗತಿಕವಾಗಿ ಮಹಾಮಾರಿ ಕರೊನಾ ವೈರಸ್ ಮರಣ ಮೃದಂಗ ಮುಂದುವರಿಸಿದೆ. ಅಮೆರಿಕದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 50ರ ಗಡಿ ಮೀರಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ವಿಪತ್ತು ಘೋಷಿಸಿ ತಾವೂ ಸಹ ಕರೊನಾ ಪರೀಕ್ಷೆಗೆ ಒಳಗಾಗಿದ್ದಾರೆ.
ಟ್ರಂಪ್ ಅವರ ಕರೊನಾ ಪರೀಕ್ಷಾ ಫಲಿತಾಂಶ ನೆಗಿಟಿವ್ ಆಗಿರುವುದಾಗಿ ವೈಟ್ಹೌಸ್ನ ವೈದ್ಯರೊಬ್ಬರು ಶನಿವಾರ ತಿಳಿಸಿದ್ದಾರೆ.
ಟ್ರಂಪ್ ಅವರು ಫ್ಲೋರಿಡಾದಲ್ಲಿರುವ ತಮ್ಮ ರೆಸಾರ್ಟ್ನಲ್ಲಿ ಬ್ರೆಜಿಲಿಯನ್ ಅಧ್ಯಕ್ಷೀಯ ನಿಯೋಗದ ಅನೇಕ ಸದಸ್ಯರೊಟ್ಟಿಗೆ ಸಭೆ ನಡೆಸಿದ ಬಳಿಕ ಕರೊನಾ ಪರೀಕ್ಷೆ ಮಾಡಿಸಿದ್ದಾರೆ. ಬ್ರೆಜಿಲಿಯನ್ ನಿಯೋಗದಲ್ಲಿ ಕೆಲವರಿಗೆ ಕರೊನಾ ಪಾಸಿಟಿವ್ ಇದ್ದುದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆಗೆ ಒಳಪಟ್ಟಿದ್ದಾರೆ.
ಟ್ರಂಪ್ ಅವರ ವೈದ್ಯಕೀಯ ಪರೀಕ್ಷೆ ಕುರಿತಾದ ಮಾಹಿತಿಯನ್ನು ಶನಿವಾರ ಸಂಜೆ ಖಚಿತಪಡಿಸಿಕೊಂಡೆ, ನೆಗಿಟಿವ್ ಫಲಿತಾಂಶ ಬಂದಿದೆ ಎಂದು ವೈಟ್ಹೌಸ್ ವೈದ್ಯ ಮೆಮೊ ಹೇಳಿದ್ದಾರೆ.
ಮೊದಲೇ ನಿಗದಿಯಾಗಿದ್ದ ಬ್ರಿಟನ್, ಐರ್ಲೆಂಡ್ ಸೇರಿದಂತೆ ಇನ್ನಿತರ ದೇಶಗಳ ಭೇಟಿಯನ್ನು ಟ್ರಂಪ್ ರದ್ದು ಪಡಿಸಿದ್ದಾರೆ. (ಏಜೆನ್ಸೀಸ್)
ಕರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರದಿಂದ ಪರಿಹಾರ ಘೋಷಣೆ: ಇನ್ನಿತರ ಕ್ರಮಕ್ಕೂ ಸೂಚನೆ