More

    ಪೊಲೀಸರನ್ನು ನೋಡಿ ಓಡಿ ಹೋದ ರೌಡಿ ಸ್ಟಾರ್..​; ತಲೆಮರೆಸಿಕೊಂಡ ಕುಖ್ಯಾತರು..

    ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಅಪರಾಧ ಕೃತ್ಯಗಳನ್ನು ಹತ್ತಿಕ್ಕಲು ಸಿಸಿಬಿ ಪೊಲೀಸರು ನಗರದ ಎಂಬತ್ತಕ್ಕೂ ಅಧಿಕ ರೌಡಿಶೀಟರ್‌ಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿ, 26 ರೌಡಿಶೀಟರ್‌ಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

    ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಡಾ.ಎಸ್.ಡಿ.ಶರಣಪ್ಪ ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ಐವರು ಎಸಿಪಿ, 19 ಇನ್ಸ್‌ಪೆಕ್ಟರ್‌ ಹಾಗೂ 160 ಮಂದಿ ಪೊಲೀಸ್ ಸಿಬ್ಬಂದಿ ಒಳಗೊಂಡ ತಂಡಗಳು ಮಂಗಳವಾರ ಮಧ್ಯರಾತ್ರಿ 2 ಸುಮಾರಿಗೆ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸುಮಾರು 80 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

    ದಾಳಿ ವೇಳೆ ರೌಡಿಗಳಾದ ರಾಘವೇಂದ್ರ ಪ್ರಸಾದ್ ಅಲಿಯಾಸ್ ನಾಗ, ಜಗದೀಶ ಅಲಿಯಾಸ್ ಟಾಮಿ, ರಾಮ ಲಕ್ಷ್ಮಣ, ಕೃಷ್ಣಮೂರ್ತಿ ಅಲಿಯಾಸ್ ಟಿಂಬರ್ ಲೇಔಟ್ ಕಿಟ್ಟಿ, ರಾಮ ಅಲಿಯಾಸ್ ಕೋತಿರಾಮ, ಸುಜೀತ್ ಅಲಿಯಾಸ್ ಡಾಕ್ಟರ್, ಪಾರ್ಥಿಬನ್ ಅಲಿಯಾಸ್ ಪಾಥು, ಮೂವೇಶ್ ಅಲಿಯಾಸ್ ಮೂವಿ, ನಾರಾಯಣ ಅಲಿಯಾಸ್ ದೊಡ್ಡ ನಾರಾಯಣ, ದೇವರಾಜ ಅಲಿಯಾಸ್ ದೇವಾ, ಗಿರೀಶ್ ಅಲಿಯಾಸ್ ಗುಂಡ, ರಮೇಶ್ ಅಲಿಯಾಸ್ ಕುಳ್ಳ, ಆನಂದ ಅಲಿಯಾಸ್ ಕಾಟು, ಸತೀಶ್ ಅಲಿಯಾಸ್ ಮೋಟಾ, ಲೋಕೇಶ್, ಮುನಿರಾಜು ಅಲಿಯಾಸ್ ಜಿರಳೆ, ಪುರುಷೋತ್ತಮ್ ಅಲಿಯಾಸ್ ದಾಮ, ಸಾದಿಕ್, ಮಂಜುನಾಥ ಅಲಿಯಾಸ್ ಹೋಟೆಲ್, ವೆಂಕಟೇಶಮೂರ್ತಿ ಅಲಿಯಾಸ್ ಕಜ್ಜಿ ವೆಂಕಿ, ರಂಜಿತ್, ಆಡ್ರೀನ್ ರಾಹುಲ್, ತೇಜಸ್, ಮಲ್ಲೇಶ, ಶಂಕರ ಹಾಗೂ ವಸೀಮವುಲ್ಲಾ ಅವರನ್ನು ವಶಕ್ಕೆ ಪಡೆಯಲಾಗಿದೆ.

    ಹೆದರಿ ಓಡಿ ಹೋದ ಸ್ಟಾರ್ ನವೀನ!

    ಕುಖ್ಯಾತ ರೌಡಿಗಳಾದ ಸೈಕಲ್ ರವಿ, ನಾರಾಯಣಸ್ವಾಮಿ ಅಲಿಯಾಸ್ ಜೆಸಿಬಿ ನಾರಾಯಣ, ಮಧುಸೂದನ ಅಲಿಯಾಸ್ ಮಲಯಾಳಿ ಮಧು, ವಿಲ್ಸನ್ ಗಾರ್ಡನ್ ನಾಗ, ಲೋಕೇಶ್ ಅಲಿಯಾಸ್ ಮುಲಾಮ, ಶ್ರೀಕಾಂತ ಅಲಿಯಾಸ್ ಊಸಪ್ಪ, ಶಹನವಾಜ್ ಅಲಿಯಾಸ್ ಶಾನು, ಸೈಲೆಂಟ್ ಸುನೀಲ್, ಒಂಟೆ ರೋಹಿತ್, ಲಕ್ಕಿ, ಕುಮರೇಶ್, ಮೈಕಲ್, ಚೊಳ್ಳು ಇಮ್ರಾನ್, ಕಾಡುಬೀಸನಹಳ್ಳಿ ಸೋಮ, ರೋಹಿತ ಇವರುಗಳು ತಲೆಮರೆಸಿಕೊಂಡಿದ್ದಾರೆ. ಕುಖ್ಯಾತ ರೌಡಿ ಸ್ಟಾರ್ ನವೀನ್ ಸಿಸಿಬಿ ಪೊಲೀಸರ ದಾಳಿ ವೇಳೆ ಪೊಲೀಸರನ್ನು ಕಂಡು ಓಡಿ ಹೋಗಿದ್ದಾನೆ. ಈ ವೇಳೆ ಈತನ ಮೊಬೈಲ್ ಹಾಗೂ ಮಾರಕಾಸವನ್ನು ಜಪ್ತಿ ಮಾಡಲಾಗಿದೆ.

    ಈ ಎಲ್ಲ ರೌಡಿಶೀಟರ್‌ಗಳು ಕೊಲೆ, ಕೊಲೆಗೆ ಯತ್ನ, ದರೋಡೆ, ಸುಲಿಗೆ, ಅಪಹರಣ ಸೇರಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಇವರ ಮೇಲೆ ನಿಗಾವಹಿಸುವ ಹಾಗೂ ರೌಡಿ ಚಟುವಟಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಈ ಮನೆಗಳ ಮೇಲೆ ದಾಳಿ ನಡೆಸಿ ವಿಚಾರಣೆ ಮಾಡಲಾಗಿದೆ. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಡಾ.ಎಸ್.ಡಿ.ಶರಣಪ್ಪ ನೀಡಿದ್ದಾರೆ.

    ವಶಕ್ಕೆ ಪಡೆದಿರುವ 26 ರೌಡಿಗಳ ವಿಚಾರಣೆ ನಡೆಸಲಾಗುತ್ತಿದೆ. ರೌಡಿಗಳ ಆದಾಯ ಮತ್ತು ಅವರು ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೆಲ ರೌಡಿಗಳ ಮನೆಯಲ್ಲಿ ದಾಳಿ ವೇಳೆ ಮಾರಾಕಾಸ್ತ್ರಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗಂಡನ ಕಿರುಕುಳ: ದೇಶದಲ್ಲಿ ಕರ್ನಾಟಕವೇ ಪ್ರಥಮ; ಮದ್ಯವ್ಯಸನಿಗಳಿಂದಲೇ ಜಾಸ್ತಿ ಉಪಟಳ..

    ಕೊನೆಗೂ ಹೆಚ್ಚಾಯ್ತು ಹಾಲು-ಮೊಸರು ದರ; ನಾಳೆಯಿಂದಲೇ ಹೊಸ ಬೆಲೆ ಜಾರಿ!?

    ಸೈನಿಕರಿಬ್ಬರ ಕುಟುಂಬಗಳ ಮಧ್ಯೆ ಮಾರಾಮಾರಿ; ಯೋಧನೊಬ್ಬನ ತಮ್ಮನನ್ನು ಕೊಚ್ಚಿ ಕೊಂದ ಇನ್ನೊಬ್ಬ ಸೈನಿಕ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts