More

    ಗಂಡನ ಕಿರುಕುಳ: ದೇಶದಲ್ಲಿ ಕರ್ನಾಟಕವೇ ಪ್ರಥಮ; ಮದ್ಯವ್ಯಸನಿಗಳಿಂದಲೇ ಜಾಸ್ತಿ ಉಪಟಳ..

    ಬೆಂಗಳೂರು: ದಂಪತಿ ಎಂದ ಮೇಲೆ ದಾಂಪತ್ಯ ಕಲಹ ಇರುವಂಥದ್ದೇ. ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆಯೇ ಇದೆ. ಆದರೆ ಅದಕ್ಕೂ ಮೀರಿ ಹೆಂಡತಿ ಗಂಡನಿಂದ ಕಿರುಕುಳಕ್ಕೆ ಒಳಗಾಗುವ ಪ್ರಕರಣಗಳು ಕೂಡ ಬಹಳಷ್ಟಿವೆ. ಅದರಲ್ಲೂ ಗಂಡನ ಕಿರುಕುಳದಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ ಎಂಬಂತಾಗಿರುವುದು ಆತಂಕಕಾರಿ ಸಂಗತಿ.

    ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್​ಎಫ್​ಎಚ್​ಎಸ್​) ವಿವರಗಳ ಪ್ರಕಾರ ದೇಶದಲ್ಲಿ ಮೂವರು ವಿವಾಹಿತೆಯರಲ್ಲಿ ಒಬ್ಬರು ಗಂಡನಿಂದ ದೈಹಿಕ ಅಥವಾ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ ಎಂಬುದು ಕಂಡುಬಂದಿದೆ. ದುರಂತವೆಂದರೆ, ಗಂಡನ ಕಿರುಕುಳದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ನಂತರದ ಐದು ಸ್ಥಾನಗಳಲ್ಲಿ ಕ್ರಮವಾಗಿ ಬಿಹಾರ, ಮಣಿಪುರ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶಗಳಿವೆ. ಎನ್​ಎಫ್​ಎಚ್​ಎಸ್​ 18ರಿಂದ 49 ವರ್ಷದೊಳಗಿನ ವಿವಾಹಿತೆಯರನ್ನು ಈ ಸಮೀಕ್ಷೆಗೆ ಒಳಪಡಿಸಿದ್ದು, ಆ ಪೈಕಿ ದೇಶದಲ್ಲಿ ಶೇ. 29.3 ವಿವಾಹಿತೆಯರು ಪತಿಯಿಂದ ಕಿರುಕುಳ ಅನುಭವಿಸುತ್ತಿದ್ದಾರೆ.

    ಇನ್ನು ಈ ಕಿರುಕುಳದಲ್ಲಿ ಮದ್ಯದ ಪಾತ್ರವ ಪ್ರಮುಖವಾಗಿದೆ. ಏಕೆಂದರೆ ಕಿರುಕುಳ ಅನುಭವಿಸುತ್ತಿರುವ ಪತ್ನಿಯರಲ್ಲಿ ಬಹಳಷ್ಟು ಮಂದಿಯ ಗಂಡಂದಿರು ಮದ್ಯವ್ಯಸನಿಗಳಾಗಿದ್ದಾರೆ. ಅಂದರೆ ಮದ್ಯಪಾನಿಗಳನ್ನು ಕೈಹಿಡಿದ ಮಹಿಳೆಯರ ಪೈಕಿ ಶೇ. 70 ಮಂದಿ ಗಂಡನ ಕಿರುಕುಳ ಅನುಭವಿಸುತ್ತಿದ್ದಾರೆ. ಆದರೆ ಮದ್ಯವ್ಯಸನಿಗಳಲ್ಲದವರ ಕೈಹಿಡಿದವರ ಪೈಕಿ ಗಂಡನ ಕಿರುಕುಳ ಅನುಭವಿಸುತ್ತಿರುವವರ ಪ್ರಮಾಣ ಶೇ. 23 ಮಾತ್ರ. ಇನ್ನೊಂದು ವಿಪರ್ಯಾಸವೆಂದರೆ ಹೀಗೆ ಗಂಡನಿಂದ ಕಿರುಕುಳಕ್ಕೆ ಒಳಗಾಗುತ್ತಿರುವವರ ಪೈಕಿ ಶೇ. 77 ಪತ್ನಿಯರು ಈ ಬಗ್ಗೆ ಯಾವುದೇ ಸಹಾಯ ಕೋರಿಲ್ಲ ಇಲ್ಲವೇ ಯಾರಿಗೂ ಈ ವಿಷಯ ಹೇಳಿಲ್ಲ.

    ಗಂಡನಿಂದ ಕಿರುಕುಳ ಅನುಭವಿಸುತ್ತಿರುವ ಮಹಿಳೆಯರ ಪ್ರಮಾಣ ಕಡಿಮೆ ಇರುವ ಕೊನೆಯ ಐದು ರಾಜ್ಯಗಳೆಂದರೆ ಜಮ್ಮು-ಕಾಶ್ಮೀರ, ಗೋವಾ, ಹಿಮಾಚಲ, ನಾಗಾಲ್ಯಾಂಡ್, ಲಕ್ಷದ್ವೀಪ.

    ಗಂಡನ ಕಿರುಕುಳ: ದೇಶದಲ್ಲಿ ಕರ್ನಾಟಕವೇ ಪ್ರಥಮ; ಮದ್ಯವ್ಯಸನಿಗಳಿಂದಲೇ ಜಾಸ್ತಿ ಉಪಟಳ..

    ಗಂಡನ ಕಿರುಕುಳ: ದೇಶದಲ್ಲಿ ಕರ್ನಾಟಕವೇ ಪ್ರಥಮ; ಮದ್ಯವ್ಯಸನಿಗಳಿಂದಲೇ ಜಾಸ್ತಿ ಉಪಟಳ..

    ಎರಡನೇ ಹೆಂಡ್ತಿಯಂತೆ ನಾಲ್ಕನೇ ಪತ್ನಿಯನ್ನೂ ಕಟ್ಟಿಗೆಯಿಂದ ಹೊಡೆದು ಕೊಂದ ಪಾನಮತ್ತ ಪತಿ!

    ಸೈನಿಕರಿಬ್ಬರ ಕುಟುಂಬಗಳ ಮಧ್ಯೆ ಮಾರಾಮಾರಿ; ಯೋಧನೊಬ್ಬನ ತಮ್ಮನನ್ನು ಕೊಚ್ಚಿ ಕೊಂದ ಇನ್ನೊಬ್ಬ ಸೈನಿಕ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts