More

    ಕೊನೆಗೂ ಹೆಚ್ಚಾಯ್ತು ಹಾಲು-ಮೊಸರು ದರ; ನಾಳೆಯಿಂದಲೇ ಹೊಸ ಬೆಲೆ ಜಾರಿ!?

    ಬೆಂಗಳೂರು: ಕಳೆದ ಕೆಲವು ದಿನಗಳಿಂದ ಹಾಲು-ಮೊಸರಿನ ದರ ಏರುತ್ತದೆ-ಏರುವುದಿಲ್ಲ ಎಂಬ ಏರುಪೇರುಗಳು ನಡೆಯುತ್ತಿದ್ದು, ಕೊನೆಗೂ ಹಾಲು ಹಾಗೂ ಮೊಸರು ಎರಡರ ಬೆಲೆಯೂ ಏರಿಕೆಯಾಗಿದೆ. ಹೊಸ ದರ ನಾಳೆಯಿಂದಲೇ ಜಾರಿಗೆ ಬರಲಿರುವುದಾಗಿಯೂ ಕೆಎಂಎಫ್ ತಿಳಿಸಿದೆ.

    ಕರ್ನಾಟಕ ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಇಂದು ನಿರ್ದೇಶಕ ಮಂಡಳಿಯ ಸಭೆ ಕರೆದು ಹಾಲು-ಮೊಸರು ದರ ಹೆಚ್ಚಳ ಕುರಿತು ನಿರ್ಧಾರ ಪ್ರಕಟಿಸಿದ್ದಾರೆ. ಅದರಂತೆ ಹಾಲು ಹಾಗೂ ಮೊಸರು ಲೀಟರ್​​ಗೆ 2 ರೂ. ಹೆಚ್ಚಳವಾಗಲಿದ್ದು, ನಾಳೆಯಿಂದಲೇ ಹೊಸ ದರ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

    77 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡಲಾಗುತ್ತಿದ್ದು, ಪಶುಆಹಾರ ಸಬ್ಸಿಡಿಯಾಗಿ 193 ಕೋಟಿ ರೂ. ನೀಡಲಾಗಿತ್ತು. ಇದರಿಂದ ಹೊರೆ ಆಗಿತ್ತು. ಹೀಗಾಗಿ ದರ ಹೆಚ್ಚಳಕ್ಕೆ ಇದು ಕೂಡ ಒಂದು ಕಾರಣ. ಇನ್ನು ಕ್ಷೀರಭಾಗ್ಯದಲ್ಲಿ ಸುಮಾರು 10 ಕೋಟಿ ರೂ. ನಷ್ಟ ಉಂಟಾಗುತ್ತಿದೆ. ಇದರ ಬಗ್ಗೆ ಗಮನ ಹರಿಸುವಂತೆ ಸಿಎಂ ಅವರಿಗೆ ‌ಮನವಿ ಮಾಡಿದ್ದೇವೆ ಎಂದು ಹಾಲಿನ ದರ ಹೆಚ್ಚಳ ಕುರಿತು ಅವರು ಮಾಹಿತಿ ನೀಡಿದ್ದಾರೆ.

    ಕೆಲವು ದಿನಗಳ ಹಿಂದೆ ಕೆಎಂಎಫ್​ ಹಾಲು-ಮೊಸರು ದರ ಹೆಚ್ಚಳ ನಿರ್ಧಾರವನ್ನು ಪ್ರಕಟಿಸಿದ್ದಾಗ ಮಧ್ಯಪ್ರವೇಶ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರು, ಅದಕ್ಕೆ ತಡೆಯೊಡ್ಡಿದ್ದರು. ಮಾತ್ರವಲ್ಲ, ಕೆಎಂಎಫ್​ ಜತೆ ನಿನ್ನೆ ಸಭೆಯೊಂದನ್ನು ನಡೆಸಿ, ಜನರಿಗೆ ಹೊರೆಯಾಗದಂತೆ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ಸಮತೋಲಿತ ನಿರ್ಧಾರ ಕೈಗೊಳ್ಳಿ ಎಂದು ಸೂಚನೆಯನ್ನೂ ನೀಡಿದ್ದರು. ಆದರೆ ಇದೀಗ ಮತ್ತೆ ಹಾಲು-ಮೊಸರು ದರ ಲೀಟರ್​​ಗೆ 2 ರೂ. ಹೆಚ್ಚಳ ಕುರಿತು ಕೆಎಂಎಫ್​ ನಿರ್ಧಾರ ಪ್ರಕಟಿಸಿದ್ದು, ನಾಳೆಯಿಂದಲೇ ಜಾರಿಗೆ ಬರಲಿರುವುದಾಗಿಯೂ ತಿಳಿಸಿದೆ.

    ರೈತರಿಗೆ ಅನುಕೂಲ ಆಗಬೇಕು, ಗ್ರಾಹಕರು ನಮಗೆ ಸಹಕರಿಸಬೇಕು ಎಂದಿರುವ ಕೆಎಂಎಫ್ ಅಧ್ಯಕ್ಷ, ನಾಳೆ ಬೆಳಗ್ಗೆ ಹಾಲಿನ ದರ ಈಗಿದ್ದಷ್ಟೇ ಇರಲಿದೆ, 11 ಗಂಟೆ ಬಳಿಕ ದರ ಏರಿಕೆ ಆಗಲಿದೆ ಎಂದಿದ್ದಾರೆ. ಇನ್ನು ಈ ಹೆಚ್ಚಳಕ್ಕೆ ಸಿಎಂ ಅನುಮತಿ ಸೂಚಿಸಬೇಕಾಗಿದ್ದು, ಅವರೇನಾದರೂ ಆಕ್ಷೇಪ ವ್ಯಕ್ತಪಡಿಸಿದರೆ, ಮತ್ತೆ ಈ ನಿರ್ಧಾರದಲ್ಲಿ ಏರಿಳಿತ ಕಂಡುಬರಬಹುದು.

    ಗೃಹಪ್ರವೇಶದ ಮರುದಿನವೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ; ಮಗಳಿಂದಲೇ ಅಂತಿಮಸಂಸ್ಕಾರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts