More

    ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನ.5ರಂದು

    ರಾಯಚೂರು: ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನ.5ರಂದು ರಾಯಚೂರು ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಉದ್ಘಾಟಿಸಲಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ತಿಳಿಸಿದರು.

    ಸಮ್ಮೇಳನಾಧ್ಯಕ್ಷರಾಗಿ ಬಂಡಾಯ ಸಾಹಿತಿ ಬಾಬು ಭಂಡಾರಿಗಲ್ ಆಯ್ಕೆಯಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಜಿಲ್ಲಾ ಕ್ರೀಡಾಂಗಣದಲ್ಲಿರುವ ಗಾಂಧೀಜಿ ಪುತ್ಥಳಿಯಿಂದ ರಂಗಮಂದಿರದವರೆಗೆ ಬೆಳಗ್ಗೆ 8.30ಕ್ಕೆ ನಾಡದೇವಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಳ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದೆ.

    ಮಧ್ಯಾಹ್ನ 1.15ಕ್ಕೆ ತಾಲೂಕು ಸಾಹಿತ್ಯ, ಸಂಸ್ಕೃತಿ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಿ.ಎಂ.ಶರಭೇಂದ್ರಸ್ವಾಮಿ ಅಧ್ಯಕ್ಷ ಗೋಷ್ಠಿ ನಡೆಯಲಿದ್ದು, ಸಾಹಿತಿ ಡಾ.ಶೀಲಾದಾಸ್ ಆಶಯ ನುಡಿ ನುಡಿಯಲಿದ್ದಾರೆ. ಇತಿಹಾಸ ದರ್ಶನ ಕುರಿತು ಡಾ.ಚನ್ನಬಸಯ್ಯ ಹಿರೇಮಠ, ಸಾಹಿತ್ಯ ವೈಶಿಷ್ಟ್ಯ ಕುರಿತು ಡಾ.ದಸ್ತಗಿರಿಸಾಬ್ ದಿನ್ನಿ, ಸಾಂಸ್ಕೃತಿಕ ವೈಭವ ಕುರಿತು ಡಾ.ಶಿವಯ್ಯ ಹಿರೇಮಠ ಮಾತನಾಡಲಿದ್ದಾರೆ.

    ಮಧ್ಯಾಹ್ನ 2.30ಕ್ಕೆ ಡಾ.ಬಸವರಾಜ ಕಳಸ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಸೆಲೆಗಳು ಗೋಷ್ಠಿಯಲ್ಲಿ ನಡೆಯಲಿದ್ದು, ಪ್ರಾಧ್ಯಾಪಕ ಡಾ.ಜೆ.ಎಲ್.ಈರಣ್ಣ ಆಶಯ ನುಡಿ, ಪ್ರಗತಿ ಯೋಜನೆಗಳು ಬಿಕ್ಕಟ್ಟು ಕುರಿತು ಡಾ.ರಜಾಕ್ ಉಸ್ತಾದ್, ಗಡಿನಾಡು ಕನ್ನಡಿಗರ ಸಮಸ್ಯೆ ಕುರಿತು ಅಮರ ದೀಕ್ಷಿತ್, ಕೃಷಿ ಮತ್ತು ನೀರಾವರಿ ಬಿಕ್ಕಟ್ಟು ಕುರಿತು ಚನ್ನಬಸವಣ್ಣ ಮಾತನಾಡಿಲಿದ್ದಾರೆ.

    ಸಂಜೆ 4.30ಕ್ಕೆ ಆರೀಫ್ ರಾಜಾ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ತಾಯರಾಜ್ ಮರ್ಚೆಟಾಳ ಆಶಯ ನುಡಿ ನುಡಿಯಲಿದ್ದಾರೆ. ಸುಮಾರು 15ಕ್ಕೂ ಹೆಚ್ಚು ಕವಿಗಳು ಪಾಲ್ಗೊಳ್ಳಲಿದ್ದಾರೆ. ಸಂಜೆ 6ಕ್ಕೆ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ನಡೆಯಲಿದೆ.

    ಸಂಜೆ 6.15ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಸಮಾರೋಪ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದವರಿಗೆ ಗೌರವಿಸಲಾಗುತ್ತಿದೆ ಎಂದು ರಂಗಣ್ಣ ಪಾಟೀಲ್ ಅಳ್ಳುಂಡಿ ತಿಳಿಸಿದರು.

    ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಜಿ.ಸುರೇಶ, ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಪದಾಧಿಕಾರಿಗಳಾದ ಆಂಜನೇಯ ಕಾವಲಿ, ರೇಖಾ ಬಡಿಗೇರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts