More

    ಸುರಪಾನಕ್ಕೆ ಸರದಿ ನಿಂತ ಮದ್ಯ ಪ್ರಿಯರು..!

    ದೈಹಿಕ ಅಂತರದ ನಿಷ್ಠೆ ಮರಿಯದ ಜನ | 135 ಮದ್ಯದ ಅಂಗಡಿಗಳು ಓಪನ್

    ರಾಯಚೂರು : ಹಬ್ಬ, ಅಮಾವಾಸ್ಯೆಯೂ ಅಲ್ಲ. ಆದರೂ, ಎಲ್ಲಿ ನೋಡಿದರೂ ಜನವೋ ಜನ. ಮುಖಕ್ಕೆ ಮಾಸ್ಕ್ ಹಾಕಿ, ಬಿಸಿಲನ್ನೂ ಲೆಕ್ಕಿಸದೆ ಸಾಲಿನಲ್ಲಿ ನಿಂತ ಮದ್ಯ ಪ್ರಿಯರು. ಇಂಥದ್ದೊಂದು ದೃಶ್ಯ ಕಂಡು ಬಂದಿದ್ದು, ರಾಯಚೂರಿನ ಮದ್ಯದಂಗಡಿಗಳ ಮುಂದೆ.

    ಕರೊನಾ ಭೀತಿ ಹಿನ್ನೆಲೆ ಸರ್ಕಾರ ಭಾರತ ಲಾಕ್‌ಡೌನ್ ಜಾರಿ ಮಾಡಿತ್ತು. ಹೀಗಾಗಿ ಮದ್ಯ ಪ್ರಿಯಯರು ಕಳೆದ 40 ದಿನದಿಂದಲೂ ಸುರಪಾನಕ್ಕೆ ಪಟ್ಟ ಪಾಡು, ವೆಚ್ಚ ಮಾಡಿದ ಹಣ, ಪೊಲೀಸರಿಂದ ತಪ್ಪಿಸಿಕೊಳ್ಳಲು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಕೊನೆಗೂ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ್ದು, ಸಿಎಲ್ 2 ಹಾಗೂ 11 ಸಿಎಲ್ ಲೈಸನ್ಸ್‌ನ ಮದ್ಯದಂಗಡಿಗಳಿಗೆ ಮಾರಾಟಕ್ಕೆ ಅನುಮತಿ ನೀಡಿದೆ. ಹೀಗಾಗಿ ಮದ್ಯ ಪ್ರಿಯರು ಸೋಮವಾರ ಬಾರ್ ಬಾಗಿಲು ತೆಗೆಯುವ ಮುನ್ನವೇ ಅಂಗಡಿ ಮುಂದೆ ಮುಖಕ್ಕೆ ಮಾಸ್ಕ್ ಧರಿಸಿ ಜಮಾಯಿಸಿದರು.

    ಒಬ್ಬರಿಗೊಬ್ಬರು ಗುರುತಿಸಲು ತುಸು ಸಮಯ ಹಿಡಿಯಿತಾದರೂ ಸಾಲಿನಲ್ಲಿ ನಿಂತ ಸ್ನೇಹಿತರ ಜತೆ ಮದ್ಯವಿಲ್ಲದೆ ಅನುಭವಿಸಿದ ಸಂಕಟ ತೋಡಿಕೊಳ್ಳುತ್ತಿರುವುದು ಕಂಡು ಬಂತು. ಬಳಿಕ ತಮಗೆ ಬೇಕಾದ ವಿವಿಧ ಬಗೆಯ ಮದ್ಯ ಪಡೆದು ಮನೆಯತ್ತ ಹೆಜ್ಜೆ ಹಾಕಿದರು.

    ಅಹಿತಕರ ಘಟನೆ ನಡೆಯದಂತೆ ಕ್ರಮ : ಬಾರ್ ಮಾಲೀಕರು ಯಾವುದೆ ಅಹಿತಕರ ಘಟನೆ ನಡೆಯದಂತೆ ಕಟ್ಟಿಗೆ ಕಟ್ಟಿ ಸಕಾಲ ಸಿದ್ಧತೆ ಮಾಡಿಕೊಂಡಿದ್ದರು. ಜತೆಗೆ ಮಾಸ್ಕ್ ಧರಿಸಿದವರಿಗೆ ಮಾತ್ರ ಮದ್ಯ ನೀಡಲಾಗುತ್ತದೆ ಎಮದು ತಿಳಿಸಿದ್ದರಿಂದ ಮದ್ಯ ಪ್ರಿಯರು ತಮ್ಮಲ್ಲಿರುವ ಬಟ್ಟೆ, ಕರವಸ್ತ್ರ ಕಟ್ಟಿಕೊಂಡು ಮದ್ಯಪಡೆದರು.

    ಮದ್ಯದಂಗಡಿ ಮಾಲೀಕರಿಗೆ ಲಾಭ : ಸದ್ಯ ಇರುವ ಮದ್ಯವನ್ನೇ ಮಾರಾಟ ಮಾಡಲಾಗುತ್ತಿದೆ. ಸಂಜೆ ಹೊಸ ಸ್ಟಾಕ್ ತರುವ ಪ್ರಯತ್ನದಲ್ಲಿ ಅಂಗಡಿ ಮಾಲೀಕರು ನಿರತರಾಗಿದ್ದಾರೆ. ಬೆಳಗ್ಗೆ 9 ರಿಂದ ರಾತ್ರಿ 7 ರವರೆಗೆ ವೈನ್ ಶಾಪ್ ತೆಗೆಯಲು ಅವಕಾಶ ನೀಡಿದ ಅಬಕಾರಿ ಇಲಾಖೆ. ಜಿಲ್ಲೆಯಲ್ಲಿ ಸುಮಾರು 132 ಕ್ಕೂ ಅಧಿಕ ಅಂಗಡಿಗಳಿದ್ದು, ಮಾಲೀಕರಿಗೆ ಭರ್ಜರಿ ಲಾಭ ಸಿಗುವ ನಿರೀಕ್ಷೆ ಇದೆ. ಸಂಪೂರ್ಣ ಮಾಹಿತಿಗೆ ಮಂಗಳವಾರದವರೆಗೆ ಕಾತುಬೇಕು ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.|

    ಸದ್ಯ ಇರುವ ಮದ್ಯವನ್ನೇ ಮಾರಾಟ ಮಾಡಲಾಗುತ್ತಿದೆ. ಸಂಜೆ ಹೊಸ ಸ್ಟಾಕ್ ತರುವ ಪ್ರಯತ್ನದಲ್ಲಿ ಅಂಗಡಿ ಮಾಲೀಕರು ನಿರತರಾಗಿದ್ದಾರೆ. ಬೆಳಗ್ಗೆ 9 ರಿಂದ ರಾತ್ರಿ 7 ರವರೆಗೆ ವೈನ್ ಶಾಪ್ ತೆಗೆಯಲು ಅವಕಾಶ ನೀಡಿದ ಅಬಕಾರಿ ಇಲಾಖೆ. ಜಿಲ್ಲೆಯಲ್ಲಿ ಸುಮಾರು 132 ಕ್ಕೂ ಅಧಿಕ ಅಂಗಡಿಗಳಿದ್ದು, ಮಾಲೀಕರಿಗೆ ಭರ್ಜರಿ ಲಾಭ ಸಿಗುವ ನಿರೀಕ್ಷೆ ಇದೆ. ಸಂಪೂರ್ಣ ಮಾಹಿತಿಗೆ ಮಂಗಳವಾರದವರೆಗೆ ಕಾತುಬೇಕು ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.|

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts