More

    ಚುನಾವಣೆ ಗೆದ್ದರೆ ಹೊಸ ಬಿಹಾರ ನಿರ್ಮಿಸ್ತಾರಂತೆ ರಾಹುಲ್​ ಗಾಂಧಿ

    ನವದೆಹಲಿ: ಬಿಹಾರದ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಒಂದು ದಿನ ಮೊದಲೇ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹೊಸ ಭರವಸೆಯೊಂದನ್ನು ನೀಡಿದ್ದಾರೆ. ಒಂದು ವೇಳೆ ತಮ್ಮ ಮೈತ್ರಿ ಪಕ್ಷಗಳು ರಾಜ್ಯದಲ್ಲಿ ಗೆಲುವು ಸಾಧಿಸಿದರೆ ಹೊಸ ಬಿಹಾರವನ್ನು ನಿರ್ಮಿಸುವುದಾಗಿ ಅವರು ಹೇಳಿದ್ದಾರೆ.

    “ಈಗ ತಯಾರಾಗಿ. ನಮ್ಮ ಮಹಾ ಮೈತ್ರಿಯು ರಾಜ್ಯದ ಜನತೆಗೆ ಉದ್ಯೋಗ ಸೃಷ್ಟಿ ಮಾಡಲಿದೆ. ರೈತರ ಸಾಲ ಮನ್ನಾ ಮಾಡಲಿದೆ. ವಿದ್ಯುತ್​ ಶುಲ್ಕವನ್ನು ಅರ್ಧದಷ್ಟು ಕಡಿತಗೊಳಿಸಲಾಗುವುದು. ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ನ್ಯಾಯ ಒದಗಿಸಲಾಗುವುದು. ಒಟ್ಟಾರೆಯಾಗಿ ಹೊಸ ಬಿಹಾರವನ್ನು ನಿರ್ಮಿಸಲಾಗುವುದು” ಎಂದು ರಾಹುಲ್​ ಗಾಂಧಿ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.ಅದರ ಜತೆ ಬಿಜೆಪಿ ಕಾಲೆಳೆದಿರುವ ಅವರು, “ಕೇಂದ್ರದಲ್ಲಿನ ಬಿಜೆಪಿ ಆಡಳಿತದಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಅದನ್ನು ಸರಿ ಪಡಿಸಲು ಸರ್ಕಾರ ಪ್ರಯತ್ನ ಮಾಡುತ್ತಿಲ್ಲ. ಸುಳ್ಳು ಭರವಸೆಗಳನ್ನು ನೀಡುವಲ್ಲಿ ಸರ್ಕಾರ ನಿರತವಾಗಿದೆ” ಎಂದು ದೂರಿದ್ದಾರೆ.

    ಇದನ್ನೂ ಓದಿ: ಮಾದಕ ಫೋಟೋಗಳೇ ನಟಿಮಣಿಯರಿಗೆ ಕಂಟಕ..!

    ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಎರಡು ಹಂತಗಳ ಮತದಾನ ಮುಗಿದಿದೆ. ಮೂರನೇ ಹಂತದ ಮತದಾನ ಶನಿವಾರ ನಡೆಯಲಿದೆ. (ಏಜೆನ್ಸೀಸ್​)

    ಪಟಾಕಿ ಮಾರಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ; ಮುಸ್ಲಿಂ ಪಟಾಕಿ ಅಂಗಡಿಗೆ ಹಿಂದೂ ಯುವಕರ ವಾರ್ನಿಂಗ್​!

    ಗಾಜಿಯಾಬಾದ್​ನ 7ರ ಪೋರಿ ಈಗ ವಿಶ್ವದ ಅತ್ಯಂತ ಕಿರಿಯ ಲೇಖಕಿ; ಲಾಕ್​ಡೌನ್​ನಲ್ಲಿ ಅರಳಿದ ಪ್ರತಿಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts