More

    ಪಟಾಕಿ ಮಾರಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ; ಮುಸ್ಲಿಂ ಪಟಾಕಿ ಅಂಗಡಿಗೆ ಹಿಂದೂ ಯುವಕರ ವಾರ್ನಿಂಗ್​!

    ಭೋಪಾಲ್​: ಕರೊನಾ ಸಮಯದಲ್ಲಿ ಪಟಾಕಿ ಸಿಡಿಸುವುದರಿಂದ ಸೋಂಕಿತರ ಆರೋಗ್ಯ ಇನ್ನಷ್ಟು ಹದಗೆಡುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಆಯಾ ರಾಜ್ಯ ಸರ್ಕಾರಗಳು ಪಟಾಕಿ ಮಾರಾಟಕ್ಕೆ ನಿರ್ಬಂಧ ಹೇರಲಾರಂಭಿಸಿವೆ. ಆದರೆ ಮಧ್ಯಪ್ರದೇಶದ ನಗರವೊಂದರಲ್ಲಿ ಪಟಾಕಿ ಅಂಗಡಿ ಇಟ್ಟುಕೊಂಡಿದ್ದ ಮುಸ್ಲಿಂ ಮಾಲೀಕರಿಗೆ ಹಿಂದೂ ಯುವಕರು ವಾರ್ನಿಂಗ್​ ಕೊಟ್ಟಿದ್ದು, ಈ ವಿಡಿಯೋ ಇದೀಗ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.

    ಅಂಗಡಿಯಲ್ಲಿದ್ದ ಮುಸ್ಲಿಂ ಮಾಲೀಕರ ಬಳಿ ಬರುವ ಹಿಂದೂ ಯುವಕರು, “ಈ ಕೂಡಲೇ ಅಂಗಡಿಯಲ್ಲಿ ಪಟಾಕಿ ಮಾರಾಟ ನಿಲ್ಲಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ನಡೆಯಬಾರದ್ದು ನಡೆಯುತ್ತದೆ” ಎಂದು ಧಮಕಿ ಹಾಕುತ್ತಾರೆ. ಮಾಲೀಕ ಮತ್ತು ಯುವಕರ ನಡುವೆ ಒಂದಿಷ್ಟು ಮಾತಿನ ಚಕಮಕಿ ನಡೆಯುತ್ತದೆ. ಕೊನೆಯಲ್ಲಿ ಅಂಗಡಿಯಿಂದ ವಾಪಾಸು ಹೋಗುವ ಯುವಕರಲ್ಲಿ ಒಬ್ಬಾತ ಫ್ರಾನ್ಸ್​ನಲ್ಲಿ ಪ್ರವಾದಿ ಮೊಹಮ್ಮದ್​ ಅವರ ವಿಚಾರಕ್ಕಾದ ಪ್ರಕರಣವನ್ನು ನೆನಪಿಸುತ್ತಾನೆ.

    ಇದನ್ನೂ ಓದಿ: ಸಮಸ್ಯೆ ಆಲಿಸಲು ಅಂಧನ ಬಳಿ ಬಂದ ನ್ಯಾಯಾಧೀಶರು

    ಕೇಸರಿ ಶಾಲು ಧರಿಸಿದ್ದ ಯುವಕರ ಗುಂಪು ಈ ರೀತಿಯ ಎಚ್ಚರಿಕೆ ನೀಡಿದ್ದು, ಧಾರ್ಮಿಕ ದ್ವೇಷಕ್ಕೆ ತಿರುಗಲು ಕಾರಣವಾಗಿದೆ. ಲಕ್ಷ್ಮೀ ಬಾಂಬ್​, ಗಣೇಶ ಬಾಂಬ್​ನಂತಹ ಪಟಾಕಿ ಮಾರುವಂತಿಲ್ಲ ಎನ್ನುವ ಎಚ್ಚರಿಕೆಯನ್ನು ಯುವಕರು ನೀಡಿದ್ದಾರೆ. ಹಿಂದೂ ದೇವರಿರುವ ಪಟಾಕಿ ಮಾರಾಟ ಮಾಡಿದರೆ ಬೇರೆಯದ್ದೇ ರೀತಿಯಲ್ಲಿ ಬುದ್ಧಿ ಕಲಿಸುವುದಾಗಿ ಅವರು ಹೇಳಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: 2050ರಲ್ಲಿ ಶ್ರದ್ಧಾ ಏನ್​ ಮಾಡ್ತಾರೆ ಗೊತ್ತಾ?

    ಈ ಪ್ರಕರಣ ರಾಜ್ಯಾದ್ಯಂತ ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಸ್ಲಿಂ ಅಂಗಡಿಯನ್ನೇ ಗುರಿ ಮಾಡಿ ಎಚ್ಚರಿಕೆ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ದೇವರ ಚಿತ್ರವಿರುವ ಪಟಾಕಿಗಳ ಮಾರಾಟಕ್ಕೆ ಈಗಾಗಲೇ ಮಧ್ಯಪ್ರದೇಶ ರಾಜ್ಯಸರ್ಕಾರ ನಿರ್ಬಂಧ ಹೇರಿದೆ. ಹೀಗಿರುವಾಗ ಈ ಘಟನೆ ನಡೆದಿರುವುದರ ಹಿಂದಿನ ಉದ್ದೇಶ ಏನು ಎನ್ನುವುದು ಬೆಳಕಿಗೆ ಬರಬೇಕಿದೆ. (ಏಜೆನ್ಸೀಸ್​)

    ಪಶ್ಚಿಮ ಬಂಗಾಳವೂ ನಮ್ಮದೇ; ಮಮತಾ ವಿರುದ್ಧ 200 ಸೀಟು ಗೆಲ್ಲುತ್ತೇವೆಂದ ಅಮಿತ್​ ಷಾ

    ಉದ್ಯಾನವನದ ಹಾಟ್​ಸ್ಟ್ರಿಂಗ್​ನಲ್ಲೇ ಚಿಕನ್​ ಅಡುಗೆ ಮಾಡಿದ ಯುವಕ; ತಕ್ಕ ಶಿಕ್ಷೆ ಕೊಟ್ಟ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts