More

    ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ್ರೆ… ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

    ಹರಿಯಾಣ: ನಿನ್ನೆ (ಮೇ.24) ಇಲ್ಲಿನ ಮಹೇಂದ್ರಗಢದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಖಂಡಿತವಾಗಿ ಅಗ್ನಿವೀರ್ ಯೋಜನೆಯನ್ನು ಕಿತ್ತು ಬಿಸಾಡ್ತೀವಿ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅಲ್ಲಿಯೂ ರಾಜಕೀಯ ಇದೆ… LSG ಕೋಚ್​ ಬಿಚ್ಚಿಟ್ರು ಕೆ.ಎಲ್. ರಾಹುಲ್ ಹೇಳಿದ ಕಿವಿಮಾತು

    “ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಯೋಧರನ್ನು ಕಾರ್ಮಿಕರಂತೆ ಮಾಡಿದ್ದಾರೆ. ಸೇನೆಗೆ ಅಗ್ನಿವೀರ್ ಯೋಜನೆ ಬೇಕಾಗಿಲ್ಲ. ಇದು ಪಿಎಂಒ ಮಾಡಿದ ಯೋಜನೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅದನ್ನು ಸಂಪೂರ್ಣವಾಗಿ ತೆಗೆದುಹಾಕುತ್ತೇವೆ. ಇಲ್ಲಿನ ಯುವಕರು ಸೇನೆಗೆ ಆಯ್ಕೆಯಾಗಲು ಹೆಮ್ಮೆಪಡುತ್ತಾರೆ” ಎಂದು ಹೇಳಿದರು.

    ಪ್ರತಿಭಟನಾ ನಿರತ ರೈತರ ಬಗ್ಗೆ ಧ್ವನಿ ಎತ್ತಿದ ರಾಹುಲ್, “ಹರಿಯಾಣದ ರೈತರು ದೇಶದ ಹೊಲಗಳಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಮೋದಿ ಸರ್ಕಾರವು ನಿಮ್ಮ ಹಕ್ಕುಗಳನ್ನು ಕಸಿದುಕೊಂಡಿದ್ದಲ್ಲದೇ ಕೋಟ್ಯಾಧಿಪತಿಗಳಿಗೆ ಸಹಾಯ ಮಾಡಲು ಭೂ ನ್ಯಾಯಮಂಡಳಿ ಮಸೂದೆಯನ್ನು ರದ್ದುಗೊಳಿಸಿತು. ನಂತರ ಮೂರು (ಫಾರ್ಮ್) ಕಾನೂನುಗಳು ಬಂದವು, ಆದರೆ ಸರ್ಕಾರ ಮಾತ್ರ ಇದ್ಯಾವುದಕ್ಕೂ ಉತ್ತರಿಸಲಿಲ್ಲ” ಎಂದರು,(ಏಜೆನ್ಸೀಸ್).

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts