More

    ಪ್ರಧಾನಿ ಮೋದಿ ನಿಂದನೆ: ರಾಹುಲ್​ ವಿರುದ್ಧ ಅಮಿತ್​ ಶಾ ಆಕ್ರೋಶ

    ನವದೆಹಲಿ: ಪ್ರಧಾನಿ ಮೋದಿ ಅವರು ಹುಟ್ಟಿನಿಂದ ಒಬಿಸಿ ಸಮುದಾಯಕ್ಕೆ ಸೇರಿದವರಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಹರಿಹಾಯ್ದಿದ್ದಾರೆ.

    ಇದನ್ನೂ ಓದಿ:ರಣ ಬಿಸಿಲಿನಲ್ಲಿ ಎಳನೀರು ಯಾಕೆ ಕುಡಿಯಬೇಕು? ಕಾರಣ ಇಲ್ಲಿದೆ ನೋಡಿ!

    ಭಾರತ್​ ಜೋಡೊ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಕುರಿತು ರಾಹುಲ್​ ಗಾಂಧಿ ಮಾಡಿದ್ದ ಟೀಕೆಗಳನ್ನು ಉಲ್ಲೇಖಿಸಿ ಶನಿವಾರ ಇಟಿ ನೌ-ಗ್ಲೋಬಲ್​ ಬಿಸಿನಸ್​ ಶೃಂಗಸಭೆಯಲ್ಲಿ ಮಾತನಾಡಿದರು.

    ಪ್ರಧಾನಿ ಮೋದಿ ಅವರು ಹುಟ್ಟಿನಿಂದ OBC ಅಲ್ಲ. ತಮ್ಮ ಜಾತಿಯ ಕುರಿತಾಗಿ ದೇಶದ ಜನತೆಗೆ ಸುಳ್ಳು ಹೇಳಿದ್ದಾರೆ. ತಾವು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಪ್ರಧಾನಿ ಮೋದಿ ಅವರು, ‘ತೇಲಿ’ ಸಮುದಾಯಕ್ಕೆ ಸೇರಿದವರು ಎಂದು ರಾಹುಲ್ ಗಾಂಧಿ ಹೊಸ ವಿವಾದ ಹೇಳಿಕೆ ನೀಡಿದ್ದರು.

    ಈ ಹೇಳಿಕೆ ಪ್ರತಿಕ್ರಿಯಸಿದ ಅಮಿತ್​ ಶಾ ಅವರು, ರಾಹುಲ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ಗೆ ವಾಸ್ತವಾಂಶಗಳನ್ನು ತಿರುಚಿ ವಿವಾದ ಸೃಷ್ಟಿಸುವ ಅಭ್ಯಾಸವಿದೆ. ರಾಹುಲ್ ಗಾಂಧಿಗೆ ಅವರ ಶಿಕ್ಷಕರು ಹೇಳಿಕೊಟ್ಟಿಲ್ಲ. ಇದು ಅತ್ಯಂತ ದುಃಖಕರವಾಗಿದೆ. ಇವರು ಪ್ರಧಾನಿ ಮೋದಿ ಜಾತಿಯ ಬಗ್ಗೆ ಪ್ರಶ್ನೆ ಮಾಡುತ್ತಾರೆ ವ್ಯಂಗ್ಯವಾಡಿದರು.

    ರಾಹುಲ್ ಗಾಂಧಿಗೆ ಒಂದು ನೀತಿ ಇದೆ. ಸಾರ್ವಜನಿಕವಾಗಿ ಸುಳ್ಳು ಹೇಳುವುದು ಮತ್ತು ಅದೇ ಸುಳ್ಳನ್ನು ಮತ್ತೆ ಮತ್ತೆ ಸುಳ್ಳು ಹೇಳುವುದು. ಕಾಂಗ್ರೆಸ್ ಪಕ್ಷಕ್ಕೆ ಜಾತಿಗಳ ನಡುವಿನ ವ್ಯತ್ಯಾಸದ ಬಗ್ಗೆ ತಿಳಿದಿದೆಯೇ ಎಂದು ನನಗೆ ಅನುಮಾನ ಹುಟ್ಟು ಹಾಕಿದೆ. ಪ್ರಧಾನಿ ಮೋದಿ ಅವರು ಒಬಿಸಿ, ಒಬಿಸಿ ಬ್ಲಾಕ್ ಜಾತಿ ಅಲ್ಲ ಎಂದು ಹೇಳಿದರು.

    ಮೋದಿ ಅವರ ಜಾತಿಯನ್ನು ಜುಲೈ 25, 1994 ರಂದು ಒಬಿಸಿ ಎಂದು ಪಟ್ಟಿಗೆ ಸೇರಿಸಲಾಗಿದೆ. ಆಗ ಗುಜರಾತ್​ನ ಸಿಎಂ ಭಬಿಲ್ದಾಸ್ ಮೆಹ್ರಾ ಕಾಂಗ್ರೆಸ್​ ಅಧಿಕಾರದಲ್ಲಿತ್ತು. ಮೋದಿ ಅವರು ಆಗ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಕಾಂಗ್ರೆಸ್ ನಡೆಸುತ್ತಿರುವ ರಾಜ್ಯ ಸರ್ಕಾರವು ಒಬಿಸಿ ಅಡಿಯ- ಸಮುದಾಯವನ್ನು ಪಟ್ಟಿ ಮಾಡಿತ್ತು. 1994 ರಲ್ಲಿ ಸ್ವಃತ, 2000ನೇ ಇಸವಿಯಲ್ಲಿ ಕೇಂದ್ರ ಸರ್ಕಾರದ ಮುಂದೆ ಕಾಂಗ್ರೆಸ್ ಶಿಫಾರಸುಗಳನ್ನು ಮಾಡಿತ್ತು ಅದನ್ನು 2000ನೇ ಇಸವಿಯಲ್ಲಿ ಅಂಗೀಕರಿಸಿ ಪಟ್ಟಿ ಮಾಡಿತ್ತು. 2000ನೇ ಇಸವಿಯಲ್ಲೂ ಮೋದಿ ಅವರ ಸರ್ಕಾರದಲ್ಲಿ ಎಲ್ಲಿಯೂ ಇರಲಿಲ್ಲ, ಸಂಸದ, ಶಾಸಕ ಅಥವಾ ಸರಪಂಚ್ ಆಗಿರಲಿಲ್ಲ. 2001ರಲ್ಲಿ ಮೋದಿ ಗುಜರಾತ್ ಸಿಎಂ ಆದರು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್​ ಗೆ ಸತ್ಯಗಳನ್ನು ತಿರುಚಿ ಅದರ ಸುತ್ತ ವಿವಾದವನ್ನು ಸೃಷ್ಟಿಸುವ ಅಭ್ಯಾಸವಿದೆ. ಅವರು ಅದರ ಸುತ್ತ ವಿವಾದವನ್ನು ಸೃಷ್ಟಿಸುತ್ತಿದ್ದರೆ, ಒಬಿಸಿ ವರ್ಗದ ಅಡಿಯಲ್ಲಿ ಬರುವ ಸಮುದಾಯಗಳಿಗೆ ಕಾಂಗ್ರೆಸ್​ ಕೊಡುಗೆ ಏನು ಎಂದು ಅಮಿತ್ ಶಾ ಪ್ರಶ್ನೆ ಮಾಡಿದರು.

    ಒಬಿಸಿ ಸಮುದಾಯಗಳಿಗೆ ಸಾಂವಿಧಾನಿಕ ಮಾನ್ಯತೆ ನೀಡಿದವರು, ಒಬಿಸಿಗಳಿಗೆ ಆಯೋಗವನ್ನು ರಚಿಸಿದ್ದು, ಒಬಿಸಿಗಳಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿದವರು ಪ್ರಧಾನಿ ಮೋದಿ ಎಂದು ಶಾ ಹೇಳಿದರು.

    ಆಪರೇಷನ್​ ಥಿಯೇಟರ್​​ನಲ್ಲಿ ಪ್ರೀ ವೆಡ್ಡಿಂಗ್ ಚಿತ್ರೀಕರಣ! ವಿಡಿಯೋ ವೈರಲ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts