More

    ಅಖಾಡಕ್ಕಿಳಿದ ರಾಹುಲ್; ಬಜರಂಗ್ ಪೂನಿಯಾ ಜೊತೆ ಸೆಣಸಾಟ, ಬೆರಗಾದ ಕುಸ್ತಿಪಟುಗಳು

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಡಿಸೆಂಬರ್ 27) ಬೆಳಗ್ಗೆ 6:15 ರ ಸುಮಾರಿಗೆ ಹರಿಯಾಣ ಅಖಾಡ ತಲುಪಿದರು. ಅವರು ಅಲ್ಲಿ ಕುಸ್ತಿಪಟುಗಳನ್ನು ಭೇಟಿಯಾಗಿ, ಬಜರಂಗ್ ಪುನಿಯಾ ಅವರೊಂದಿಗೆ ಕುಸ್ತಿ ಪಂದ್ಯವನ್ನೂ ನಡೆಸಿದರು.

    ಅಖಾಡಕ್ಕಿಳಿದ ರಾಹುಲ್; ಬಜರಂಗ್ ಪೂನಿಯಾ ಜೊತೆ ಸೆಣಸಾಟ, ಬೆರಗಾದ ಕುಸ್ತಿಪಟುಗಳು

    ಬುಧವಾರ ಬೆಳಗ್ಗೆ ಹರ್ಯಾಣದ ಜಜ್ಜರ್ ಜಿಲ್ಲೆಯ ಅಖಾಡಕ್ಕೆ ಹಠಾತ್ತನೆ ಭೇಟಿ ನೀಡಿದ ರಾಹುಲ್, ಬಜರಂಗ್ ಪುನಿಯಾ ಸೇರಿದಂತೆ ಕುಸ್ತಿಪಟುಗಳನ್ನು ಭೇಟಿ ಮಾಡಿದರು.

    ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಕುರಿತು ನಡೆಯುತ್ತಿರುವ ವಿವಾದದ ನಡುವೆಯೇ ರಾಹುಲ್​​​​​​​ಕುಸ್ತಿಪಟುಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ರಾಹುಲ್ ಬಜರಂಗ್ ಪೂನಿಯಾ ಜೊತೆ ಅಖಾಡದಲ್ಲಿ ಸೆಣಸಾಡುತ್ತಿದ್ದ ದೃಶ್ಯ ಕಂಡುಬಂತು.

    ಅಖಾಡಕ್ಕಿಳಿದ ರಾಹುಲ್; ಬಜರಂಗ್ ಪೂನಿಯಾ ಜೊತೆ ಸೆಣಸಾಟ, ಬೆರಗಾದ ಕುಸ್ತಿಪಟುಗಳು

    ಕಾಂಗ್ರೆಸ್‌ನ ಹರಿಯಾಣ ಘಟಕದ ಹಿರಿಯ ನಾಯಕರ ಪ್ರಕಾರ, ಗಾಂಧಿಯವರು ಮುಂಜಾನೆಯೇ ಛಾರಾ ಗ್ರಾಮದ ‘ವೀರೇಂದ್ರ ಅಖಾಡ’ ತಲುಪಿದರು. ನಂತರ ಅವರು ಪುನಿಯಾ ಮತ್ತು ಇತರ ಕುಸ್ತಿಪಟುಗಳೊಂದಿಗೆ ಮಾತನಾಡಿದರು. ರಾಹುಲ್ ಗಾಂಧಿ ಹಲವು ಗಂಟೆಗಳ ಕಾಲ ಅಖಾಡದಲ್ಲಿಯೇ ಇದ್ದರು.

    ಕುಸ್ತಿಪಟು ಸುದ್ದಿಗಾರರೊಂದಿಗೆ ಮಾತನಾಡಿ, “ಅವರು (ರಾಹುಲ್) ಬೆಳಗ್ಗೆ 6:15 ಕ್ಕೆ ಅಖಾಡವನ್ನು ತಲುಪಿದರು. ಅವರು ನಮ್ಮ ದಿನಚರಿಯ ಬಗ್ಗೆ ಕೇಳಿದರು, ನಾವು ಹೇಗೆ ವ್ಯಾಯಾಮ ಮಾಡುತ್ತಿದ್ದೇವೆ ಎಂದು ನೋಡಿದರು. ಅವರೂ ಕೆಲವು ವ್ಯಾಯಾಮಗಳನ್ನು ಮಾಡಿದರು. ಅವರಿಗೆ ಕುಸ್ತಿಯ ಬಗ್ಗೆ ಸಾಕಷ್ಟು ಜ್ಞಾನವಿರುವುದು ನಮಗೆ ಸಂತಸ ತಂದಿದೆ. ರಾಹುಲ್​​​ ಹಾಲು, ರಾಗಿ ರೊಟ್ಟಿ, ತರಕಾರಿ ತಿಂದರು. ಜತೆಗೆ ಸ್ಥಳೀಯವಾಗಿ ಬೆಳೆದ ಕೆಲವು ತರಕಾರಿಗಳನ್ನು ನೀಡಲಾಯಿತು, ಅದನ್ನು ಅವರು ತಮ್ಮೊಂದಿಗೆ ತೆಗೆದುಕೊಂಡುಹೋದರು” ಎಂದು ಹೇಳಿದರು.

    ಅಖಾಡಕ್ಕಿಳಿದ ರಾಹುಲ್; ಬಜರಂಗ್ ಪೂನಿಯಾ ಜೊತೆ ಸೆಣಸಾಟ, ಬೆರಗಾದ ಕುಸ್ತಿಪಟುಗಳು

    ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಮಂಗಳವಾರ ತಮ್ಮ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಪ್ರಧಾನಿಗೆ ಹಿಂದಿರುಗಿಸಲು ನಿರ್ಧರಿಸಿದ್ದಾರೆ. ಕುಸ್ತಿಪಟುಗಳು ನ್ಯಾಯಕ್ಕಾಗಿ ಹೋರಾಡುತ್ತಿರುವಾಗ ಅಂತಹ ಗೌರವಗಳು ಅರ್ಥಹೀನವಾಗುತ್ತವೆ ಎಂದು ಹೇಳಿದರು.

    ರಾಹುಲ್ ಗಾಂಧಿ ನೇತೃತ್ವದಲ್ಲಿ ಜನವರಿ 14 ರಿಂದ ‘ಭಾರತ ನ್ಯಾಯ ಯಾತ್ರೆ’! ಎಲ್ಲಿಂದ ಎಲ್ಲಿಯವರೆಗೆ?

    ದಟ್ಟ ಮಂಜಿನಿಂದ ಎಲ್ಲ ಮಾಯ…ವಿಮಾನ ಹಾರಾಟ, ರೈಲುಗಳ ಸಂಚಾರ ಗಂಟೆಗಟ್ಟಲೆ ವಿಳಂಬ; ಫೋಟೋಗಳಲ್ಲಿ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts