More

    ಸಿಂಧಿಯಾ ಪಕ್ಷ ಬಿಟ್ಟು ಹೋದ ಬೆನ್ನಲ್ಲೇ ಆರ್ಥಿಕತೆ ವಿಚಾರವಿಟ್ಟುಕೊಂಡು ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ..

    ನವದೆಹಲಿ: ಮಧ್ಯಪ್ರದೇಶದಲ್ಲಿ ಇಷ್ಟೆಲ್ಲ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದರೂ ಸುಮ್ಮನೆ ಇದ್ದಿದ್ದ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಇಂದು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಅವರ ಆಪ್ತರಲ್ಲಿ ಓರ್ವರೆನಿಸಿಕೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ನಿನ್ನೆ ತಮ್ಮ ರಾಜೀನಾಮೆ ಪತ್ರವನ್ನು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಅದಾದ ಕೆಲವೇ ಕ್ಷಣಗಳಲ್ಲಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದರು. ಜ್ಯೋತಿರಾದಿತ್ಯ ಸಿಂಧ್ಯಾ ಜತೆ 22 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಪತನವಾಗಿ, ಕಮಲ ಅರಳುವುದು ಬಹುತೇಕ ನಿಶ್ಚಿತವಾಗಿದೆ.

    ವಾರಗಳಿಂದಲೂ ರಾಜಕೀಯ ನಾಟಕಗಳು ನಡೆಯುತ್ತಲೇ ಇದ್ದರೂ ಮೌನವಹಿಸಿದ್ದ ರಾಹುಲ್​ ಗಾಂಧಿ ಇಂದು ಟ್ವಿಟರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆರೋಪ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರೇ, ಮಧ್ಯಪ್ರದೇಶದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್​ ಸರ್ಕಾರವನ್ನು ಅಸ್ಥಿರಗೊಳಿಸುವುದರಲ್ಲಿಯೇ ನಿರತರಾಗಿರುವ ನೀವು, ಜಾಗತಿಕ ಕಚ್ಚಾ ತೈಲ ಬೆಲೆ ಶೇ.35ರಷ್ಟು ಇಳಿಕೆ ಆಗಿದ್ದನ್ನು ಬಹುಶಃ ಗಮನಿಸಲಿಲ್ಲ ಎನ್ನಿಸುತ್ತಿದೆ ಎಂದು ರಾಹುಲ್​ ಗಾಂಧಿ ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದಾರೆ.

    ಜಾಗತಿಕ ಕಚ್ಚಾತೈಲ ಬೆಲೆ ಕಡಿಮೆಯಾಗಿದೆ. ಇನ್ನಾದರೂ ಪೆಟ್ರೋಲ್​ ಬೆಲೆಯನ್ನು ಲೀಟರ್​ಗೆ 60 ರೂ.ಗಿಂತಲೂ ಕಡಿಮೆ ಮಾಡುವ ಮೂಲಕ ಭಾರತೀಯರಿಗೆ ಅನುಕೂಲ ಮಾಡಿಕೊಡುತ್ತೀರಾ? ಇದು ನಿಂತ ನೀರಾದ ಆರ್ಥಿಕತೆಯ ಉತ್ತೇಜನಕ್ಕೆ ಸಹಾಯ ಮಾಡುತ್ತದೆ ಎಂದು ಮೋದಿಯವರ ಬಳಿ ಪ್ರಶ್ನಿಸಿದ್ದಾರೆ.

    ಇತ್ತೀಚೆಗೆ ದೇಶದ ಯಾವುದೇ ವಿಚಾರಕ್ಕೆ ಸಂಬಂಧಪಟ್ಟು ರಾಹುಲ್​ ಗಾಂಧಿಯವರು ಪ್ರತಿಕ್ರಿಯೆ ನೀಡಿದರೂ ಆರ್ಥಿಕತೆ ಕುಸಿತವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಸದ್ಯ ಮಧ್ಯಪ್ರದೇಶ ಕಾಂಗ್ರೆಸ್ ಉಳಿದ 92 ಶಾಸಕರನ್ನು ಕಾಪಾಡಿಕೊಳ್ಳಲು ಅವರನ್ನೆಲ್ಲ ಜೈಪುರ ಸೇರಿ ಮತ್ತಿತರ ಪ್ರದೇಶಗಳಿಗೆ ಕಳಿಸಲು ಪ್ರಯತ್ನಿಸುತ್ತಿದೆ. ಈ ಬೆಳವಣಿಗೆಗೂ ಕೂಡ ರಾಹುಲ್​ ಗಾಂಧಿ ಆರ್ಥಿಕತೆಯ ರಾಗವನ್ನೇ ಪ್ರಸ್ತುತಪಡಿಸಿದ್ದಾರೆ. (ಏಜೆನ್ಸೀಸ್​)

    ‘ಸಿಂಧಿಯಾ ರಾಹುಲ್​ ಗಾಂಧಿ ಭೇಟಿಗಾಗಿ ತಿಂಗಳಾನುಗಟ್ಟಲೆ ಕಾದಿದ್ದರು..ಈಗಂತೂ ಕಾಂಗ್ರೆಸ್​ನಲ್ಲಿ ಯುವ ನಾಯಕರಿಗೆ ಅನಾಥ ಭಾವ ಕಾಡುತ್ತಿದೆ…’

    ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದ್ದರೆ ಹೀಗಿರಲಿ ನಿಮ್ಮ ಆಹಾರ ಪದ್ಧತಿ…

    ಕೋರೆಹಲ್ಲು ಇರುವ ಜಿಂಕೆಯೂ ಇದೆ…ಅದ್ಯಾವುದು ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts