More

    ರಾಘವೇಂದ್ರ ಬ್ಯಾಂಕ್ ಮಾಜಿ ಸಿಇಒ ಡೆತ್‌ನೋಟ್‌ನಲ್ಲಿವೆ ಸ್ಫೋಟಕ ಸಂಗತಿಗಳು!

    ಬೆಂಗಳೂರು: ಸಾವಿರಾರು ಕೋಟಿ ರೂ. ಅವ್ಯವಹಾರ ಆರೋಪ ಹೊತ್ತು ನಿನ್ನೆ ಆತ್ಮಹತ್ಯೆ ಮಾಡಿಕೊಂಡ ಶ್ರೀಗುರು ರಾಘವೇಂದ್ರ ಬ್ಯಾಂಕ್ ಮಾಜಿ ಸಿಇಒ ವಾಸುದೇವ ಮಯ್ಯ ಬರೆದಿಟ್ಟಿದ್ದ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ಸ್ಫೋಟಕ ಸತ್ಯಗಳನ್ನು ಅವರು ಬಹಿರಂಗಪಡಿಸಿದ್ದಾರೆ.

    ಎಪ್ಪತ್ತು ವರ್ಷದ ಮಯ್ಯ ಸುಬ್ರಹ್ಮಣ್ಯಪುರದಲ್ಲಿ ಸೋಮವಾರ ರಾತ್ರಿ ತಮ್ಮ ಕಾರಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ದೇಹದ ಬಳಿಯೇ 12 ಪುಟಗಳ ಡೆತ್‌ನೋಟ್ ಸಿಕ್ಕಿದೆ. ಅದರಲ್ಲಿ ಅವರು ತಮಗೆ ಮೋಸ ಮಾಡಿದವರ ಹೆಸರುಗಳನ್ನು ಬರೆದಿದ್ದಾರೆ. ‘‘ನಾನು ಯಾವ ಆಸ್ತಿಯನ್ನೂ ಸಂಪಾದನೆ ಮಾಡಲಿಲ್ಲ. ಬಡ್ಡಿಗೆ ಹಣ ಕೊಟ್ಟು ಇದ್ದುದನ್ನೂ ಕಳೆದುಕೊಂಡೆ. ನನ್ನ ಸ್ಥಾನಮಾನದಿಂದ ಲಾಭ ಪಡೆದವರು, ಎಂಜಾಯ್ ಮಾಡಿದವರು ಬೇರೆಯವರು. ನಾನು ಮಾತ್ರ ಬಲಿಪಶುವಾದೆ’’ ಎಂದಿದ್ದಾರೆ. ಇದನ್ನೂ ಓದಿ: ಮಾಲಿವುಡ್​ಗೂ ಅಂಟಿದ ಕಳ್ಳಸಾಗಣೆ ನಂಟು: ನಟಿ ಶಾಮ್ನಾ ಪ್ರಕರಣದಲ್ಲೂ ಕೇಳಿಬಂತು ಚಿನ್ನದ ರಾಣಿ ಹೆಸರು!

    ‘‘ಕುಮಾರೇಶ, ರಘುನಾಥ್, ಜಸ್ವಂತ್ ರೆಡ್ಡಿ, ತಲ್ಲಂ, ರಂಜಿತ್, ಶ್ರೀನಿವಾಸ್ ಮುಂತಾದವರು ನನ್ನಿಂದ ನೆರವು ಪಡೆದು ನನಗೇ ಮೋಸ ಮಾಡಿದರು. ಜಸ್ವಂತ್ 150 ಕೋಟಿ ರೂ., ರಘುನಾಥ್ 143 ಕೋಟಿ ರೂ. ಸಾಲ ಪಡೆದಿದ್ದಾರೆ. ಇವರೆಲ್ಲ ಈ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ, ಚಿತ್ರರಂಗದಲ್ಲಿ ತೊಡಗಿಸಿ ಲಾಭ ಮಾಡಿಕೊಂಡಿದ್ದಾರೆ’’ ಎಂದು ಡೆತ್‌ನೋಟ್‌ನಲ್ಲಿ ಮಯ್ಯ ಆರೋಪಿಸಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದು ಡೆತ್‌ನೋಟ್‌ನಲ್ಲಿ ಹೆಸರಿರುವವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ರಾಘವೇಂದ್ರ ಬ್ಯಾಂಕ್ ಹಗರಣ ಜನವರಿಯಲ್ಲಿ ಬೆಳಕಿಗೆ ಬಂದಿತ್ತು. ಹಣ ಡ್ರಾ ಮಾಡುವುದಕ್ಕೆ ಆರ್‌ಬಿಐ ಮಿತಿ ನಿಗದಿಪಡಿಸಿದ್ದರಿಂದ ಗ್ರಾಹಕರಿಗೆ ತೊಂದರೆಯಾಗಿತ್ತು. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಗ್ರಾಹಕರ ಪರವಾಗಿ ಸ್ವತಃ ವಾದ ಮಂಡಿಸಿದ್ದರು. ನಂತರ ಹಗರಣದ ತನಿಖೆ ನಡೆಸುತ್ತಿರುವ ಎಸಿಬಿ ಪೊಲೀಸರು ಬ್ಯಾಂಕ್ ಮೇಲೆ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಮಯ್ಯ ಮತ್ತು ಇತರ ಪದಾಧಿಕಾರಿಗಳ ಮನೆಯ ಮೇಲೂ ದಾಳಿ ನಡೆದಿತ್ತು.

    ಹೆಬ್ಬಾಳ್ಕರ್ ಕೊಟ್ಟ ಕುಕ್ಕರ್ ಇನ್ನೂ ಚೆನ್ನಾಗಿದೆಯಾ?: ರಮೇಶ್​ ಜಾರಕಿಹೊಳಿ ಟಾಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts