More

    ಬ್ಯಾಂಕ್ ಷೇರು ಬೆಲೆ ರೂ 2000 ತಲುಪಬಹುದು: ಖರೀದಿಗೆ 21 ತಜ್ಞರ ಸಲಹೆ

    ಮುಂಬೈ: ಮುಂಬರುವ ಕೆಲವು ದಿನಗಳಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ಷೇರುಗಳ ಬೆಲೆ 2000 ರೂಪಾಯಿಗೆ ಏರಬಹುದಾಗಿದೆ. ದೇಶೀಯ ಬ್ರೋಕರೇಜ್ ಸಂಸ್ಥೆ ಪ್ರಭುದಾಸ್ ಲೀಲಾಧರ್ ತನ್ನ ಗುರಿ ಬೆಲೆಯನ್ನು 2000 ರೂ.ನಲ್ಲಿ ನಿಗದಿಪಡಿಸಿ ಖರೀದಿಸಲು ಶಿಫಾರಸು ಮಾಡಿದೆ. ಅಂದರೆ, ಈ ಸ್ಟಾಕ್ ಕೆಲವೇ ದಿನಗಳಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು ಲಾಭವನ್ನು ನೀಡುತ್ತದೆ. ಪ್ರಸ್ತುತ ಈ ಷೇರಿನ ಬೆಲೆ 1536.35 ರೂ. ಇದೆ.

    ಈ ಹಿಂದೆ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಖರೀದಿಸಲು ಸಲಹೆ ನೀಡಿದಾಗ, 1950 ರೂ. ಗುರಿ ಬೆಲೆಯನ್ನು ನೀಡಿತ್ತು. ಕಳೆದ ತಿಂಗಳು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳ ಬೆಲೆ ಗಣನೀಯವಾಗಿ ಕುಸಿದಿತ್ತು. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ 1757.50 ಹಾಗೂ ಕನಿಷ್ಠ ಬೆಲೆ 1363.55 ರೂ. ಇದೆ. ಈಗ ಕಳೆದ ಕೆಲವು ವಾರಗಳಲ್ಲಿ ಈ ಷೇರಿಗೆ ಜೀವ ಬಂದಿದೆ. ಒಂದು ತಿಂಗಳಲ್ಲಿ ಶೇ. 7.50ರಷ್ಟು ಏರಿಕೆಯಾಗಿದೆ. ಆದರೂ, 2024ರ ಆರಂಭದಿಂದ ಇದುವರೆಗೆ ಅಂದಾಜು 10 ಪ್ರತಿಶತದಷ್ಟು ಕುಸಿದಿದೆ.

    ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳ ಕುರಿತು ಒಟ್ಟು 39 ಷೇರು ಮಾರುಕಟ್ಟೆ ವಿಶ್ಲೇಷಕರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ಇವುಗಳಲ್ಲಿ 21 ವಿಶ್ಲೇಷಕರು ಖರೀದಿ ಶಿಫಾರಸು ಮಾಡಿದ್ದರೆ, 14 ಮಂದಿ ಖರೀದಿ ರೇಟಿಂಗ್ ನೀಡಿದ್ದಾರೆ. ಇವಲ್ಲದೆ ಇನ್ನೂ ನಾಲ್ವರು ಹಿಡಿದಿಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ, ಮಾರಾಟ ಮಾಡಿ ಈ ಸ್ಟಾಕ್‌ನಿಂದ ಹೊರಬರುವ ಬಗ್ಗೆ ಯಾರೂ ಮಾತನಾಡಲಿಲ್ಲ.

    ಮಾರ್ಚ್ ತ್ರೈಮಾಸಿಕದಲ್ಲಿ ಪ್ರವರ್ತಕರು ತಮ್ಮ ಈ ಬ್ಯಾಂಕ್​ನಲ್ಲಿ ತಮ್ಮ ಪಾಲನ್ನು ಶೇಕಡಾ 25.52 ಕ್ಕೆ ಇಳಿಸಿದ್ದಾರೆ. ಇದಲ್ಲದೆ, ಈ ಕೊನೆಯ ತ್ರೈಮಾಸಿಕದಲ್ಲಿ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ತಮ್ಮ ಪಾಲನ್ನು 52.30 ಶೇಕಡಾದಿಂದ 47.83 ಶೇಕಡಾಕ್ಕೆ ಇಳಿಸಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ತಮ್ಮ ಹಿಡುವಳಿಯನ್ನು ಶೇ. 30.45ರಿಂದ ಶೇ. 33.32ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಇತರರು 18.84 ರಷ್ಟು ಪಾಲನ್ನು ಹೊಂದಿದ್ದಾರೆ.

    ಭರವಸೆ ಈಡೇರಿಸಿದ್ದೇವೆ; ಜನಬೆಂಬಲ ಹೆಚ್ಚುತ್ತಿದೆ; 3ನೇ ಬಾರಿ ಅಧಿಕಾರಕ್ಕೆ ಮರಳುತ್ತೇವೆ: ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ವಿಶ್ವಾಸ

    ಮೋದಿ ಆಡಳಿತದ 10 ವರ್ಷಗಳಲ್ಲಿ ಸೂಚ್ಯಂಕ 3 ಪಟ್ಟು ಹೆಚ್ಚಳ: ಹೂಡಿಕೆದಾರರ ಸಂಪತ್ತು 5 ಪಟ್ಟು ವೃದ್ಧಿ

    ತಿಂಗಳಾಂತ್ಯದಲ್ಲಿ ಪ್ರಧಾನಿ ಮೋದಿ ಜತೆ ಎಲಾನ್ ಮಸ್ಕ್ ಚರ್ಚೆ: ಟೆಸ್ಲಾ ಮುಖ್ಯಸ್ಥ ಭಾರತಕ್ಕೆ ಭೇಟಿ ನೀಡುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts