ಯುಎಸ್ ಓಪನ್‌ನಿಂದ ಹಿಂದೆ ಸರಿದ ಸ್ಟಾರ್ ಆಟಗಾರ ನಡಾಲ್

rafeal nadal for web
Published on

ಮ್ಯಾಡ್ರಿಡ್: ಸ್ಪೇನ್ ದಿಗ್ಗಜ ರಾಫೆಲ್ ನಡಾಲ್, ಕಾಲಿನ ಗಾಯದಿಂದ ಸಂಪೂರ್ಣ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮುಂಬರುವ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಸ್ವತಃ ನಡಾಲ್ ಅವರೇ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ಹಾಲಿ ಚಾಂಪಿಯನ್ ಡೊಮಿನಿಕ್ ಥೀಮ್ ಕೂಡ ಟೂರ್ನಿಯಿಂದ ಹಿಂದೆ ಸರಿದಿದ್ದರು. 4 ಬಾರಿ ಯುಎಸ್ ಓಪನ್ ಚಾಂಪಿಯನ್ ನಡಾಲ್ ಅಲಭ್ಯತೆಯಿಂದಾಗಿ ನೊವಾಕ್ ಜೋಕೊವಿಕ್ ಹಾದಿ ಸುಗಮವಾದಂತಾಗಿದೆ.

‘ಇದೊಂದು ಅನಿರೀಕ್ಷಿತ ಘಟನೆ, ಕಾಲಿನ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಇದಕ್ಕೆ ಇನ್ನು ಸಮಯ ಬೇಕು. ಹೀಗಾಗಿ ಯುಎಸ್ ಓಪನ್‌ನಲ್ಲಿ ಕಣಕ್ಕಿಳಿಯಲು ಸಾಧ್ಯವಾಗುತ್ತಿಲ್ಲ’ ಎಂದು ನಡಾಲ್ ಹೇಳಿಕೊಂಡಿದ್ದಾರೆ. ಈ ವರ್ಷ ಪೂರ್ತಿ ಟೆನಿಸ್‌ನಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ.

ನನಗೆ ಗಾಯದ ಸಮಸ್ಯೆ ಹೊಸದೆನಲ್ಲ. 2005ರಲ್ಲೂ ಇದೇ ಮಾದರಿಯ ಸಮಸ್ಯೆ ಎದುರಿಸಿದ್ದೆ, ಆ ವೇಳೆ ವೈದ್ಯರು ನನ್ನ ವೃತ್ತಿ ಜೀವನದ ಬಗ್ಗೆ ನಕರಾತ್ಮಕವಾಗಿ ಹೇಳಿದ್ದರು. ಇದೀಗ ಮತ್ತೆ ಅದೇ ಸಮಸ್ಯೆ ಎದುರಿಸುತ್ತಿರುವೆ. ಸಂಪೂರ್ಣ ಗುಣಮುಖನಾಗಿ ಅಂಕಣಕ್ಕೆ ವಾಪಸಾಗುವೆ ಎಂದು ತಿಳಿಸಿದ್ದಾರೆ. ಆಗಸ್ಟ್ 30 ರಿಂದ ಸೆ.12 ರವರೆಗೆ ಯುಎಸ್ ಓಪನ್ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net