More

  ಇವರದ್ದು ನಿಷ್ಪ್ರಯೋಜಕ ತಂಡ​! ಭಾರೀ ಚರ್ಚೆಗೆ ಗ್ರಾಸವಾದ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ ಹೇಳಿಕೆ

  ನ್ಯೂಯಾರ್ಕ್​: ಜೂ. 01ರಿಂದ ಪ್ರಾರಂಭವಾದ ಐಸಿಸಿ ಟಿ20 ವಿಶ್ವಕಪ್​ ಪಂದ್ಯವಾಳಿಗಳಲ್ಲಿ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ತಂಡಗಳೇ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಕ್ರಿಕೆಟ್ ಅಭಿಮಾನಿಗಳ ವ್ಯಾಪಕ ಟೀಕೆಗಳಿಗೆ ಗುರಿಯಾಗುತ್ತಿವೆ. ಆ ಪೈಕಿ ಬಾಬರ್ ಆಜಂ ನೇತೃತ್ವದ ಪಾಕಿಸ್ತಾನ ತಂಡವೇ ಮೊದಲಿಗಿದೆ. ಆಡಿದ ಒಟ್ಟು ಪಂದ್ಯಗಳಲ್ಲಿ ಒಂದೆರೆಡರಲ್ಲಿ ಗೆಲುವು ಸಾಧಿಸಿದ್ದು ಬಿಟ್ಟರೆ ಉಳಿದ ಮ್ಯಾಚ್​ಗಳಲ್ಲಿ ಹೀನಾಯ ಸೋಲು ಕಂಡಿತು. ಭಾರತ ವಿರುದ್ಧವು ಅತ್ಯಂತ ಕಳಪೆ ಪ್ರದರ್ಶನ ತೋರಿದ ಪಾಕ್​ಗೆ ಭಾರೀ ಮುಖಭಂಗ ಉಂಟಾಯಿತು.

  ಇದನ್ನೂ ಓದಿ: ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು ಗೊತ್ತಾ; ಅವರ ಗಳಿಕೆಯ ಫುಲ್​​ ಡೀಟೇಲ್ಸ್​​ ಇಲ್ಲಿದೆ

  ಇನ್ನು ಯುಎಸ್ಎ ಮತ್ತು ಐರ್ಲೆಂಡ್ ನಡುವಿನ ಪಂದ್ಯಕ್ಕೆ ಭಾರೀ ಮಳೆ ಉಂಟಾದ ಕಾರಣ ಗ್ರೂಪ್ ಸ್ಟೇಜ್ ಟೂರ್ನಿಯಿಂದ ಇದೀಗ ಪಾಕ್ ತಂಡ ಅಧಿಕೃತವಾಗಿ ನಿರ್ಗಮಿಸಿದೆ. ಇದೇ ವಿಷಯವನ್ನು ಮುಂದಿಟ್ಟು ಕ್ಯಾಪ್ಟನ್ ಬಾಬರ್ ಆಜಂರನ್ನು ಟೀಕಿಸಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿರುದ್ಧವೂ ತೀವ್ರ ಕಿಡಿಕಾರಿದ್ದರು. ಇದೀಗ ಪಾಕ್​ನ ಮಾಜಿ ಸ್ಪಿನ್ನರ್​ ಡ್ಯಾನಿಶ್ ಕನೇರಿಯಾ ಕೂಡ ತಂಡದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

  ಐಸಿಸಿ ಟೂರ್ನಿಯಲ್ಲಿ ಪಾಕಿಸ್ತಾನದ ಪ್ರದರ್ಶನವನ್ನು ಕಟುವಾಗಿ ಟೀಕಿಸಿದ ಮಾಜಿ ಸ್ಪಿನ್ನರ್, “ನಾಯಕ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರಿಬ್ಬರ ಮೇಲೆ ಮಾತ್ರ ಕ್ರಿಕೆಟ್ ಮಂಡಳಿ ಅವಲಂಬಿತರಾದರೆ ಹೇಗೆ? ಬಾಬರ್ ಅವರ ಬ್ಯಾಟಿಂಗ್ ಪರಾಕ್ರಮವನ್ನು ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿಗೆ ಹೋಲಿಸಿ, ಮಾತನಾಡುವುದು ಕೂಡ ಸರಿಯಲ್ಲ” ಎಂದು ಗುಡುಗಿದರು.

  See also  ಹೆಣ್ಣು ಮಗುವಿಗೆ ಜನ್ಮ ನೀಡಿದ ಸೀರಿಯಲ್ ನಟಿ ದಿವ್ಯಾ ಶ್ರೀಧರ್

  ಇದನ್ನೂ ಓದಿ: ಕೂಲಿ ಮಾಡಿ ಕೂಡಿಟ್ಟಿದ್ದ ಹಣಕ್ಕೆ ಕೊಳ್ಳಿ, ಮನೆಯನ್ನು ಸುಟ್ಟಿತ್ತು ಒಲೆಯ ಬೆಂಕಿ…

  “ಜಿಂಬಾಬ್ವೆ ಮತ್ತು ಐರ್ಲೆಂಡ್‌ನಂತಹ ದುರ್ಬಲ ತಂಡಗಳ ವಿರುದ್ಧ ಸತತವಾಗಿ ಕಳಪೆ ಪ್ರದರ್ಶನ ನೀಡುವುದರ ಜತೆಗೆ ಪ್ರಮುಖ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಹ ವಿಫಲರಾಗಿದ್ದಾರೆ. ಅಂದು ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್ ಅವರನ್ನು ಪಾಕಿಸ್ತಾನ ತಂಡದ ನೂತನ ಕೋಚ್​ ಆಗಿ ತಂದಿದ್ದಕ್ಕೆ ಸಂತೋಷವಿದೆ. ಆದರೆ, ಅವರಿಂದ ಏಕಾಏಕಿ ಜಾದುವನ್ನು ಮಾತ್ರ ನಿರೀಕ್ಷಿಸಬೇಡಿ. ಗ್ಯಾರಿಗೂ ಹೆಚ್ಚಿನ ಸಮಯಬೇಕಿದೆ” ಎಂದಿದ್ದಾರೆ.

  “ಗ್ಯಾರಿ ತಮ್ಮ ಕೆಲಸ ಪ್ರಾರಂಭಿಸಲು ತುಂಬ ಸಮಯವಿದೆ. ಮೊದಲು ತಂಡದ ಪ್ರತಿಯೊಬ್ಬ ಆಟಗಾರ ಹಾಗೂ ಅಲ್ಲಿನ ವಾತಾವರಣ ಹೇಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಆನಂತರವೇ ಮುಂದಿನ ಬೆಳವಣಿಗೆ ಅಥವಾ ಫಲಿತಾಂಶದ ಬಗ್ಗೆ ಯೋಚಿಸಬೇಕಾಗುತ್ತದೆ. ನನ್ನ ಪ್ರಕಾರ ಇಬ್ಬರ ಮೇಲೆ ತಂಡ ಅವಲಂಬಿತರಾಗೋದು ಸರಿಯಲ್ಲ. ಇವರದು ಅತ್ಯಂತ ಕಳಪೆ ತಂಡ” ಎಂದು ಡ್ಯಾನಿಶ್ ಕನೇರಿಯಾ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

  ಅಲ್ಲು ಅರ್ಜುನ್‌-ಅಟ್ಲಿ ಕಾಂಬಿನೇಷನ್​ ಸಿನಿಮಾ ಸ್ಥಗಿತ! ಕಾರಣ ಕೇಳಿ ಶಾಕ್ ಆದ ಸ್ಟೈಲಿಶ್ ಸ್ಟಾರ್​ ಫ್ಯಾನ್ಸ್​

  ಅಂದು ಅಪ್ಪು ಮತ್ತು ಸುದೀಪ್​ ಸರ್​​ ಹಲ್ಲುಕಚ್ಚಿಕೊಂಡು ಸುಮ್ಮನಿದ್ರು: ನಿರ್ಮಾಪಕ ಉಮಾಪತಿ ಸ್ಪೋಟಕ ಹೇಳಿಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts