More

    ಲಡಾಖ್​ನಲ್ಲಿ ರಫೇಲ್​ ಯುದ್ಧವಿಮಾನಗಳ ಆರ್ಭಟ; ರಾತ್ರಿ ವೇಳೆ ಗುಡ್ಡಗಾಡು ಪ್ರದೇಶಗಳಲ್ಲಿ ತಾಲೀಮು

    ನವದೆಹಲಿ: ಕೆಲದಿನಗಳ ಹಿಂದಷ್ಟೇ ಭಾರತೀಯ ವಾಯುಪಡೆಯ ಅಂಬಾಲಾ ವಾಯುನೆಲೆಗೆ ಬಂದಿಳಿದಿರುವ ರಣಧೀರ ರಫೇಲ್​ ಯುದ್ಧವಿಮಾನಗಳು ಈಗಾಗಲೆ ಲಡಾಖ್​ ಪ್ರದೇಶಗಳಲ್ಲಿ ರಾತ್ರಿ ವೇಳೆ ತಾಲೀಮು ನಡೆಸಲು ಆರಂಭಿಸಿವೆ. ಲಡಾಖ್​ ಪೂರ್ವಭಾಗದಲ್ಲಿ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರು ಅತಿಕ್ರಮಣ ಮಾಡಿರುವ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಈ ಪರಿಸ್ಥಿತಿಗೆ ಪೂರಕವಾಗಿ ಲಡಾಖ್​ನ ಹಿಮಪರ್ವತಗಳ ನಡುವೆ ರಾತ್ರಿ ವೇಳೆ ಹಾರಾಟ ನಡೆಸುವ ತಾಲೀಮು ನಡೆಸುತ್ತಿರುವುದಾಗಿ ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.

    ಒಂದು ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ, ಗಗನದಿಂದ ಗಗನಕ್ಕೆ ಚಿಮ್ಮುವ ಮೀಟಿಯಾರ್​ ಕ್ಷಿಪಣಿಗಳು ಹಾಗೂ ಗಗನದಿಂದ ಭೂಮಿಗೆ ಅಪ್ಪಳಿಸುವ SCALP ಕ್ಷಿಪಣಿಯನ್ನು ಉಡಾವಣೆ ಮಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ರಫೇಲ್​ ಯುದ್ಧವಿಮಾನಗಳ ತಾಲೀಮು ಸಾಗಿದೆ ಎನ್ನಲಾಗಿದೆ.

    ಸದ್ಯಕ್ಕೆ ಈ ಯುದ್ಧವಿಮಾನಗಳು ವಾಸ್ತವ ಗಡಿರೇಖೆಯಿಂದ ಅನತಿ ದೂರದಲ್ಲಿ ಹಾರಾಟ ನಡೆಸುತ್ತಿವೆ. ಈ ಪ್ರದೇಶದಲ್ಲಿ ಪಿಎಲ್​ಎ ರೇಡಾರ್​ಗಳನ್ನು ಸ್ಥಾಪಿಸಿರುವುದರಿಂದ, ಇವುಗಳ ಫ್ರೀಕ್ವೆನ್ಸಿ ಸಿಗ್ನೇಚರ್​ಗಳನ್ನು ಗ್ರಹಿಸಿ, ದಾಳಿ ಮಾಡುವ ಸಂದರ್ಭದಲ್ಲಿ ಅವನ್ನು ಜಾಮ್​ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮ ಅನುಸರಿಸಿರುವುದಾಗಿ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಇದನ್ನೂ ಓದಿ: ಬದಲಾಗುತ್ತಿದೆ ಹೆಣ್ಣು ಹುಲಿಗಳ ವರ್ತನೆ; ಅನ್ಯಗುಂಪಿನ ಗಂಡು ಸಿಂಹಗಳನ್ನು ಕೂಡಲು ಆಸಕ್ತಿ

    ರಫೇಲ್​ ಯುದ್ಧವಿಮಾನಗಳಲ್ಲಿ ಪ್ರೋಗಾಮಬಲ್​ ಸಿಗ್ನಲ್​ ಪ್ರೊಸೆಸರ್​ಗಳಿವೆ. ಹಾಗಾಗಿ ಅವುಗಳ ಸಿಗ್ನಲ್​ ಫ್ರೀಕ್ವೆನ್ಸಿ ಬದಲಿಸಲು ಸಾಧ್ಯವಿದೆ. ಹಾಗಾಗಿ ಅವರನ್ನು ಲಡಾಖ್​ ವಲಯದಲ್ಲಿ ತರಬೇತಿಗಾಗಿ ಬಳಸಲು ಯಾವುದೇ ಅಡ್ಡಿ ಇಲ್ಲ ಎಂದು ಮಿಲಿಟರಿ ವೈಮಾನಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಪಿಎಲ್​ಎ ಯುದ್ಧವಿಮಾನ ಗುರುತಿಸುವ ರೇಡಾರ್​ಗಳು ಅಮೆರಿಕದ ವಾಯುಪಡೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಅಲ್ಲದೆ, ರಫೇಲ್​ ಯುದ್ಧವಿಮಾನಗಳ ಅಭ್ಯಾಸದ ವೇಳೆಯ ಸಿಗ್ನೇಚರ್​ ಮತ್ತು ದಾಳಿ ಮಾಡುವ ಸಂದರ್ಭದಲ್ಲಿ ಸಿಗ್ನೇಚರ್​ಗಳು ಭಿನ್ನವಾಗಿರುತ್ತವೆ. ಪಿಎಲ್​ಎ ಯೋಧರು ಅಕ್ಸಾಯ್​ ಚಿನ್​ನಲ್ಲಿ ಇರಿಸಿರುವ ವಿದ್ಯುನ್ಮಾನ ಬೇಹುಗಾರಿಕಾ ರೇಡಾರ್​ಗಳು ರಫೇಲ್​ನ ಸಿಗ್ನಲ್​ಗಳನ್ನು ಗ್ರಹಿಸಿದರೂ ಏನೂ ಸಮಸ್ಯೆಯಾಗುವುದಿಲ್ಲ ಎಂಬುದು ಇವರ ವಾದವಾಗಿದೆ.

    VIDEO | ಜಾಂಟಿ ರೋಡ್ಸ್​ಗೆ ಪೈಪೋಟಿ ನೀಡುವ ಫೀಲ್ಡರ್​ ಪತ್ತೆ ಹಚ್ಚಿದ ಸಚಿನ್​ ತೆಂಡುಲ್ಕರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts